ಬೆಳಗ್ಗೆ ಎದ್ದ ಕೂಡಲೇ ತಂದೆ, ತಾಯಿ, ಗುರು, ಹಿರಿಯರು ಅಂದರೆ ಮನೆಯಲ್ಲಿರುವ ಹಿರಿಯರಿಗೆ ನಮಸ್ಕರಿಸಿ. ಅಂದರೆ ಅವರಿಂದ ಆಶೀರ್ವಾದ (blessings from elders) ಪಡೆದು, ಕೆಲಸ ಮಾಡಿದ್ರೆ ದಿನ ಒಳ್ಳೆಯದಾಗಿರುತ್ತೆ.
ಪ್ರತಿದಿನ ದನಕ್ಕೆ ಅಥವಾ ಹಸುಗಳಿಗೆ ತಿನ್ನಲು ಬೆಲ್ಲ ಮತ್ತು ರೊಟ್ಟಿ ನೀಡಿ, ಸಾಧ್ಯವಾದರೆ ಅದಕ್ಕೆ ನಿತ್ಯವೂ ಪೂಜೆ ಮಾಡಿ, ಇದರಿಂದ ಕೆಲಸದಲ್ಲಿ ಶುಭವಾಗುತ್ತೆ.
ಪ್ರತಿದಿನ ನಾಯಿಗಳಿಗೆ ರೊಟ್ಟಿ ನೀಡಿ, ಹಾಗೆಯೇ ಪಕ್ಷಿಗಳಿಗೆ ಧಾನ್ಯಗಳನ್ನು ನೀಡುವುದು ಶುಭ ಎಂದು ಹೇಳಲಾಗುತ್ತದೆ.
ಗುರುವಾರ ತುಳಸಿ ಗಿಡಕ್ಕೆ (holy tulsi plant) ಹಸುವಿನ ಹಾಲನ್ನು ಅರ್ಪಿಸಿ. ಪ್ರತಿ ಗುರುವಾರ ಇದನ್ನು ಮಾಡಿ. ಇದನ್ನು ಮಾಡುವುದರಿಂದ, ನಿಮ್ಮ ಸಂಪತ್ತು (Weatlh) ಎಂದಿಗೂ ಕಡಿಮೆಯಾಗುವುದಿಲ್ಲ. ತುಳಸಿ ಮಾತೆಯನು ನಿತ್ಯ ಪೂಜಿಸಿದರೂ ಉತ್ತಮ.
ವಾಸ್ತು ಪ್ರಕಾರ, ಮನೆಯ ಮುಖ್ಯ ದ್ವಾರದಲ್ಲಿ ಶೂ ಸ್ಟ್ಯಾಂಡ್ (shoe stand) ಅನ್ನು ಎಂದಿಗೂ ಇಡಬಾರದು. ನಿಮಗೆ ಸ್ಥಳಾವಕಾಶವಿಲ್ಲದಿದ್ದರೆ, ಮನೆಯ ಮುಖ್ಯ ಬಾಗಿಲಿನಲ್ಲಿ ಶೂ ಸ್ಟ್ಯಾಂಡ್ ಇಡಬೇಕಾದ ಅನಿವಾರ್ಯತೆ ಇದ್ದರೆ, ಅದನ್ನು ಪಶ್ಚಿಮ ಅಥವಾ ನೈಋತ್ಯ ದಿಕ್ಕಿನಲ್ಲಿ ಇಡಬೇಕು.
ವಾಸ್ತುವಿನಲ್ಲಿ ಮಲಗುವಾಗ ಕನ್ನಡಿಯಲ್ಲಿ ನಿಮ್ಮ ನೆರಳನ್ನು ಕಾಣುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ. ಇದು ಗಂಡ ಮತ್ತು ಹೆಂಡತಿಯ ನಡುವೆ ಸಂಘರ್ಷವನ್ನು ಸೃಷ್ಟಿಸುತ್ತದೆ. ನಿಮ್ಮ ಮಲಗುವ ಕೋಣೆಯಲ್ಲಿ ಹಾಸಿಗೆಯ ಸರಿಯಾದ ಎದುರು, ಅಥವಾ ಕನ್ನಡಿಯಲ್ಲಿ ಕಾಣುವಂತೆ ಹಾಸಿಗೆ ಹಾಕಬೇಡಿ.
ವಾಸ್ತು ಪ್ರಕಾರ, (vastu tips) ಮನೆಯಲ್ಲಿ ಹಸಿರು ಸಸ್ಯಗಳನ್ನು ನೆಡಬೇಕು. ಸಕಾರಾತ್ಮಕತೆಯನ್ನು (Positive Vibes) ಹೆಚ್ಚಿಸಲು ಇವು ಸಹಾಯಕ. ವಿಶೇಷವಾಗಿ ಆಗ್ನೇಯ ದಿಕ್ಕಿನ ಮೂಲೆಯಲ್ಲಿ, ಹಸಿರು ಸಸ್ಯವನ್ನು ಇಡಬೇಕು.
ಬೆಳಿಗ್ಗೆ ಬೇಗ ಎದ್ದು ಪೂರ್ವ ದಿಕ್ಕಿನಲ್ಲಿ ಎಲ್ಲಾ ಕಿಟಕಿಗಳು ಮತ್ತು ಬಾಗಿಲುಗಳನ್ನು ತೆರೆಯಿರಿ. ಇದು ಮನೆಯಲ್ಲಿ ಸಕಾರಾತ್ಮಕತೆಯ (positivity) ಹರಿವನ್ನು ಹೆಚ್ಚಿಸುತ್ತದೆ. ಜೊತೆಗೆ ನಿಮಗೂ ಶುಭ ಫಲ ಸಿಗುತ್ತದೆ.