ನವವಿವಾಹಿತ ದಂಪತಿ ಕೋಣೆಯಲ್ಲಿ ಇರಲೇಬೇಕಾದ 5 ವಸ್ತುಗಳು; ಮದ್ವೆಗೆ ಇವುಗಳನ್ನೇ ಕೊಡಿ

Published : Nov 15, 2026, 12:23 PM IST

ಮದುವೆಯ ನಂತರ ನವದಂಪತಿಗಳ ಬೆಡ್‌ರೂಮ್ ಸುಂದರವಾಗಿರಲು ಮತ್ತು ದಂಪತಿಗಳ ನಡುವೆ ಪ್ರೀತಿ ಹೆಚ್ಚಿಸಲು ವಾಸ್ತುಶಾಸ್ತ್ರದ ಪ್ರಕಾರ 5 ವಸ್ತುಗಳನ್ನು ಇಡಬೇಕು. ಈ ವಸ್ತುಗಳನ್ನು ಇಡುವುದರಿಂದ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

PREV
16
ನವದಂಪತಿಯ ಬೆಡ್‌ರೂಮ್

ಮದುವೆ ನಂತರ ತಮ್ಮ ಕೋಣೆ ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಕೋಣೆಯನ್ನು ಬಣ್ಣ ಬಣ್ಣದ ಲೈಟ್, ಹೂಗಳಿಂದ ಅಲಂಕರಿಸುತ್ತಾರೆ. ಅಲಂಕಾರ ಮಾಡುವಾಗ ತಪ್ಪದೇ ನವದಂಪತಿ ಮಲಗುವ ಕೋಣೆಯಲ್ಲಿ ಐದು ವಸ್ತಗಳನ್ನಿಡಬೇಕೆಂದು ವಾಸ್ತುಶಾಸ್ತ್ರ ಹೇಳುತ್ತದೆ.

26
1.ರಾಧಾ-ಕೃಷ್ಣ ಜೋಡಿಯ ಚಿತ್ರ

ನವದಂಪತಿ ಕೋಣೆಯಲ್ಲಿ ರಾಧಾ-ಕೃಷ್ಣ ಜೋಡಿ ಫೋಟೋ ಇರಿಸೋದನ್ನು ಶುಭಕರ ಎಂದು ಪರಿಗಣಿಸಲಾಗುತ್ತದೆ. ಈ ಪಟವನ್ನು ಪ್ರೀತಿ ಮತ್ತು ವಿಶ್ವಾಸದ ಸಂಕೇತ ಎಂದು ಹೇಳಲಾಗುತ್ತದೆ. ಈ ಚಿತ್ರ ಗಂಡ-ಹೆಂಡ್ತಿ ನಡುವಿನ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ.

36
2.ಜೋಡಿ ಹಂಸ ಅಥವಾ ಲವ್ ಬರ್ಡ್ಸ್ ವಿಗ್ರಹ

ಜೋಡಿ ಹಂಸ ಅಥವಾ ಲವ್ ಬರ್ಡ್ಸ್ ವಿಗ್ರಹಗಳು ದಂಪತಿ ನಡುವಿನ ಪ್ರೇಮದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಬೆಡ್‌ರೂಮ್ ಅಲಂಕರಗೊಳಿಸುವ ಸಂದರ್ಭದಲ್ಲಿ ಈ ಪ್ರತಿಮೆಯನ್ನಿಟ್ಟುಕೊಳ್ಳಿ. ಒಂದೇ ಪಕ್ಷಿಯ ಫೋಟೋ ಅಥವಾ ವಿಗ್ರಹ ಇರಿಸೋದು ಅಶುಭಕರ ಎಂದು ಪರಿಗಣಿಸಲಾಗುತ್ತದೆ.

46
3.ಫ್ರೆಶ್ ಹೂ

ನವವಿವಾಹಿತ ದಂಪತಿಗಳ ಕೋಣೆಯಲ್ಲಿ ತಾಜಾ ಹೂವುಗಳನ್ನು ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಈ ಹೂಗಳು ಇಡೀ ಕೋಣೆಯನ್ನು ಪರಿಮಳಯುಕ್ತವನ್ನಾಗಿ ಮಾಡುತ್ತವೆ. ಇದರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ. ಪ್ಲಾಸ್ಟಿಕ್ ಬದಲಾಗಿ ಪರಿಮಳಯುಕ್ತವಾದ ಮಲ್ಲಿಗೆ, ಸಂಪಿಗೆ, ಗುಲಾಬಿ ಅಂತಹ ಹೂಗಳನ್ನು ಆಯ್ಕೆ ಮಾಡಿಕೊಳ್ಳಿ.

56
4.ಗುಲಾಬಿ ಬಣ್ಣದ ವಸ್ತುಗಳು

ಗುಲಾಬಿ ಪ್ರೀತಿಯ ಸಂಕೇತ ಮತ್ತು ಈ ಬಣ್ಣವು ಎಲ್ಲರ ಆಕರ್ಷಣೆಯನ್ನು ತನ್ನತ್ತ ಸೆಳೆದುಕೊಳ್ಳುವ ಶಕ್ತಿಯನ್ನು ಹೊಂದಿದೆ. ಮಲಗುವ ಕೋಣೆಯಲ್ಲಿ ಗುಲಾಬಿ ಬಣ್ಣದ ಬೆಡ್‌ಶೀಟ್, ದಿಂಬು, ಕುಶನ್ ಕವರ್ ಅಥವಾ ಕಿಟಕಿ ಪರದೆಗಳನ್ನು ಬಳಸಿ. ಬೆಡ್‌ರೂಮ್‌ ನಲ್ಲಿ ಗುಲಾಬಿ ಸೇರಿದಂತೆ ತಿಳಿ ಬಣ್ಣದ ವಸ್ತುಗಳನ್ನು ಬಳಕೆ ಮಾಡೋದು ಶುಭ ಸಂಕೇತ ಎಂದು ಹೇಳಲಾಗುತ್ತದೆ.

66
5.ಜೋಡಿ ವಸ್ತುಗಳು

ನವವಿವಾಹಿತ ದಂಪತಿಗಳ ಕೋಣೆಯಲ್ಲಿ ಜೋಡಿಯಾಗಿರುವ ವಸ್ತುಗಳನ್ನೀಡುವುದು ಮಂಗಳಕರ ಎನ್ನಲಾಗುತ್ತದೆ. ಉದಾಹರಣೆಗೆ ಜೋಡಿ ದ್ವೀಪ, ಜೋಡಿ ಹೂವಿನ ಕುಂಡಗಳು, ಜೋಡಿ ಪ್ರತಿಮೆ, ಎರಡು ಕುರ್ಚಿ. ಇವುಗಳು ಕೋಣೆಯ ಅಲಂಕಾರ ಹೆಚ್ಚಿಸೋದರ ಜೊತೆ ನವದಂಪತಿಯ ಆದ್ಯತೆಗಳನ್ನು ಪೂರೈಸುತ್ತದೆ.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.

Read more Photos on
click me!

Recommended Stories