ತುಳಸಿಯಿಂದ ಹಿಡಿದು ಲಕ್ಕಿ ಬ್ಯಾಂಬೂವರೆಗೆ, ಈ ಐದು ಶುಭ ಗಿಡಗಳು ಮನೆಗೆ ಸಂಪತ್ತು, ಸಮೃದ್ಧಿ ಮತ್ತು ಧನಾತ್ಮಕ ಶಕ್ತಿಯನ್ನು ತರುತ್ತವೆ. ಜೊತೆಗೆ ಮನೆಯ ಅಂದವನ್ನೂ ಹೆಚ್ಚಿಸುತ್ತವೆ. ಯಾವುದು ಆ ಗಿಡಗಳು..
ಹೋಲಿ ಬೇಸಿಲ್ ಎಂದೂ ಕರೆಯಲ್ಪಡುವ ತುಳಸಿ ಭಾರತೀಯ ಮನೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ವಾಸ್ತು ಪ್ರಕಾರ, ಮನೆಯಲ್ಲಿ ಆರೋಗ್ಯಕರ ತುಳಸಿ ಗಿಡವನ್ನು ಬೆಳೆಸುವುದು ಧನಾತ್ಮಕ ಶಕ್ತಿ, ಆಧ್ಯಾತ್ಮಿಕತೆ ಮತ್ತು ಸಮೃದ್ಧಿಯನ್ನು ತರುತ್ತದೆ. ಸಾಕಷ್ಟು ಬಿಸಿಲು ಬೀಳುವ ಜಾಗದಲ್ಲಿ ಇದನ್ನು ಇಡಿ ಮತ್ತು ಮಣ್ಣು ಹೆಚ್ಚು ಒದ್ದೆಯಾಗದಂತೆ ನಿಯಮಿತವಾಗಿ ನೀರು ಹಾಕಿ.
25
ಮನಿ ಪ್ಲಾಂಟ್: ಸಮೃದ್ಧಿ ಆಕರ್ಷಿಸುವ ಜನಪ್ರಿಯ ಗಿಡ
ಮನಿ ಪ್ಲಾಂಟ್ ಆಕರ್ಷಕ ಹೃದಯಾಕಾರದ ಎಲೆಗಳನ್ನು ಹೊಂದಿದ್ದು, ನಿರ್ವಹಣೆ ಸುಲಭವಾದ್ದರಿಂದ ಮನೆಗಳಲ್ಲಿ ಬೆಳೆಸಲು ಜನಪ್ರಿಯವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಇದು ಆರ್ಥಿಕ ಬೆಳವಣಿಗೆ, ಸಮೃದ್ಧಿ ಮತ್ತು ಅದೃಷ್ಟದ ಸಂಕೇತವಾಗಿದೆ. ಇದನ್ನು ಮಣ್ಣು ಅಥವಾ ನೀರಿನಲ್ಲಿ ಬೆಳೆಸಬಹುದು ಮತ್ತು ನೇರ ಬಿಸಿಲು ಬೀಳದ ಬೆಳಕಿರುವ ಜಾಗದಲ್ಲಿ ಚೆನ್ನಾಗಿ ಬೆಳೆಯುತ್ತದೆ.
35
ಲಕ್ಕಿ ಬ್ಯಾಂಬೂ: ಯಶಸ್ಸು ಮತ್ತು ಸಾಮರಸ್ಯ ತರುವ ಗಿಡ
ಸಾಂಪ್ರದಾಯಿಕ ಫೆಂಗ್ ಶೂಯಿಯಲ್ಲಿ ಲಕ್ಕಿ ಬ್ಯಾಂಬೂ ಅದೃಷ್ಟ, ಸಾಮರಸ್ಯ ಮತ್ತು ಯಶಸ್ಸಿನ ಸಂಕೇತವಾಗಿದೆ. ಇದರ ಕಾಂಡಗಳ ಸಂಖ್ಯೆ ಬೇರೆ ಬೇರೆ ಸಾಂಕೇತಿಕ ಅರ್ಥಗಳನ್ನು ಹೊಂದಿದೆ. ಇದನ್ನು ನೀರು ಅಥವಾ ಮಣ್ಣಿನಲ್ಲಿ ಬೆಳೆಸಬಹುದು ಮತ್ತು ನೇರ ಬಿಸಿಲು ಬೀಳದ ಬೆಳಕಿರುವ ಜಾಗದಲ್ಲಿ ಇಟ್ಟರೆ ಚೆನ್ನಾಗಿ ಬೆಳೆಯುತ್ತದೆ.
ಗುಲಾಬಿ: ಪ್ರೀತಿ, ಸೌಂದರ್ಯ ಮತ್ತು ಧನಾತ್ಮಕ ಶಕ್ತಿಯ ಸಂಕೇತ
ಬಣ್ಣಬಣ್ಣದ ಹೂವು ಬಿಡುವ ಗುಲಾಬಿ ಗಿಡಗಳು ಪ್ರೀತಿ, ಸಂತೋಷ ಮತ್ತು ಸೌಂದರ್ಯದ ಸಂಕೇತ. ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಹೂವಿನ ಗಿಡಗಳು ಮನೆಗೆ ಧನಾತ್ಮಕ ಶಕ್ತಿ, ಸಾಮರಸ್ಯ ಮತ್ತು ಉತ್ಸಾಹವನ್ನು ತರುತ್ತವೆ. ಗುಲಾಬಿಯನ್ನು ನೀರು ಬಸಿದು ಹೋಗುವ ಮಣ್ಣಿರುವ ಕುಂಡಗಳಲ್ಲಿ ಬೆಳೆಸಿ ಮತ್ತು ಕನಿಷ್ಠ 5 ರಿಂದ 6 ಗಂಟೆ ಬಿಸಿಲು ಬೀಳುವ ಜಾಗದಲ್ಲಿ ಇಡಿ.
55
ಪಾರಿಜಾತ: ಅದೃಷ್ಟ ತರುವ ಪವಿತ್ರ ಹೂವಿನ ಗಿಡ
ಪಾರಿಜಾತ ಅಥವಾ ನೈಟ್-ಫ್ಲವರಿಂಗ್ ಜಾಸ್ಮಿನ್ ಭಾರತೀಯ ಪುರಾಣಗಳಲ್ಲಿ ವಿಶೇಷ ಸ್ಥಾನ ಪಡೆದಿದೆ ಮತ್ತು ಪವಿತ್ರ ಗಿಡವೆಂದು ಪರಿಗಣಿಸಲಾಗಿದೆ. ಕಿತ್ತಳೆ ಬಣ್ಣದ ಕೇಂದ್ರವನ್ನು ಹೊಂದಿರುವ ಇದರ ಪರಿಮಳಯುಕ್ತ ಬಿಳಿ ಹೂವುಗಳು ಶುದ್ಧತೆ, ಆಧ್ಯಾತ್ಮಿಕತೆ ಮತ್ತು ಶುಭ ಸಂಕೇತವಾಗಿವೆ. ಗಿಡ ಚೆನ್ನಾಗಿ ಬೆಳೆಯಲು ನೀರು ಸರಿಯಾಗಿ ಬಸಿದು ಹೋಗುವ ಮಣ್ಣಿನಲ್ಲಿ ಮತ್ತು ಬಿಸಿಲು ಬೀಳುವ ಜಾಗದಲ್ಲಿ ಇದನ್ನು ನೆಡಿ.