ಈ ವಾಸ್ತು ಸಲಹೆಗಳಿಂದ ಕರಿಯರ್‌ನಲ್ಲಿ ಉನ್ನತ ಸ್ಥಾನಕ್ಕೇರಬಹುದು ನೋಡಿ

First Published | Feb 10, 2021, 2:05 PM IST

ವೃತ್ತಿ ಜೀವನದ ಬಗ್ಗೆ ನಾವೆಲ್ಲರೂ ತುಂಬಾ ಕಾಳಜಿ ವಹಿಸುತ್ತೇವೆ. ಕೋವಿಡ್ ನಂತರ ಈ ಕಾಳಜಿ ಇನ್ನೂ ಹೆಚ್ಚಾಗಿದೆ. ಕೆಲವೊಮ್ಮೆ ಸತತ ಪ್ರಯತ್ನದ ನಂತರವೂ ಯಶಸ್ಸು ಸಾಧಿಸುವುದಿಲ್ಲ. ಇದು ವೃತ್ತಿ ಜೀವನದಲ್ಲಿ ಒಂದು ಅಡೆ ತಡೆಗೆ ಕಾರಣವಾಗುತ್ತದೆ. ಹಾಗಂಥ ಪ್ರಯತ್ನದಲ್ಲಿ ಯಾವುದೇ ಕೊರತೆ ಇಲ್ಲವೆಂದಲ್ಲ. ಎಷ್ಟೇ ಕೆಲಸ ಮಾಡಿದರೂ ಕೆಲವೊಮ್ಮೆ ಸಾಲು, ಸಾಲು ಸಮಸ್ಯೆಗಳಿಂದ ಅಥವಾ ಯಾವುದೋ ಅಡೆತಡೆಗಳಿಂದಾಗಿ ಹಿಡಿದ ಕೆಲಸ ಪೂರ್ಣಗೊಳ್ಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ವಾಸ್ತುದೋಷವೂ ಕಾರಣ ಇರಬಹುದು. ಇದಕ್ಕೆ ಸಿಂಪಲ್ ಪರಿಹಾರಗಳು ಇಲ್ಲಿವೆ.

ವಾಸ್ತು ದೋಷಗಳು ನಮ್ಮ ಪ್ರಗತಿಗೆ ಅಡ್ಡಿ ಉಂಟು ಮಾಡುತ್ತದೆ. ಪ್ರಯತ್ನದ ಜೊತೆಗೆ ವಾಸ್ತು ಸರಿಯಾಗಿ ಇದ್ದರೆ, ಮಾತ್ರ ಕರಿಯರ್ನಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಆದರೆ ಈ ವಾಸ್ತುದೋಷಗಳನ್ನು ಸರಿಪಡಿಸಲು ಕೆಲವು ಕ್ರಮಗಳನ್ನು ಕೈಗೊಳ್ಳಬಹುದು. ಈ ಕ್ರಮಗಳ ಬಗ್ಗೆ ತಿಳಿಯೋಣ.
undefined
ಮನೆಯಿಂದ ಕೆಲಸ ಮಾಡುತ್ತಿದ್ದರೆ, ಕೆಲಸದ ಸ್ಥಳಮಲಗುವ ಕೋಣೆಯಲ್ಲಿ ಇರ ಕೂಡದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
undefined
Tap to resize

ಕಛೇರಿಯಲ್ಲಿ ಕೆಲಸ ಮಾಡುವಾಗ, ಕುರ್ಚಿಯ ಮೇಲೆ ಎತ್ತರದ ಬೆನ್ನಿನ, ಅಂದರೆ ನಿಮ್ಮನ್ನು ನೇರವಾಗಿ ಕೂರಿಸುವಂತಹ ಕುರ್ಚಿಯ ಮೇಲೆ ಕುಳಿತುಕೊಳ್ಳಬೇಕು. ಮುಖ್ಯ ದ್ವಾರಕ್ಕೆ ಬೆನ್ನು ಮಾಡಿ ಕುಳಿತುಕೊಳ್ಳಬೇಕು. ಏಕೆಂದರೆ ಈ ದ್ವಾರದಿಂದ ಲಕ್ಷ್ಮೀ ದೇವಿಆಗಮನವಾಗುತ್ತದೆ. ಅಲ್ಲಿ ಪಾಸಿಟಿವ್ ಎನರ್ಜಿಯೂ ಬರುತ್ತದೆ.
undefined
ಡೆಸ್ಕ್ ಮರವಾಗಿದ್ದರೆ ಉತ್ತಮ. ಗಾಜು ಇನ್ನೂ ಉತ್ತಮವೆಂದು ಪರಿಗಣಿಸಲಾಗಿದೆ. ಕಚೇರಿಟೇಬಲ್ನಲ್ಲಿ ಕ್ರಿಸ್ಟಲ್ ಬಾಲ್ ಅಥವಾ ಪಿರಮಿಡ್ ಇರಬೇಕು. ಇದು ಪ್ರಗತಿಯನ್ನು ಬಿಂಬಿಸುವ ಸಂಕೇತಮತ್ತು ಹಣವನ್ನು ಆಕರ್ಷಿಸುತ್ತದೆ.
undefined
ಲೇಖಕ, ವಿದ್ವಾಂಸ ಅಥವಾ ಕಲಾವಿದರ ಕಛೇರಿಯ ಆಸನದ ಹಿಂದೆ ಗೋಡೆ ಇರಬೇಕು. ಹಾಗೆ ಮಾಡಿದರೆ ವ್ಯಕ್ತಿಯ ಧೈರ್ಯ ಹೆಚ್ಚುತ್ತದೆ. ಇದರಿಂದ ವ್ಯಕ್ತಿಗೆ ಉತ್ತಮ ಫಲಿತಾಂಶ ಸಿಗುತ್ತದೆ. ಆಸನದ ಜಾಗಕಚೇರಿಯ ಮುಖ್ಯ ದ್ವಾರದಿಂದ ದೂರ ಇರಬೇಕು.
undefined
ಸಹೋದ್ಯೋಗಿಗಳೊಂದಿಗೆ ಮೀಟಿಂಗ್ ಮಾಡುತ್ತಿದ್ದರೆ, ಕಚೇರಿಯಲ್ಲಿ ಮೀಟಿಂಗ್ ರೂಮ್‌ನಲ್ಲಿ ಟೇಬಲ್ ಓವಲ್ ಶೇಪ್‌ನಲ್ಲಿ ಇರಬೇಕು. ಕಾನ್ಫರೆನ್ಸ್ ರೂಮಿನಲ್ಲಿ ಎಂಟ್ರಿ ಗೇಟ್ ಮುಂದೆ ಕುಳಿತಿರಬಾರದು.
undefined
ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಜಾಗದಲ್ಲಿ, ತಲೆಮೇಲೆ ಬೀಮ್ (ಕಟ್ಟಡ ಗಟ್ಟಿಯಾಗಿರಲು ಹಾಕುವಂತ ಬ್ರಿಕ್ಸ್) ಇರಬಾರದು.ಇದು ಯಶಸ್ಸಿನ ದಾರಿಗೆ ಅಡ್ಡಿ ಉಂಟು ಮಾಡುತ್ತದೆ. ಜೊತೆಗೆ ಕಚೇರಿಯ ಡೆಸ್ಕ್ ಚೌಕಾಕಾರದಲ್ಲಿರಬೇಕು.
undefined
ಈಶಾನ್ಯ ದಿಕ್ಕನ್ನು ವೃತ್ತಿ ಜೀವನದ ದಿಕ್ಕು ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಮನೆ ಅಥವಾ ಕಚೇರಿಯ ಈಶಾನ್ಯ ದಿಕ್ಕಿನಲ್ಲಿ ಹೂವು ಅಥವಾ ನೀರಿನ ಚಿತ್ರವನ್ನು ಇಡಿ.
undefined

Latest Videos

click me!