ಶಿರಸಿಯ ಡಾ. ರಶ್ಮಿ ಹೆಗಡೆ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ನೇಮಕ!

Published : Sep 18, 2025, 04:27 PM IST

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಡಾ. ರಶ್ಮಿ ಹೆಗಡೆ ಭಾರತೀಯ ಸೇನೆಯ ಮಿಲಿಟರಿ ಆಸ್ಪತ್ರೆಯಲ್ಲಿ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದಾರೆ. ಎಂಬಿಬಿಎಸ್ ಮತ್ತು ಎಂಡಿ ಪದವಿ ಪಡೆದ ಇವರು, ಸಿಕಂದರಾಬಾದ್‌ನಲ್ಲಿ ದೇಶ ಕಾಯುವ ಸೈನಿಕರ ವೈದ್ಯಕೀಯ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.

PREV
14
ಭಾರತೀಯ ಸೇನೆಯ ಮಿಲಿಟರಿ ಆಸ್ಪತ್ರೆಯಲ್ಲಿ ಕ್ಯಾಪ್ಟನ್

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಣ್ಣು ಮಗಳೊಬ್ಬಳು ಭಾರತೀಯ ಸೇನೆಯ ಮಿಲಿಟರಿ ಆಸ್ಪತ್ರೆಯಲ್ಲಿ ಕ್ಯಾಪ್ಟನ್ ನೇಮಕಗೊಂಡಿದ್ದಾರೆ. ಆಂಧ್ರ ಪ್ರದೇಶದ ಸಿಕಂದರಾಬಾದಿನ ಮಿಲಿಟರಿ ಆಸ್ಪತ್ರೆಯಲ್ಲಿ ಡಾ.ರಶ್ಮಿ ಹೆಗಡೆ ಇದೀಗ ಸೈನಿಕರ ನೆರವಿನ ಸೇವೆಗೆ ಕಂಕಣತೊಟ್ಟಿದ್ದಾರೆ.

24
ಗದಗನಲ್ಲಿ MBBS ಪದವಿ

ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂಬಿಬಿಎಸ್ ಮುಗಿಸಿ, ಕಳೆದ ಜನವರಿ ತಿಂಗಳಿನಲ್ಲಿ ಕೆಎಂಸಿ ಹುಬ್ಬಳ್ಳಿಯಿಂದ ತಮ್ಮ ಎಂಡಿ ಪದವಿ ಗಳಿಸಿದ್ದರು. 

34
ಡಾ. ಲಕ್ಷ್ಮಿ ನಾರಾಯಣ ಹೆಗಡೆ ಅವರ ಪುತ್ರಿ

ರಶ್ಮಿ ಹೆಗಡೆ ಶಿರಸಿ ತಾಲೂಕಿನ ಬೊಪ್ಪನಳ್ಳಿಯ ಬಾಗಲಕೋಟ ತೋಟಗಾರಿಕಾ ವಿಶ್ವವಿದ್ಯಾಲಯದ ರೋಹಿಣಿ, ವಿಶ್ರಾಂತ ಡಾ. ಲಕ್ಷ್ಮಿ ನಾರಾಯಣ ಹೆಗಡೆ ಅವರ ಪುತ್ರಿಯಾಗಿದ್ದಾರೆ.

44
ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ

ದೇಶ ಕಾಯುವ ಸೈನಿಕರ ಮತ್ತು ಅವರ ಕುಟುಂಬದವರ ವೈದ್ಯಕೀಯ ಸೇವೆಗೆ ತಮ್ಮನ್ನು ತೊಡಗಿಸಿಕೊಂಡು ಹಲವು ಯುವ ವೈದ್ಯರಿಗೆ ಮಾದರಿಯಾಗಿರುವುದು ಉಲ್ಲೇಖನೀಯ. ರಶ್ಮಿ ತಮ್ಮ ಪ್ರಾಥಮಿಕ ಆಭ್ಯಾಸವನ್ನು ಗೋಕಾಕಿನ ಕೆಎಲ್‌ಇ ಸಂಸ್ಥೆಯಲ್ಲಿ, ಪಿಯುಸಿಯನ್ನು ಶಿರಸಿಯ ಚೈತನ್ಯ ಮಹಾವಿದ್ಯಾಲಯದಲ್ಲಿ ಪೂರೈಸಿ 2015ನೇ ಇಸ್ವಿಯ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಮತ್ತು ರಾಜ್ಯಕ್ಕೆ 4ನೇ ಸ್ಥಾನ ಗಳಿಸಿದ್ದನ್ನು ಸ್ಮರಿಸಬಹುದು.

Read more Photos on
click me!

Recommended Stories