ಕನ್ನಡ ಚಿತ್ರರಂಗದ ಅದ್ಭುತ ನಟ ವನಿತಾ ವಾಸು ಧಾರಾವಾಹಿ ಲೋಕಕ್ಕೆ ಕಾಲಿಟ್ಟ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಅಕ್ಟಿವ್ ಆಗಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಾಧಾರೆ ಧಾರಾವಾಹಿಯಲ್ಲಿ ಶಕುಂತಲಾ ಪಾತ್ರದಲ್ಲಿ ವನಿತಾ ವಾಸು ಮಿಂಚುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ವನಿತಾ ವಾಸು ಕಾಲು ಮರಿದುಕೊಂಡಿದ್ದಾರೆ. ಸಣ್ಣ ಫ್ರ್ಯಾಕ್ಚರ್‌ನಿಂದ ದೊಡ್ಡ ಬ್ರೇಕ್ ಎಂದು ವನಿತಾ ವಾಸು ಬರೆದುಕೊಂಡಿದ್ದಾರೆ.
ಆಸ್ಪತ್ರೆಯಲ್ಲಿ ಕಾಲಿಗೆ ಚಿಕಿತ್ಸೆ ನೀಡುತ್ತಿರುವ ಫೋಟೋವನ್ನು ವನಿತಾ ವಾಸು ಹಂಚಿಕೊಂಡಿದ್ದಾರೆ. ಕಾಮೆಂಟ್ಸ್‌ನಲ್ಲಿ ನೆಟ್ಟಿಗರು ಬೇಸರ ಮಾಡಿಕೊಂಡಿದ್ದಾರೆ.
ದಯವಿಟ್ಟು ಚೇತರಿಸಿಕೊಳ್ಳಿ, ನಿಮ್ಮನ್ನು ಆದಷ್ಟು ಬೇಗ ತೆರೆ ಮೇಲೆ ನೋಡಬೇಕು, ಆರೋಗ್ಯ ಮುಖ್ಯ, ಕಾಲು ಹುಷಾರು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಶಕುಂತಲಾ ಪಾತ್ರ ಕಿರುತೆರೆ ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ. ರೇಶ್ಮೆ ಸೀರೆ, ವಿಭಿನ್ನ ಆಭರಣಗಳನ್ನು ಧರಿಸಿ ವನಿತಾ ವಾಸು ಮಿಂಚುತ್ತಾರೆ.