ಈ ಒಂದು ಕಾರಣಕ್ಕೆ ಬಿಗ್ ಬಾಸ್‌ ಮನೆಯಿಂದ ದೂರ ಉಳಿದ ಸಿಹಿ ಕಹಿ ಚಂದ್ರು ಪುತ್ರಿ?

First Published | Feb 7, 2021, 1:20 PM IST

ಬಿಗ್ ಬಾಸ್‌ ಸೀಸನ್‌ 8ರಲ್ಲಿ ಸಿಹಿ ಕಹಿ ಚಂದ್ರು ಪುತ್ರಿ ಹಿತಾ ಚಂದ್ರಶೇಖರ್ ಸ್ಪರ್ಧಿಸಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಈ ವಿಚಾರದ ಬಗ್ಗೆ ಹಿತಾ ಸ್ಪಷ್ಟನೆ ನೀಡಿದ್ದಾರೆ.
 

ನಟ ಸಿಹಿ ಕಹಿ ಚಂದ್ರು ಹಾಗೂ ಗೀತಾ ಪುತ್ರಿ ಹಿತಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಮುಂಬೈನಲ್ಲಿ ನೆಲೆಸಿದ್ದಾರೆ.
ಸಿನಿಮಾ ಹಾಗೂ ಜಾಹೀರಾತು ಚಿತ್ರೀಕರಣವಿದ್ದಾಗ ಬೆಂಗಳೂರು ಹಾಗೂ ಮುಂಬೈ ನಡುವೆ ಪ್ರಯಾಣ ಮಾಡುತ್ತಿದ್ದಾರೆ.
Tap to resize

ಬಣ್ಣದ ಲೋಕದಲ್ಲಿ ಬ್ಯುಸಿಯಾಗಿರುವ ಹಿತಾ ಸೀಸನ್‌ 8 ಬಿಬಿ ಮನೆ ಪ್ರವೇಶಿಸುತ್ತಾರೆ ಎಂಬ ಗಾಳಿ ಮಾತು ಕೇಳಿ ಬರುತ್ತಿದೆ.
ಕುಟುಂಬದವರ ಜೊತೆ ಹೆಚ್ಚಾಗಿ ಕನೆಕ್ಟ್ ಆಗಿರುವ ಕಾರಣ ಹೆಚ್ಚಿನ ದಿನಗಳ ಕಾಲ ಬಿಟ್ಟಿರಲು ಸಾಧ್ಯವಿಲ್ಲ ಎಂದಿದ್ದಾರೆ.
ಮನೆಯವರನ್ನು ಬಿಟ್ಟಿರುವ ಭಾವನೆಯಲ್ಲಿ ಟಾಸ್ಕ್ ನಿಭಾಯಿಸುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಶೋನಿಂದ ದೂರ ಉಳಿದಿದ್ದಾರೆ.
ಶೀಘ್ರವೇ ಆರಂಭವಾಗಲಿರುವ ಶೋನಲ್ಲಿ ಬ್ರಹ್ಮಗಂಟು ಗೀತಾ, ಸರಿಗಮಪ ಹನುಮಂತು ಹಾಗೂ ವಿಠಲ್ ರಾವ್ ರವಿಶಂಕರ್ ಗೌರ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

Latest Videos

click me!