ಕರ್ನಾಟಕ ಕ್ರಶ್ ಆಗಿದ್ದ ಸಂಗೀತಾ, ಇಂತ ಫ್ರೆಂಡ್ ಯಾರಿಗೂ ಕೊಡ್ಬೇಡಿ ದೇವ್ರೇ ಅಂತಿದ್ದಾರೆ ಜನ

Published : Nov 22, 2023, 12:22 PM IST

ಬಿಗ್ ಬಾಸ್ ಕನ್ನಡ ಸೀಸನ್ 10 ರ ಇತ್ತೀಚಿನ ಪ್ರೋಮೋಗಳನ್ನು ನೋಡುತ್ತಿದ್ದಂತೆ ಜನರು ಸಂಗೀತ ಎದುರು ತಿರುಗಿ ಬಿದ್ದಿದ್ದಾರೆ, ಕರ್ನಾಟಕ ಕ್ರಶ್ ಆಗಿದ್ದ ಸಂಗೀತ, ಇದೀಗ ಎರಡು ತಲೆ ಹಾವು ಎಂದು ಜನರು ಕಿಡಿ ಕಾಡ್ತಿದ್ದಾರೆ.   

PREV
19
ಕರ್ನಾಟಕ ಕ್ರಶ್ ಆಗಿದ್ದ ಸಂಗೀತಾ, ಇಂತ ಫ್ರೆಂಡ್ ಯಾರಿಗೂ ಕೊಡ್ಬೇಡಿ ದೇವ್ರೇ ಅಂತಿದ್ದಾರೆ ಜನ

 ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Season 10) ದಿನದಿಂದ ದಿನಕ್ಕೆ ಸದ್ದು ಮಾಡುತ್ತಲೇ ಇದೆ. ಪ್ರತಿದಿನ ಗಲಾಟೆ, ಜಗಳದಿಂದಾನೇ ಈ ಸೀಸನ್ ಸುದ್ದಿಯಾಗುತ್ತಿದೆ. ಇದೀಗ ಕರ್ನಾಟಕದ ಕ್ರಶ್ ಆಗಿದ್ದ ಸಂಗೀತಾ ಶೃಂಗೇರಿ ವಿರುದ್ಧ ಪ್ರೇಕ್ಷಕರು ತಿರುಗಿ ಬಿದ್ದಿದ್ದಾರೆ. 

29

ಟಾಪ್ 3 ರಲ್ಲಿ ಸಂಗೀತ ಇರಲೇಬೇಕು ಎಂದು ಹೇಳ್ತಿದ್ದ ಪ್ರೇಕ್ಷಕರು ಇದೀಗ ಇತ್ತೀಚಿನ ಬಿಗ್ ಬಾಸ್ ಪ್ರೋಮೋ (promo) ನೋಡಿದ ಮೇಲೆ ಮಾತ್ರ ಸಂಗೀತ ವಿರುದ್ಧ ನೆಗೆಟಿವ್ ಕಾಮೆಂಟ್‌ಗಳ ಸುರಿಮಳೆ ಹೆಚ್ಚುತ್ತಲೇ ಇದೆ. ಅಷ್ಟಕ್ಕೂ ಆಗಿರೋದಾದರೂ ಏನು?

39

ಫ್ರೆಂಡ್ಸ್ ಆಗಿದ್ದ ತನಿಷಾ, ಸಂಗೀತಾ, ಕಾರ್ತಿಕ್ ಇದೀಗ ಬೇರೆ ಬೇರೆಯಾಗಿದ್ದಾರೆ. ಅಲ್ಲದೇ ಬೇರೆ ತಂಡ ಸೇರಿಕೊಂಡಿರುವ ಸಂಗೀತಾ ಟಾಸ್ಕ್ ನೀಡೋ ವಿಚಾರದಲ್ಲಿ ಎದುರಾಳಿ ತಂಡದಲ್ಲಿದ್ದ ತುಕಾಲಿ ಸಂತೋಷ್ ಮತ್ತು ಕಾರ್ತಿಕ್ ಗೆ ಕೂದಲು ಬೋಳಿಸುವ ಚಾಲೆಂಜ್ (head shave) ಮತ್ತು ತನಿಷಾ ಮತ್ತು ವರ್ತೂರ್ ಸಂತೋಷ್ ಅವರಿಗೆ ಮೆಣಸಿನಕಾಯಿ ತಿನ್ನೋ ಚಾಲೆಂಜ್ ನೀಡಿದ್ದಾರೆ. 

49

ಪ್ರೋಮೋ ನೋಡಿದ ಮೇಲೆ ಸಂಗೀತ ಮೇಲೆ ಕಿಡಿ ಕಾರುತ್ತಿರುವ ಪ್ರೇಕ್ಷಕರು ಸಂಗೀತ ಎರಡು ತಲೆ ಹಾವು, ಸಂಗೀತಾ ಫೇಕ್ ಮತ್ತು ಸ್ವಾರ್ಥಿ, ಸಂಗೀತಾ ಚಮಚಾ ಜೊತೆ ಸೇರಿ ಚಮಚಾ ಆಗಿದ್ದಾಳೆ, ಆಕೆ ಉಸರವಳ್ಳಿ ಎಂದೆಲ್ಲಾ ಕಾಮೆಂಟ್ (negative comment)  ಮಾಡಿದ್ದಾರೆ. 

59

ಇನ್ನೂ ಕೆಲವರು ವಿನಯ್ ತರ ಶತ್ರು ಇದ್ರೂ ಪರ್ವಾಗಿಲ್ಲ ಆದ್ರೆ ಸಂಗೀತ ತರ ಫ್ರೆಂಡ್ ಬೇಡ ಎಂದು ಸಹ ಹೇಳಿದ್ದಾರೆ. ಅಲ್ಲದೇ ಮತ್ತೊಬ್ಬರು ಕಾಮೆಂಟ್ ಮಾಡಿ ಇಷ್ಟು ದಿನ ಸಂಗೀತ ಫ್ಯಾನ್ಸ್ ಆಗಿದ್ದ ನಮ್ಗೆ ಇದು ಇಷ್ಟ ಆಗ್ತಾ ಇಲ್ಲ, ಸಂಗೀತಾ ನೀವು ಮಾಡ್ತಿರೋದು ತಪ್ಪು ಅಂದಿದ್ದಾರೆ. 
 

69

ಮತ್ತೊಬ್ಬರು ಕಾಮೆಂಟ್ ಮಾಡಿ ಅಯ್ಯೊ ದುರ್ವಿದಿಯೆ... ಚಿ so cheap ಸಂಗೀತ ನೀನು.. easily ಚಮ್ಚ ಜೊತೆ Flip ಆಗಿ ಪ್ರೂ ಮಾಡಿದ್ಯ. ಇದು ನಿನ್ನ ನಿಜವಾದ ಬಣ್ಣ...ನೀನು ಕಾರ್ತಿಕ್ ನ ಕಾಲಿಗೆ ಸಮಾನ...ಆ ಕಾರ್ತಿಕ್ ನಿನ್ನ ಜೊತೆ ಆಡಿದ್ರೆ ಬಿಗ್ಬಾಸ್ ಗೆಲ್ಲೋದು ತುಂಬಾ ಕಷ್ಟ ಇದೆ... ಅಸಮರ್ಥ ರ ಜೊತೆಲಿ ಇದ್ದ ನಿನ್ನ ತನಿಷ ನನ್ನೇ ನಾಮಿನೇಟ್ ಮಾಡಿದಾಗ ಗೊತ್ತಾಯ್ತು ನಿನ್ನ ಚೀಪ್ ಆ್ಯಟಿಟ್ಯೂಡ್ ಎಂದಿದ್ದಾರೆ.

79

ಇನ್ನೊಬ್ಬರು ಸಂಗೀತಾ ತನಗೆ ಸಿಗುತ್ತಿದ್ದ ಗೌರವವನ್ನು ತಾವೇ ತಿಪ್ಪೆಗೆ ಎಸೆದಿದ್ದಾರೆ!!! ಕಳೆದ ಒಂದು ವಾರದಿಂದ ‘ಫ್ಲಿಪ್’ ಆಗಿರೋದು ಯಾರು ಅಂತ ನೋಡೋ ಜನರಿಗೆ ಚೆನ್ನಾಗಿ ಕಾಣ್ತಿದೆ. ತನಿಶಾ ಮತ್ತು ಕಾರ್ತಿಕ್ ಯಾವುದೇ ಕಾರಣಕ್ಕೂ ಈಕೆಯನ್ನು ಜೊತೆಗೆ ಸೇರಿಸಿಕೊಳ್ಳಬಾರದು ಎಂದು ಕಿಡಿ ಕಾರಿದ್ದಾರೆ.
 

89

 ಸಂಗೀತಾ ನಾ ಫ್ರೆಂಡ್ ಮಾಡಿಕೊಂಡು ಇದ್ದಿದ್ದಕ್ಕೆ ಅವನನ್ನ ಬೋಳಿಸಿಯೇ ಬಿಟ್ಟಳು ಎಂದು ಒಬ್ಬರು ಹೇಳಿದ್ರೆ  ಮತ್ತೊಬ್ಬರು  ಬಿಗ್ ಬಾಸ್ ಪ್ರಾರಂಭ ಆದಾಗ ನೀನೆ ಗೆಲ್ಲಬೇಕು ಅನ್ನೊಳ್ತಾ ಇದ್ವಿ ಈವಾಗ ಪೈನಲ್ (Bigg Boss Final) ಕೂಡ ತಲುಪಬಾರ್ದು ಅನ್ನಿಸ್ತಿದೆ ಎಂದಿದ್ದಾರೆ. 

99

ಆದರೆ ಇದರಲ್ಲಿ ನಿಜಕ್ಕೂ ಸಂಗೀತಾ ತಪ್ಪು ಇದ್ಯಾ? ಬಿಗ್ ಬಾಸ್ ಕೊಟ್ಟಿರೋ ಟಾಸ್ಕ್ ಆ ರೀತಿ ಇದೆ. ಎದುರಾಳಿಗೆ ಮಾಡೋದಿಕ್ಕೆ ಸಾಧ್ಯವಾಗದ ಚಾಲೆಂಜ್ ನೀಡೋದು. ಅವರು ಇದಕ್ಕೆ ಆಗಲ್ಲ ಅಂತಾನೂ ಅನ್ನಬಹುದು. ಅಷ್ಟಕ್ಕೂ ಇದು ಸಂಗೀತಾ ಒಬ್ಬರ ತೀರ್ಮಾನವೂ ಅಲ್ಲ… ನೀವೇನಂತೀರಿ?

Read more Photos on
click me!

Recommended Stories