ಚಂದನಾ- ವಾಸುಕಿ ದೀಪಾವಳಿ: ಅಯ್ಯೋ ಇದು ಎಂಗೇಜ್‌ಮೆಂಟ್‌ ಫೋಟೋ ಅಂದ್ಕೊಂಡೆ ಎಂದ ನಟಿ ರಮ್ಯಾ

First Published Oct 26, 2022, 11:42 AM IST

ವೈರಲ್ ಆಗುತ್ತಿದೆ ವಾಸುಕಿ ವೈಭನ್- ಚಂದನಾ ಅನಂತಕೃಷ್ಣ ಫೋಟೋ ಶೂಟ್. ದೀಪಾವಳಿ ಹಬ್ಬದ ದಿನವೇ ಪ್ರೀತಿ ವಿಚಾರ ಲೀಕ್? 

ಸಿನಿಮಾ ತಾರೆಯರ ದೀಪಾವಳಿ ರಂಗೇರಿದೆ. ಸ್ಯಾಂಡಲ್‌ವುಡ್‌ನ ಹಲವು ತಾರೆಯರು ದೀಪ ಹಚ್ಚುವ, ಪಟಾಕಿ ಹೊಡೆಯುವ, ಸಾಂಪ್ರದಾಯಿಕ ಉಡುಗೆ ಧರಿಸುವ ಮೂಲಕ ಸಂಭ್ರಮಿಸಿದ್ದಾರೆ. 

ಕನ್ನಡ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕ ವಾಸುಕಿ ವೈಭವ್‌ ಮತ್ತು ಕಿರುತೆರೆ ನಟಿ ಚಂದನಾ ಅನಂತಕೃಷ್ಣ ವಿಶೇಷ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡ ವಾಸುಕಿ, ಚಂದನಾಳನ್ನು ಟ್ಯಾಗ್ ಮಾಡಿ 'ದೀಪಗಳ ಹಬ್ಬ ದೀಪಾವಳಿಯ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.

ಇವರಿಬ್ಬರ ಫೋಟೋ ವೈರಲ್ ಆಗುತ್ತಿದ್ದಂತೆ ಕಾಮೆಂಟ್‌ ಸೆಕ್ಷನ್‌ನಲ್ಲಿ ವಿಶ್‌ಗಳು ಹರಿದು ಬರುತ್ತಿದೆ ಆದರೆ ನೆಟ್ಟಿಗರ ಗಮನ ಸೆಳೆದಿರುವುದು ನಟಿ ರಮ್ಯಾಳ ಕಾಮೆಂಟ್.

 'ಅಯ್ಯೋ ನಾನು ಇದು ನಿಮ್ಮ ಎಂಗೇಜ್‌ಮೆಂಟ್‌ ಫೋಟೋ ಅಂದುಕೊಂಡೆ' ಎಂದು ಹಾಸ್ಯ ಮುಖದ ಎಮೋಜಿ ಹಾಕಿ ರಮ್ಯಾ ಕಾಮೆಂಟ್ ಮಾಡಿದ್ದಾರೆ. 

ವಾಸುಕಿ ವೈಭವ್ ಮತ್ತು ಚಂದನ್ ಅನಂತಾಕೃಷ್ಣ ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಸಿದ್ದರು. ಅಲ್ಲಿಂದ ಇಬ್ಬರು ತುಂಬಾನೇ ಕ್ಲೋಸ್ ಸ್ನೇಹಿತರಾಗಿದ್ದರು.ಹೀಗಾಗಿ ಇಬ್ಬರ ನಡುವೆ ಏನೋ ಕುಚು ಕುಚು ನಡೆಯುತ್ತಿದೆ ಎಂಬ ಗಾಳಿ ಸುದ್ದಿ ಇದೆ, ಇದಕ್ಕೆ ರಮ್ಯಾ ಕಾಮೆಂಟ್ ಸ್ಪಷ್ಟನೆ ಕೊಟ್ಟಿದೆ.

click me!