ಶೂಟಿಂಗ್ ಗೆ ಬ್ರೇಕ್… ಪ್ರಾಣಿ, ಪಕ್ಷಿಗಳ ಜೊತೆ ಸಮಯ ಕಳೆಯುತ್ತಾ ಎಂಜಾಯ್ ಮಾಡಿದ ವೈಷ್ಣವಿ ಗೌಡ

Published : Jan 25, 2025, 01:50 PM ISTUpdated : Jan 25, 2025, 02:37 PM IST

ಕನ್ನಡ ಕಿರುತೆರೆ ನಟಿ, ಸೀತಾ ರಾಮ ಸೀರಿಯಲ್ ಸೀತೆ ವೈಷ್ಣವಿ ಗೌಡ ತಮ್ಮ ಶೂಟಿಂಗ್ ನಿಂದ ಬ್ರೇಕ್ ಪಡೆದುಕೊಂಡು ಪ್ರಾಣಿ ಪಕ್ಷಿಗಳ ಜೊತೆ ಸಮಯ ಕಳೆಯುತ್ತಾ ಎಂಜಾಯ್ ಮಾಡ್ತಿದ್ದಾರೆ.   

PREV
19
ಶೂಟಿಂಗ್ ಗೆ ಬ್ರೇಕ್… ಪ್ರಾಣಿ, ಪಕ್ಷಿಗಳ ಜೊತೆ ಸಮಯ ಕಳೆಯುತ್ತಾ ಎಂಜಾಯ್ ಮಾಡಿದ ವೈಷ್ಣವಿ ಗೌಡ

ಕನ್ನಡ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ಅಗ್ನಿಸಾಕ್ಷಿಯಲ್ಲಿ ಸನ್ನಿಧಿಯಾಗಿ ಹಾಗೂ ಸೀತಾ ರಾಮ ಸೀರಿಯಲ್ ಸೀತೆಯಾಗಿ ಜನಮನ ಗೆದ್ದ ವೈಷ್ಣವಿ ಗೌಡ (Vaishnavi Gowda) ಸದ್ಯ ಜಾಲಿ ಮೂಡಲ್ಲಿದ್ದಾರೆ. 
 

29

ಯಾವಾಗ್ಲೂ ಧಾರಾವಾಹಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುತ್ತಿದ್ದ ವೈಷ್ಣವಿ ಗೌಡ ಇದೀಗ ತಮ್ಮ ಶೂಟಿಂಗ್ ಗೆ ಬ್ರೇಕ್  (break from shooting) ಕೊಟ್ಟು ಪ್ರಾಣಿ ಪಕ್ಷಿಗಳ ಜೊತೆ ಸಮಯ ಕಳೆಯುತ್ತಾ ಎಂಜಾಯ್ ಮಾಡಿದ್ದಾರೆ. 
 

39

ವೈಷ್ಣವಿಯವರು ಪ್ರಾಣಿ ಪಕ್ಷಿಗಳೆಲ್ಲಾ ಒಟ್ಟಾಗಿರುವ ಝೂ ನಂತಹ ತಾಣಕ್ಕೆ ಭೇಟಿ ನೀಡಿದ್ದಾರೆ. ಅವರು ಯಾವ ತಾಣಕ್ಕೆ ಭೇಟಿ ನೀಡಿರೋದು ಎನ್ನುವ ಬಗ್ಗೆ ಮಾಹಿತಿ ಇಲ್ಲ. ಅಲ್ಲಿ ಖಗ, ಮೃಗಗಳೊಂದಿಗೆ ಸಮಯ ಕಳೆದಿದ್ದಾರೆ. 
 

49

ಒಂದೆಡೆ ವಿವಿಧ ರೀತಿಯ ಬಣ್ಣ ಬಣ್ಣದ ಪಕ್ಷಿಗಳನ್ನು ಕೈಯಲ್ಲಿ, ತಲೆಯಲ್ಲಿ ಹಿಡಿದು ನಗುತ್ತಾ ಖುಷಿ ಪಡುತ್ತಿದ್ದರೆ, ಮತ್ತೊಂದೆಡೆ ತಮಗಿಂತ ದೊಡ್ಡ ಗಾತ್ರದ ಪಕ್ಷಿ ಎಮು, ಮೇಕೆ, ದೊಡ್ಡಗಾತ್ರದ ಹಲ್ಲಿಯಂತಹ ಜೀವಿ, ಗಿನಿ ಪಿಗ್ ಮೊದಲಾದ ಪ್ರಾಣಿ ಪಕ್ಷಿಗಳ ಜೊತೆ ಪೋಸ್ ಕೊಟ್ಟಿದ್ದಾರೆ. 
 

59

ವೈಷ್ಣವಿ ಗೌಡ ಫೋಟೊಗಳನ್ನು ನೋಡೀ ಅಭಿಮಾನಿಗಳು ಸಹ ಸಂಭ್ರಮಿಸಿದ್ದು, ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಮುದ್ದು ಪಾರಿಜಾತ, ಕ್ಯೂಟ್, ನೀವು ಹಕ್ಕಿಯಂತೆ ಕಾಣಿಸುತ್ತೀರಿ ಎಂದು ಬರೆದುಕೊಂಡಿದ್ದಾರೆ. 
 

69

ಇನ್ನು ನಿನ್ನೆ ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನವಾಗಿದ್ದು, ಆ ವಿಶೇಷ ದಿನದಂದು ವಿಶೇಷವಾಗಿ ನಟಿ ದಿನವನ್ನು ಕಳೆದಿದ್ದು, ಈ ಹಿನ್ನೆಲೆಯಲ್ಲಿ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿ ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ" ಹೆಣ್ಣೆಂದರೆ ಪ್ರಕೃತಿ, ಸಂಸ್ಕೃತಿ, ಜಗತ್ತಿನ ಮಹಾನ್ ಶಕ್ತಿ, ಮನೆ ಹಾಗೂ ಸಮಾಜದ ಬೆಳಕು. ಹೆಣ್ಣು ಮಕ್ಕಳ ವಿರುದ್ಧ ನಡೆಯುವ ಶೋಷಣೆ, ಹೆಣ್ಣು ಭ್ರೂಣ ಹತ್ಯೆ, ಲೈಗಿಂಕ ಕಿರುಕುಳದಂತಹ ಕೃತ್ಯಗಳನ್ನು ತಡೆಗಟ್ಟಿ, ಹೆಣ್ಣು ಮಕ್ಕಳ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಸಂಕಲ್ಪ ಮಾಡೋಣ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳು ಎಂದಿದ್ದಾರೆ. 
 

79

ಇನ್ನು ಸೀತಾ ರಾಮ ಸೀರಿಯಲ್ ಬಗ್ಗೆ ಹೇಳೋದಾದರೆ, ಸಿಹಿಯ ಸಾವಿನಿಂದಾಗಿ ಸೀತಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಗೊಂಬೆಯನ್ನು ಸಿಹಿ ಎಂದು ಮುದ್ದಾಡುತ್ತಿದ್ದಾಳೆ. ಮತ್ತೆಲ್ಲವನ್ನು ಅರ್ಥ ಮಾಡಿಕೊಳ್ಳುತ್ತಿರುವ ಸೀತಾ ಸಿಹಿ ಇಲ್ಲ ಅನ್ನೋದನ್ನು ಮಾತ್ರ ಅರ್ಥ ಮಾಡಿಕೊಳ್ಳುತ್ತಲೇ ಇಲ್ಲ. 
 

89

ಸಿಹಿಯ ಸಾವಿನಿಂದ ಹುಚ್ಚಿಯಂತಾದ ಸೀತೆಯ ದೌರ್ಬಲ್ಯವನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡಿರುವ ಭಾರ್ಗವಿ, ಎಲ್ಲವನ್ನೂ ತಾನು ಎಣಿಸಿದಂತೆ ನಡೆಸುವ ಪ್ರಯತ್ನದಲ್ಲಿದ್ದಾಳೆ. ಅದಕ್ಕಾಗಿ ಭಾರಿ ಸಂಚು ರೂಪಿಸುತ್ತಿದ್ದಾಳೆ. ಇನ್ನೊಂದೆಡೆ ಸಿಹಿ, ತನ್ನಂತೆ ಇರುವ ಸುಬ್ಬಿಯನ್ನು ಸೀತಮ್ಮನ ಬಳಿ ಕರೆದುಕೊಂಡು ಬರಲು ಎಲ್ಲಾ ರೀತಿಯಲ್ಲೂ ಪ್ರಯತ್ನ ಮಾಡುತ್ತಿದ್ದಾಳೆ. 
 

99

ಸಿಹಿ ಸಾವನ್ನಪ್ಪಿದ ಮೇಲೆ ಹಲವು ವೀಕ್ಷಕರಿಗೆ ಸೀತಾರಾಮ ಸೀರಿಯಲ್ (Seetha Raama Serial) ಕುರಿತಾದ ಆಸಕ್ತಿ ಕಡಿಮೆಯಾಗಿದ್ದು, ಟಿಆರ್ಪಿ ಕೂಡ ಸಿಕ್ಕಾಪಟ್ಟೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಹಾಗೂ ಹೊಸ ಸೀರಿಯಲ್ ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದಿನ ಸೋಮವಾರದಿಂದ ಸೀತಾರಾಮ ಸೀರಿಯಲ್ ಸಂಜೆ 5.30ಕ್ಕೆ ಪ್ರಸಾರವಾಗಲಿದೆ. 
 

Read more Photos on
click me!

Recommended Stories