ಮಾಸ್ಟರ್ ಚೆಫ್‌ ಇಂಡಿಯಾದಲ್ಲಿ ಇಬ್ಬರು ಕನ್ನಡಿಗರ ಕಾದಾಟ, ಗೆಲ್ಲೋರು ಯಾರು?

First Published | Dec 5, 2023, 4:39 PM IST

ಮಾಸ್ಟರ್ ಚೆಪ್ ಇಂಡಿಯಾ ಫೈನಲ್ ಹಂತ ತಲುಪಿದ್ದು, ಜನರು ಯಾರಾಗಬಹುದು ವಿನ್ನರ್ ಎಂದು ಕಾಯುತ್ತಿದ್ದಾರೆ. ಈ ಬಾರಿ ಸ್ಪರ್ಧೆಯ ವಿಶೇಷತೆಯೆಂದರೆ ನಮ್ಮ ಕನ್ನಡ ನಾಡಿನ ಇಬ್ಬರು ವ್ಯಕ್ತಿಗಳು ಟಾಪ್ 5 ರಲ್ಲಿ ಅಂದರೆ ಫೈನಲ್ ರೌಂಡ್ ಗೆ ಆಯ್ಕೆಯಾಗಿದ್ದಾರೆ. 

ಮಾಸ್ಟರ್ ಚೆಫ್ ಇಂಡಿಯಾ (MasteChef India) ಭಾರತದ ನಂಬರ್ ಒನ್ ಅಡುಗೆ ರಿಯಾಲಿಟಿ ಶೋ. ದೇಶಾದ್ಯಂತದ ವಿವಿಧ ಜನರು ಭಾಗವಹಿಸಿ ತಮ್ಮ ಕುಕ್ಕಿಂಗ್ ಟ್ಯಾಲೆಂಟ್ (Cooking Talent) ಪ್ರದರ್ಶಿಸುವುದರಿಂದ ಪ್ರೇಕ್ಷಕರು ಇದನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿರುತ್ತಾರೆ.

ಕಳೆದ ಬಾರಿ, ಈ ಕಾರ್ಯಕ್ರಮವು ಸೋನಿ ಟೆಲಿವಿಷನ್ ಎಂಬ ಹೊಸ ಚಾನೆಲ್‌ನಲ್ಲಿ ಪ್ರಸಾರವಾಗಿ ಬಹಳ ಯಶಸ್ಸು ಪಡೆದಿತ್ತು. ಕಳೆದ ಬಾರಿ ವಿಕಾಸ್ ಖನ್ನಾ, ರಣವೀರ್ ಬ್ರಾರ್ ಮತ್ತು ಗರಿಮಾ ಅರೋರಾ ತೀರ್ಪುಗಾರರಾಗಿದ್ದರು ಮತ್ತು ನಯನಜ್ಯೋತಿ ಕಾರ್ಯಕ್ರಮದ ವಿಜೇತರಾಗಿ ಹೊರಹೊಮ್ಮಿದರು.
 

Tap to resize

ಹೊಸ ಸೀಸನ್ ಸೋನಿ ಲೈವ್‌ನಲ್ಲಿ (Sony Live) ಪ್ರಾರಂಭವಾಗಿದೆ ಮತ್ತು ಸ್ಪರ್ಧಿಗಳು ಸಾಕಷ್ಟು ಪ್ರತಿಭಾವಂತರಾಗಿರುವುದರಿಂದ ಪ್ರೇಕ್ಷಕರು ಯಾರನ್ನು ಮಾಸ್ಟರ್ ಚೆಫ್ ವಿನ್ನರ್ ಆಗುವರು ಎನ್ನುವ ಕುತೂಹಲದಿಂದ ಕಾಯುತ್ತಿದ್ದಾರೆ. 
 

ಈ ಸೀಸನ್ ನ ತೀರ್ಪುಗಾರರಾಗಿ ವಿಕಾಸ್ ಖನ್ನಾ, ರಣವೀರ್ ಬ್ರಾರ್ ಮತ್ತು ಪೂಜಾ ಧಿಂಗ್ರಾ ಕಾಣಿಸಿಕೊಂಡಿದ್ದಾರೆ. ಇದೀಗ ಈ ಕಾರ್ಯಕ್ರಮ ಫೈನಲ್ ಹಂತ ತಲುಪಿದ್ದು, ಕರ್ನಾಟಕದ ಇಬ್ಬರು ಟಾಪ್ 5ರಲ್ಲಿ ಸ್ಥಾನ ಪದೆದಿದ್ದು, ಕನ್ನಡಿಗರಿಗೆ ಹೆಮ್ಮೆಯ ವಿಷ್ಯವಾಗಿದೆ. 
 

ಕಳೆದ ಸಂಚಿಕೆಯಲ್ಲಿ, ಕೃತಿ ಧಿಮನ್ ಶೋನಿಂದ ಹೇಗೆ ಎಲಿಮಿನೇಟ್ ಆಗಿದರು ಮತ್ತು ಅಂತಿಮವಾಗಿ, ಸೀಸನ್ ಕಾರ್ಯಕ್ರಮದ ಅಂತಿಮ 5 ಸ್ಪರ್ಧಿಯನ್ನು ಪಡೆಯಿತು. ಈ ಐದು ಸ್ಪರ್ಧಿಗಳಲ್ಲಿ ಇಬ್ಬರು ಕರ್ನಾಟಕದವರೇ ಆಗಿದ್ದಾರೆ. 
 

ಟಾಪ್ 5ರಲ್ಲಿ ಪಶ್ಚಿಮ ಬಂಗಾಲದ ಸೂರಜ್ ಥಾಪಾ, ಜಮ್ಮು ಕಾಶ್ಮೀರದ ಡಾ.ರುಕ್ಸಾರ್ ಸಯೀದ್,  ಮೇಘಾಲಯದ ನಂಬಿ ಮರಕ್, ಮಂಗಳೂರಿನ ಮೊಹಮ್ಮದ್ ಆಶಿಕ್ ಮತ್ತು ಬೆಂಗಳೂರಿನ ಹರೀಶ್ ಕ್ಲೋಸ್ಪೆಟ್ ಈ ಕಾರ್ಯಕ್ರಮದ ಅಂತಿಮ ಸ್ಪರ್ಧಿಗಳು. 
 

ಈಗ, ಈ ಐದು ಜನ ಮತ್ತಷ್ಟು ಕಠಿಣ ಸ್ಪರ್ಧೆಗಳನ್ನು ಎದುರಿಸಿ, ಗೆಲ್ಲಬೇಕಾಗಿದೆ. ಮತ್ತು ಉತ್ತಮವಾಗಿ ಕುಕ್ ಮಾಡುವ ಅಗ್ರ ಎರಡು ಸ್ಪರ್ಧಿಗಳು ಟಾಪ್ 2 ನಲ್ಲಿ ಸ್ಥಾನ ಪಡೆಯುತ್ತಾರೆ. ಮತ್ತು ಅವರಲ್ಲಿ ಒಬ್ಬರನ್ನು ಕಾರ್ಯಕ್ರಮದ ವಿಜೇತರೆಂದು ಘೋಷಿಸಲಾಗುತ್ತದೆ.
 

ಈ ಸೀಸನ್ ಸ್ಪರ್ಧಿಗಳು ಪ್ರತಿಭಾವಂತರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಮತ್ತು ತೀರ್ಪುಗಾರರಿಗೆ ತೀರ್ಪು ನೀಡುವುದು ಕಷ್ಟವಾಗುತ್ತಿದೆ. ಮಂಗಳೂರಿನ ಆಶಿಕ್ ಹಲವಾರು ಬಾರಿ ತೀರ್ಪುಗಾರರ ಮೆಚ್ಚುಗೆ ಪಡೆದಿದ್ದಾರೆ. ನಿಮ್ಮ ಪ್ರಕಾರ ಪ್ರದರ್ಶನದ ವಿಜೇತರು ಯಾರು?
 

Latest Videos

click me!