ತ್ರಿಪುರ ಸುಂದರಿ ಸೆಟ್‌ನಲ್ಲಿ ಬಕ್ರಾ ಆದ ಅಭಿನವ್ ವಿಶ್ವನಾಥನ್

Published : Apr 05, 2023, 02:34 PM IST

ತ್ರಿಪುರ ಸುಂದರಿ ಸೀರಿಯಲ್ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದ್ದು, ಜನರು ಇಷ್ಟಪಟ್ಟು ನೋಡುತ್ತಿದ್ದಾರೆ. ಇದೀಗ ಸೀರಿಯಲ್ ತಂಡ ಸೆಟ್ ನಲ್ಲಿ ಬಕ್ರಾ ಮಾಡಿದ್ದು, ನಾಯಕಿ ಪ್ರದ್ಯುಮ್ನಾ ಆಲಿಯಾಸ್ ಅಭಿನವ್ ವಿಶ್ವನಾಥನ್ ಸಖತ್ತಾಗಿಯೇ ಬಕ್ರಾ ಆಗಿದ್ದಾರೆ.   

PREV
16
ತ್ರಿಪುರ ಸುಂದರಿ ಸೆಟ್‌ನಲ್ಲಿ ಬಕ್ರಾ ಆದ ಅಭಿನವ್ ವಿಶ್ವನಾಥನ್

ಗಂಧರ್ವ ಲೋಕದಿಂದ ರಾಜಕುಮಾರನನ್ನು ಅರಸಿ ಭೂಲೋಕಕ್ಕೆ ಬಂದ ಗಂಧರ್ವ ಕನ್ಯೆಯ ಕಥೆ ತ್ರಿಪುರ ಸುಂದರಿ (Tripura Sundari). ಈ ಸೀರಿಯಲ್ ಆರಂಭದಿಂದ ಇಂದಿನವರೆಗೂ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಲೇ ಸಾಗುತ್ತಿದೆ. ನಾಡಿಗೆ ಬಂದ ತ್ರಿಪುರ ಸುಂದರಿಯ ಅಮಾಯಕತೆ, ಅಪ್ಪನಿಂದ ಕಾರಣವಿಲ್ಲದೇ ದ್ವೇಷಕ್ಕೆ ಗುರಿಯಾಗಿರುವ ಮಗನ ವ್ಯಥೆ ಎಲ್ಲವೂ ಚೆನ್ನಾಗಿದೆ. 

26

ಇದೀಗ ಏಪ್ರಿಲ್ ಒಂದರಂದು ಸೆಟ್ ನಲ್ಲಿ ಮಾಡಿದ ಡ್ರಾಮ ಇದೀಗ ಸಖತ್ ವೈರಲ್ ಆಗುತ್ತಿದೆ. ಹೌದು, ತ್ರಿಪುರಾ ಸುಂದರಿ ಸೆಟ್ ನಲ್ಲಿ ಶೂಟಿಂಗ್ (shooting set) ನಡೆಯುತ್ತಿರುವ ವೇಳೆ ಎಪ್ರಿಲ್ ಫೂಲ್ ದಿನ ಪ್ರದ್ಯುಮ್ನಾ ಅಂದ್ರೆ, ಅಭಿನವ್ ವಿಶ್ವನಾಥ್ ಅವರನ್ನು ತಂಡದವರು ಸೇರಿ ಫೂಲ್ ಮಾಡಿದ್ದಾರೆ. ಪಾಪ ಏನಾಗ್ತಿದೆ ಎಂದು ತಿಳಿಯದ ಅಭಿನವ್ ಬಕ್ರಾ ಆದದ್ದಂತೂ ನಿಜ. 
 

36

ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರದ್ಯುಮ್ನ, ಆಮ್ರಪಾಲಿ ಕೆನ್ನೆಗೆ ಯಾವುದೋ ವಿಚಾರಕ್ಕೆ ಹೊಡೆಯಬೇಕಾಗಿತ್ತು, ಒಂದು ಬಾರಿ ಪ್ರಾಕ್ಟೀಸ್ ಮಾಡಿ, ಇನ್ನೊಂದು ಬಾರಿ ಟೇಕ್ ತೆಗೆಯುತ್ತಿದ್ದಂತೆ ಪ್ರದ್ಯುಮ್ನ ಆಮ್ರಪಾಲಿ ಕೆನ್ನೆಗೆ ಬಾರಿಸಿದ್ದಾರೆ, ಕೆನ್ನೆಗೆ ಬಾರಿಸುತ್ತಿದ್ದಂತೆ ಆಮ್ರಪಾಲಿ ನೆಲದ ಮೇಲೆ ಬಿದ್ದಿದ್ದಾರೆ. 

46

ಮೊದಲಿಗೆ ಆಮ್ರಪಾಲಿ ಎದ್ದೇಳದಿದ್ದನ್ನು ನೋಡಿ, ಪ್ರದ್ಯುಮ್ನ ಎಬ್ಬಿಸಿದ್ದಾರೆ, ಆದರೆ ಅವರು ಎದ್ದೇಳದಿದ್ದಾಗ, ಗಾಬರಿಯಾಗಿದ್ದಾರೆ. ಸರ್ ನಾನು ಮೆಲ್ಲನೆ ಹೊಡೆದದ್ದು, ಜೋರಾಗಿ ಹೊಡೆದಿಲ್ಲ ಎಂದಿದ್ದಾರೆ. ಸುತ್ತಮುತ್ತಲು ಇದ್ದವರು ಸರ್ ಜೋರಾಗಿ ಯಾಕೆ ಹೊಡೆದ್ರಿ ಎಂದು ಪದೇ ಪದೇ ಹೇಳುತ್ತಿದ್ದರು.

56

ಎಲ್ಲಾ ಸೇರಿ ಡ್ರಾಮಾ ಮಾಡುತ್ತಿದ್ದಾರೆಂದು ತಿಳಿಯದ ಪ್ರದ್ಯುಮ್ನ, ಪದೇ ಪದೇ ಹೆದರಿ ಸರ್ ನಾನು ಜೋರಾಗಿ ಹೊಡೆದಿಲ್ಲ ಸರ್ ಎಂದೇ ಹೇಳುತ್ತಿದ್ದರು, ಕೆಲವರು ಬೇಗ ಗಾಡಿ ತನ್ನಿ ಎಂದು ಹೇಳುತ್ತಲೂ ಇದ್ದರೂ. ಡೈರೆಕ್ಟರ್ ಮೆಲ್ಲಗೆ ಹೊಡಿರೀ ಅಂದ್ರೆ ಇಷ್ಟು ಜೋರಾಗಿ ಹೊಡೆಯೋದಾ ಅಂದ್ರು. ಇದೆಲ್ಲಾ ಕೇಳಿ ಪ್ರದ್ಯುಮ್ನ ಸಿಕ್ಕಾಪಟ್ಟೆ ಹೆದರಿ ಹೋದಂತೆ ಕಾಣುತ್ತಿದ್ದರು.
 

66

ಕೊನೆಗೆ ದಿವ್ಯಾ ಸುರೇಶ್ ನಗುತ್ತಾ ಎದ್ದು ನಿಂತಾಗ, ಎಲ್ಲರೂ ಎಪ್ರಿಲ್ ಫೂಲ್ ಅಂದಾಗಲೇ ಅಭಿನವ್‌ಗೆ ಹೋದ ಜೀವ ಮತ್ತೆ ಬಂದಂತೆ ಆಯಿತು. ಆದ್ರೆ ಎಲ್ಲಾ ಸೇರಿ ಬಕ್ರಾ ಮಾಡೋಕೆ ಪ್ಲ್ಯಾನ್ ಮಾಡಿದ್ರೂ ಪಾಪ ಅಭಿನವ್‌ಗೆ ಒಂದೇ ಒಂದು ವಿಚಾರವೂ ಗೊತ್ತಾಗದೇ ಫೂಲ್ ಆಗಿದ್ದಂತೂ ನಿಜ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories