ಮಧ್ಯಮ ವರ್ಗದ ಕುಟುಂಬದ ಕಪಿಲ್ ಶರ್ಮಾ ಸಂಪಾದಿಸಿದ ಆಸ್ತಿ ಕೇಳಿದರೆ ಶಾಕ್ ಆಗುತ್ತೀರಾ!
First Published | Aug 23, 2022, 4:41 PM ISTಹಾಸ್ಯನಟ ಕಪಿಲ್ ಶರ್ಮಾ ( Kapil Sharma) ಅವರು ತಮ್ಮ ಶೋ ದಿ ಕಪಿಲ್ ಶರ್ಮಾ ಶೋನ ಹೊಸ ಸೀಸನ್‌ನೊಂದಿಗೆ ಪುನರಾಗಮನ ಮಾಡುತ್ತಿದ್ದಾರೆ. ಹೊಸ ಸೀಸನ್‌ಗಾಗಿ ಕಪಿಲ್ ಕೂಡ ತಮ್ಮ ಲುಕ್ ಅನ್ನು ಸಾಕಷ್ಟು ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಅವರ ಹೊಸ ಲುಕ್ ಬೆಳಕಿಗೆ ಬಂದಿದ್ದು, ಇದನ್ನು ನೋಡಿ ಅಭಿಮಾನಿಗಳು ಸಾಕಷ್ಟು ಆಶ್ಚರ್ಯಚಕಿತರಾದರು. ಅಂದಹಾಗೆ, ಕಪಿಲ್ ಸುಮಾರು 15 ವರ್ಷಗಳಿಂದ ಮನರಂಜನಾ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಇಂಟರ್ ನೆಟ್ ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಕಪಿಲ್ ಸುಮಾರು 276 ಕೋಟಿ ಮೌಲ್ಯದ ಆಸ್ತಿಯ ಮಾಲೀಕರು. ಅದೇ ಸಮಯದಲ್ಲಿ, ಅವರು ಮುಂಬೈನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಮತ್ತು ಐಷಾರಾಮಿ ಕಾರುಗಳನ್ನು ಸಹ ಹೊಂದಿದ್ದಾರೆ. ವರದಿಗಳ ಪ್ರಕಾರ ಅವರು ಒಂದು ಸಂಚಿಕೆಗೆ ಸುಮಾರು 70-80 ಲಕ್ಷ ರೂ ಸಂಭಾವನೆ ಪಡೆಯುತ್ತಾರೆ. ಕಪಿಲ್ ಶರ್ಮಾ ಅವರ ಆಸ್ತಿ ಮತ್ತು ಅವರ ಪ್ರಸಿದ್ಧ ಜೀವನಶೈಲಿ ಮತ್ತು ವೃತ್ತಿಜೀವನದ ಬಗ್ಗೆ ವಿವರ ಇಲ್ಲಿದೆ.