ಹರ್ಷ-ಭುವಿಯಿಂದ ಹಿಡಿದು ಸಿದ್ಧಾರ್ಥ್-ಸನ್ನಿಧಿವರೆಗೆ, ಈ ಆನ್-ಸ್ಕ್ರೀನ್ ಜೋಡಿಗಳು (onscreen couples) ಖಂಡಿತವಾಗಿಯೂ ಪ್ರೇಕ್ಷಕರ ಹೃದಯದಲ್ಲಿ ಇಂದಿಗೂ ವಿಶೇಷ ಸ್ಥಾನವನ್ನು ಹೊಂದಿದ್ದಾರೆ. ಅವರ ಸಿಜ್ಲಿಂಗ್ ಕೆಮಿಸ್ಟ್ರಿ ಇರಬಹುದು, ಸಿಲ್ಲಿ ವಾದಗಳು ಅಥವಾ ಅವರು ಪರಸ್ಪರರ ಕಣ್ಣುಗಳನ್ನು ನೋಡುವ ರೀತಿಯಾಗಿರಬಹುದು, ಇವೆಲ್ಲವೂ ಜನರಿಗೆ ಈ ಜೋಡಿಯನ್ನು ಇಷ್ಟಪಡುವಂತೆ ಮಾಡಿದೆ. ಸೀರಿಯಲ್ ಮುಗಿದು ಹೋಗಿ ವರ್ಷಗಳೇ ಕಳೆದಿವೆ. ಆದರೂ ಜನ ಮತ್ತೆ ಈ ಜೋಡಿಗಳನ್ನು ತೆರೆ ಮೇಲೆ ಜೊತೆಯಾಗಿ ನೋಡೋದಕ್ಕೆ ಇಷ್ಟಪಡ್ತಾರೆ.
ಮೀರಾ-ಅನಿಕೇತ್ (ನಮ್ಮನೆ ಯುವರಾಣಿ)
ನಮ್ಮನೆ ಯುವರಾಣಿಯ (Nammane Yuvarani) ಮೀರಾ ಮತ್ತು ಅನಿಕೇತ್ ಬಹಳ ಕಡಿಮೆ ಅವಧಿಯಲ್ಲಿ ಖ್ಯಾತಿಯನ್ನು ಗಳಿಸಿದರು. ಸಣ್ಣ ಸಣ್ಣ ವಿಷಯಕ್ಕೆ ಮುದ್ದಾದ ಜಗಳಗಳು ಮತ್ತು ಅವರ ಮೋಜಿನ ತಮಾಷೆ, ಇಬ್ಬರ ನಡುವಿನ ಪ್ರೀತಿ ಎಲ್ಲವೂ ಸೇರಿ, ಮೀರಾ ಮತ್ತು ಅನಿಕೇತ್ ಕಿರುತೆರೆಯಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿದ್ದರೂ. ಇಂದಿಗೂ ಫ್ಯಾನ್ಸ್ ಸೀರಿಯಲ್ ನಲ್ಲಿ ಮೀರಾ ಅನಿಕೇತ್ ಮದುವೆಯಾದ ದಿನವನ್ನು ಅನೀರಾ ದಿನವನ್ನಾಗಿ ಸೆಲೆಬ್ರೇಟ್ ಮಾಡ್ತಾರೆ ಅಂದ್ರೆ ನೀವು ನಂಬಲೇಬೇಕು.
ಹರ್ಷ-ಭುವಿ (ಕನ್ನಡತಿ)
ಕನ್ನಡತಿ (Kannadathi) ಜೋಡಿ ತನ್ನ ವೀಕ್ಷಕರನ್ನು ತನ್ನ ಪ್ರಬುದ್ಧ ಪ್ರೀತಿಯಿಂದ ಸೆಳೆದಿತ್ತು. ಪ್ರೀತಿಯಿಂದ ಹಿಡಿದು, ಒಬ್ಬರಿಗೊಬ್ಬರು ಕಷ್ಟ ಸುಖದಲ್ಲಿ ಜೊತೆಯಾಗಿ ನಿಲ್ಲುವ ಈ ಜೋಡಿ ಎಲ್ಲರಿಗೂ ಇಷ್ಟವಾಗಿತ್ತು. ಇಂದಿಗೂ ಸಹ ಜನರು ಹೆಚ್ಚು ಇಷ್ಟಪಡುವ ಜೊತೆಗೆ ಮತ್ತೆ ತೆರೆ ಜೋಡಿಯಾಗಿ ನೋಡಲು ಬಯಸುವ ಜೋಡಿಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಇವರು.
ಅನು-ಆರ್ಯವರ್ಧನ್ (ಜೊತೆ ಜೊತೆಯಲಿ)
ಅನು ಮತ್ತು ಆರ್ಯವರ್ಧನ್ ತೆರೆ ಮೇಲಿನ ಬೆಸ್ಟ್ ಜೋಡಿಯಾಗಿ ಗುರುತಿಸಿಕೊಂಡಿದ್ದಾರೆ. ಸಾಮಾನ್ಯ ಪ್ರೇಮಕಥೆಗೆ ಹೊಸ ಆಯಾಮವನ್ನು ನೀಡಿದ ಲವ್ ಸ್ಟೋರಿ (lovestory) ಇದು. ಯುವತಿಯೊಬ್ಬಳು ಮಧ್ಯವಯಸ್ಕ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗೋ ಈ ಕಥೆ ಭಾರಿ ಸಂಚಲನ ಸೃಷ್ಟಿಸಿತ್ತು.
ಅಮೃತಾ-ಅರ್ಜುನ್ (ನಾಗಿಣಿ)
ನಾಗಿಣಿ (Naagini) ಸೀಸನ್ 1 ರಲ್ಲಿ ಅಮೃತಾ ಮತ್ತು ಅರ್ಜುನ್ ತಮ್ಮ ಪ್ರತಿಯೊಂದು ಕಾಂಬಿನೇಶನ್ ಸೀನ್ ನಲ್ಲಿ ನಿಜವಾದ ಪ್ರೀತಿ ಅಂದ್ರೆ ಹೀಗಿರಬೇಕು ಅನ್ನೋದನ್ನು ತೋರಿಸಿದ್ರು ಈ ಜೋಡಿ. ಇವರಿಬ್ಬರ ಲವ್-ಸಿಜ್ಲಿಂಗ್ ಕೆಮಿಸ್ಟ್ರಿಯಿಂದ ಜನರ ಫೇವರಿಟ್ ಜೋಡಿ ಎನಿಸಿಕೊಂಡಿದ್ದರು.
ಸನ್ನಿಧಿ-ಸಿದ್ಧಾರ್ಥ್ (ಅಗ್ನಿಸಾಕ್ಷಿ)
ಡಿಂಪಲ್ ಕಪಲ್ಸ್ ಎಂದೇ ಖ್ಯಾತಿ ಪಡೆದಿದ್ದ ಅಗ್ನಿಸಾಕ್ಷಿಯ (Agnisakshi) ಸನ್ನಿಧಿ ಮತ್ತು ಸಿದ್ದಾರ್ಥ್ ಜೋಡಿ ಜನರನ್ನು ಎಷ್ಟರಮಟ್ಟಿಗೆ ಸೆಳೆದಿದ್ದರು ಅಂದ್ರೆ, ಈ ಜೋಡಿಯನ್ನು ತೆರೆ ಮೇಲೆ ನೋಡಲು ಜನ ಕಾಯ್ತಾ ಇದ್ರು. ಇವರಿಬ್ಬರ ರೊಮ್ಯಾಂಟಿಕ್ ದೃಶ್ಯಗಳು ಜನರ ಎದೆಯಲ್ಲಿ ಕಚಗುಳಿ ಇಡುತ್ತಿದ್ದವು ಅನ್ನೋದಂತೂ ಸುಳ್ಳಲ್ಲ.
ಚಂದು-ಗೊಂಬೆ (ಲಕ್ಷ್ಮಿ ಬಾರಮ್ಮ)
ಈ ಜೋಡಿಯು ಆರೇಳು ವರ್ಷಗಳ ಕಾಲ ತಮ್ಮ ಮೋಡಿಯಿಂದ ಟೆಲಿ ಜಗತ್ತನ್ನು ಆಳಿದ್ದರಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ರೊಮ್ಯಾನ್ಸ್ ನಿಂದ ಹಿಡಿದು ಸಣ್ಣ ಜಗಳದವರೆಗೆ, ಚಂದು ಗೊಂಬೆ ಮುದ್ದಾದ ಜೋಡಿಯನ್ನು ನೋಡೋದೆ ಜನರಿಗೆ ಇಷ್ಟವಾಗಿತ್ತು.
ಗೌರಿ - ಮಹೇಶ (ಪುಟ್ಟ ಗೌರಿ ಮದ್ವೆ)
ಬಾಲ್ಯ ವಿವಾಹಕ್ಕೆ ಒಳಗಾಗಿ, ನಂತರ ಜೀವನದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಿದ ನಂತರ ಪ್ರೀತಿಯನ್ನು ಕಂಡುಕೊಂಡ ಗೌರಿಯ ಕಥೆ ಇದು. ಗೌರಿ ಮತ್ತು ಮಹೇಶ ಜೋಡಿಯನ್ನು ಜನರು ಇಷ್ಟಪಟ್ಟಿದ್ದರು. ಇವರಿಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೋಲ್ ಆದ ಜೋಡಿಗಳು.
ರೌಡಿ ಬೇಬಿ -ವೇದಾಂತ್ (ಗಟ್ಟಿಮೇಳ)
ಗಟ್ಟಿಮೇಳ (Gattimela) ಸೀರಿಯಲ್ ನ ರೌಡಿ ಬೇಬಿ ಅಮೂಲ್ಯ ಮತ್ತು ವೇದಾಂತ್ ಕಾಂಬಿನೇಶನ್ ಜನರಿಗೆ ತುಂಬಾನೆ ಇಷ್ಟವಾಗಿತ್ತು. ಯಾವಾಗ್ಲೂ ಜಗಳ ಮಾಡೋ, ಬಜಾರಿ ಅಮೂಲ್ಯ ಮತ್ತು ಕಡಿಮೆ ಮಾತಿನ ಬ್ಯುಜಿನೆಸ್ ಮೆನ್ ವೇದಾಂತ್ ಜೋಡಿಯನ್ನು ಮತ್ತೆ ಮತ್ತೆ ತೆರೆ ಮೇಲೆ ನೋಡಲು ಜನ ಇಷ್ಟಪಡ್ತಾರೆ.
ಕಮಲಿ -ರಿಷಿ ಸರ್ (ಕಮಲಿ)
ಕಮಲಿ ಧಾರಾವಾಹಿ ಮೂಲಕ ಜನ ಮನಗೆದ್ದ ಕಮಲಿ ಮತ್ತು ರಿಷಿ ಜೋಡಿ ಇಂದಿಗೂ ಜನರ ಮೋಸ್ಟ್ ಫೇವರಿಟ್ ಜೋಡಿ ಇದಾಗಿತ್ತು. ಸರ್ ಮತ್ತು ಸ್ಟೂಡೆಂಟ್ ಜೋಡಿಯ ಕೆಮೆಸ್ಟ್ರಿ ಜನರಿಗೆ ಇಷ್ಟವಾಗಿತ್ತು.
ಆರಾಧನ - ರಮಣ್ ( ರಾಧಾರಾಮಣ)
ರಾಧಾ ರಮಣ ಸೀರಿಯಲ್ ನಲ್ಲಿ ರಾಧಾ ಮಿಸ್ ಮತ್ತು ರಮಣ್ ಜೋಡಿಯನ್ನು ಸಹ ಜನ ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದರು. ಇಬ್ಬರ ಪ್ರಬುದ್ಧ ನಟನೆ, ಪ್ರೀತಿ, ಸಮಸ್ಯೆಗಳನ್ನು ಜೊತೆಯಾಗಿ ಎದುರಿಸುವ ಇಬ್ಬರ ಜೋಡಿ ಜನಕ್ಕೆ ಇಷ್ಟವಾಗಿತ್ತು.