ಇಂದು ಹಳ್ಳಿಕಾರ್ ರೈತ, ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಟ್ಟುಹಬ್ಬ. ಈ ಹುಟ್ಟುಹಬ್ಬವನ್ನು ತಮ್ಮ ವಿಶ್ ಮೂಲಕ ಹೆಚ್ಚು ಸ್ಪೆಶಲ್ ಆಗಿಸಿದ್ದಾರೆ ನಟಿ ತನಿಷಾ ಕುಪ್ಪಂಡ.
ವರ್ತೂರು ಜೊತೆ ರೇಶ್ಮೆ ಸೀರೆ ಉಟ್ಟು ನಿಂತಿರುವ ಫೋಟೋ ಹಂಚಿಕೊಂಡಿರುವ ತನಿಷಾ ಸ್ವಲ್ಪ ಉದ್ದದ ಸಂದೇಶವನ್ನೇ ಬರೆದು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
'ವಿಶಿಂಗ್ ಯು ವೇರಿ ಹ್ಯಾಪಿ ಬರ್ತ್‌ಡೇ ವರ್ತೂ @varthur_santhoshkumarsofficial ಸದಾ ನಮ್ಮ ಸ್ನೇಹ ಹೀಗೇ ಇರಲಿ ❤️ ನಿಮ್ಮನ್ನು ನೋಡಲು ಬರುವ ಆ ಜನಸಾಗರದಲ್ಲಿ ನಾನೂ ಒಬ್ಬಳಾಗಿ ನಿನ್ನನ್ನು ನೋಡಿ ಮನಸ್ಸಿಂದ ನಿನಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ದೂರದಿಂದಲೇ ಕೂಗಿ ಹೇಳುವ ಆಸೆ ❤️ ' ಎಂದು ತನಿಷಾ ಬರೆದಿದ್ದಾರೆ.
ಈ ವಿಶ್‌ನಲ್ಲಿ ಎರಡೆರೆಡು ಹಾರ್ಟ್ ಬಳಸಿರುವುದು, ಬಹುವಚನದಿಂದ ಏಕವಚನಕ್ಕೆ ಹೊರಳಿರುವುದು ಹಾಗೂ ಮನದ ಆಸೆಯೆಂದೆಲ್ಲ ತನಿಷಾ ಹೇಳಿರುವುದನ್ನು ಕೇಳಿದ ಫ್ಯಾನ್ಸ್ 'ಏನೋ ನಡೀತಿದೆ' ಅಂತ ಖುಷಿಯಾಗಿದಾರೆ.
ಇನ್ನು ತನಿಷಾ ಹಾಕಿರುವ ಫೋಟೋ ಕೂಡಾ ಎಲ್ಲರ ಗಮನ ಸೆಳೆಯುತ್ತಿದೆ. ಇಬ್ಬರೂ ಸಾಂಪ್ರದಾಯಿಕವಾಗಿ ತಯಾರಿಯಾಗಿ ನಿಂತಂತೆ ಕಾಣುತ್ತಾರೆ.
ಇದನ್ನು ನೋಡಿದ ಹಲವರು ವರ್ತೂರು ಸಂತೋಷ್‌ಗೆ ಹ್ಯಾಪಿ ಬರ್ತ್‌ಡೇ ಹೇಳೋದನ್ನೇ ಮರೆತು 'ಹ್ಯಾಪಿ ಮ್ಯಾರೀಡ್ ಲೈಫ್' ಎಂದು ವಿಶ್ ಮಾಡಿದ್ದಾರೆ.
ಇವ್ರಿಬ್ರೂ ನಮ್ಮಿಬ್ರ ಮಧ್ಯೆ ಏನಿಲ್ಲ ಏನಿಲ್ಲ ಅಂತ ಅಂತಾನೇ ಇದ್ರೂ ಏನೋ ಇದೆ ಏನೋ ಇದೆ ಅಂತ ಹೇಳ್ತಿದಾರೆ ಇವರನ್ನು ಗಮನಿಸುತ್ತಿರುವ ಜನ. ಕೆಲವರು ಈ ಶುಭಾಶಯ ಫೋಟೋಗೆ ಜೋಡಿ ಚೆನ್ನಾಗಿದೆ ಅಂತಲೂ ಹೇಳಿದಾರೆ.
ಬಿಗ್ ಬಾಸ್‌ನಲ್ಲಿದ್ದಾಗ ಕೂಡಾ ಇವರಿಬ್ಬರ ಮಧ್ಯೆ ಭಾವನೆಗಳು ಬೆಳೀತಿವೆ ಎಂದು ಜನರು ಅನುಮಾನ ಪಟ್ಟಿದ್ದರು. ಸುದೀಪ್ ಕೂಡಾ ಬೆಂಕಿಯ ಬಲೆ ಎಂದೆಲ್ಲ ಕಿಚಾಯಿಸಿದ್ದರು.
ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ವರ್ತೂರು, ತನಿಷಾಳ ಹೋಟೆಲ್‌ಗೆ ಭೇಟಿ ನೀಡಿ ನಾನ್ ವೆಜ್ ಸವಿದು ಸೂಪರ್ ಅಂದ್ರಿದ್ರು. ಇಬ್ಬರೂ ನಾವಿಬ್ರೂ ಸ್ನೇಹಿತರು ಎಂದಿದ್ರು. ಆದ್ರೆ ಈಗ ತನಿಶಾ ಹಾಕಿರುವ ವಿಶ್ ಪೋಸ್ಟ್ ನೋಡಿದ ಫ್ಯಾನ್ಸ್- ಬೆಂಕಿಯ ಬಲೆಯಲ್ಲಿ ವರ್ತೂರೋ ಅಥವಾ ಹಳ್ಳಿಕಾರ್ ಬಲೆಯಲ್ಲಿ ಬೆಂಕಿಯೋ.. ಒಟ್ನಲ್ಲಿ ಇವರಿಬ್ರೂ ಮದುವೆಯಾದ್ರೆ ಚೆನಾಗಿರುತ್ತೆ ಅಂತಿದಾರೆ.