ಅಜ್ಜಿಯ ಕೊನೇ ರೀಲ್ಸ್‌ ಹಂಚಿಕೊಂಡ ಡ್ರಾಮಾ ಜ್ಯೂನಿಯರ್ಸ್‌ ಸೂರಜ್;‌ ಲಕ್ಷ್ಮೀ ನಾಯ್ಕ್‌ಗೆ ವಿಡಿಯೋ ಮಾಡೋ ಆಸೆಯಿತ್ತಂತೆ

Published : Apr 03, 2026, 06:48 PM IST

ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ವೀಕ್ಷಕರ ಗಮನ ಸೆಳೆದಿದ್ದ ಲಕ್ಷ್ಮೀ ಅಜ್ಜಿ ಅವರು ನಿಧನರಾಗಿದ್ದಾರೆ. ಇವರು ಯಲ್ಲಾಪುರದ ಮಂಚಿಕೇರಿಯವರು. ಡ್ರಾಮಾ ಜೂನಿಯರ್ ಶೋನಲ್ಲಿ ಭಾಗವಹಿಸಿದ್ದ ಸೂರಜ್ ಜೊತೆ ಲಕ್ಷ್ಮೀ ನಾಯ್ಕ್ ರೀಲ್ಸ್ ಮಾಡುತ್ತಿದ್ದರು. ಈಗ ಸೂರಜ್‌ ಅವರು ಅಜ್ಜಿಯ ಕೊನೇ ವಿಡಿಯೋ ಹಂಚಿಕೊಂಡಿದ್ದಾರೆ. 

PREV
14
93 ವರ್ಷದ ಅಜ್ಜಿ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಮಂಚಿಕೇರಿಯಲ್ಲಿ ನಿವಾಸಿ ಲಕ್ಷ್ಮೀ ನಾಯ್ಕ್.‌ ಇವರಿಗೆ 93 ವರ್ಷ ವಯಸ್ಸಾಗಿತ್ತು. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೊಮ್ಮಗ ಸೂರಜ್ ಹೇಳಿಕೊಟ್ಟಂತೆ ಲಕ್ಷ್ಮೀ ನಾಯ್ಕ್ ಅವರು ನಟಿಸುತ್ತಿದ್ದರು.

24
ಅಜ್ಜಿ ವಿಡಿಯೋ ಯಾವಾಗ ಬರುತ್ತೆ?

ಈಗ ಈ ಬಗ್ಗೆ ಸೂರಜ್‌ ಅವರು ಸೋಶಿಯಲ್‌ ಮೀಡಿಯಾ ಹಂಚಿಕೊಂಡಿದ್ದಾರೆ. ಇನ್ನೂ ವಿಡಿಯೋಗಳು ಮಾಡ್ಬೇಕು ಅಂತ ಅವರಿಗೆ ತುಂಬ ಆಸೆ ಇತ್ತು, ಆದರೆ ದೇಹಕ್ಕೆ ವಯಸ್ಸಾಗಿತ್ತು. ಕೊನೆಗೆ ಪೂರ್ಣವಾಗಿ ಮುಗಿಸಿದ ವಿಡಿಯೋ ಇದೊಂದೇ. ಇದನ್ನು ಇಲ್ಲಿ ಪೋಸ್ಟ್ ಮಾಡಿರಲಿಲ್ಲ, ಬೇರೆ ಒಂದು ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ್ದೆ. ನೀವು ಎಲ್ಲರೂ ಕೇಳ್ತಾ ಇದ್ದ್ರಿ — “ಅಜ್ಜಿ ವಿಡಿಯೋ ಯಾವಾಗ ಬರುತ್ತೆ?” ಅಂತ, ಆದರೆ ಅವರಿಗೆ ಅದನ್ನು ಪೂರ್ಣವಾಗಿ ಮುಗಿಸಲು ಆಗ್ತಿರಲಿಲ್ಲ ಎಂದು ಸೂರಜ್‌ ಹೇಳಿದ್ದಾರೆ.

34
ಅಕೌಂಟ್‌ ಬೆಳೆಯಲು ಅಜ್ಜಿ ಕಾರಣ

ಈಗ, ಅವರು ಪೂರ್ಣವಾಗಿ ಮುಗಿಸಿದ ಕೊನೆಯ ವಿಡಿಯೋವನ್ನು ಇಂದು ನಿಮ್ಮ ಜೊತೆಗೆ ಹಂಚಿಕೊಳ್ಳ್ತಾ ಇದ್ದೀನಿ.

ಈ ಅಕೌಂಟ್ ನನ್ನದ್ದಾಗಿರಬಹುದು, ಆದರೆ ಇದರ ಗ್ರೋತ್‌ಗೆ ಮುಖ್ಯ ಕಾರಣ ಅವರು. ಈಗ ನಿಮ್ಮನ್ನು ಎಂಟರ್ಟೈನ್ ಮಾಡುವ ಜವಾಬ್ದಾರಿ ಸಂಪೂರ್ಣವಾಗಿ ನನ್ನ ಮೇಲೆ ಬಂದಿದೆ. ಸಾಧ್ಯವಾದಷ್ಟು ಚೆನ್ನಾಗಿ ನಿಭಾಯಿಸ್ತೀನಿ ಎಂದು ಸೂರಜ್‌ ಹೇಳಿದ್ದಾರೆ. 

44
ನೇರವಾಗಿ ನೋಡೋಕಾಗಲ್ಲ

ಅವರನ್ನು ಮತ್ತೆ ನೇರವಾಗಿ ನೋಡೋಕೆ ಆಗಲ್ಲ… ನಾನು ಮಾಡಿದ ಕೆಲವೊಂದು ವಿಡಿಯೋಗಳಲ್ಲಿ ನೋಡಬಹುದು,ನಮ್ಮ ನೆನಪಲ್ಲಿ ನೋಡಬಹುದು.

Thank you, ಮುತ್ತಜ್ಜಿ ಎಂದು ಸೂರಜ್‌ ಹೇಳಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories