'ಲಕ್ಷ್ಮಿ ಬಾರಮ್ಮ' ಚಿನ್ನು ಈಗ 'ಮನಸೆಲ್ಲಾ ನೀನೇ' ಅಂತಿದ್ದಾರೆ; ಯಾರಿಗೆ ಗೊತ್ತಾ?

First Published | Oct 28, 2020, 2:24 PM IST

ಲಕ್ಷ್ಮಿ ಬಾರಮ್ಮ ಧಾರಾವಾಹಿ ನಂತರ ಪರಭಾಷೆಯಲ್ಲಿ ಬ್ಯುಸಿಯಾಗಿದ್ದ ನಟಿ ರಶ್ಮಿ ಪ್ರಭಾಕರ್‌ ಮತ್ತೊಮ್ಮೆ ಕನ್ನಡದ 'ಮನಸೆಲ್ಲಾ ನೀನೆ' ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ.
 

ಕಿರುತೆರೆಯ ಜನಪ್ರಿಯಾ ಧಾರಾವಾಹಿ 'ಲಕ್ಷ್ಮಿ ಬಾರಮ್ಮ' ಖ್ಯಾತಿಯ ಚಿನ್ನು ಅಲಿಯಾಸ್ ರಶ್ಮಿಕಾ ಪ್ರಭಾಕರ್ ಹೊಸ ಧಾರಾವಾಹಿ ಆರಂಭ.
ಬರೋಬ್ಬರಿ 3 ವರ್ಷಗಳ ಕಾಲ ಧಾರಾವಾಹಿಯಲ್ಲಿ ಅಭಿನಯಿಸಿ, ನಂತರ ಪರಭಾಷಾ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದ ಕಿರುತೆರೆ ನಟಿ.
Tap to resize

ಇದೀಗ ಮತ್ತೊಮ್ಮೆ ಕನ್ನಡ ಧಾರಾವಾಹಿಗೆ ಮರುಳಿದ್ದಾರೆ. ಅದುವೇ ಪ್ರಮುಖ ಪಾತ್ರಧಾರಿಯಾಗಿ.
ಸ್ಟಾರ್ ಸುವರ್ಣ ವಾಹಿಯಲ್ಲಿ ಪ್ರಸಾರವಾಗಲಿರುವ 'ಮನಸೆಲ್ಲಾ ನೀನೆ'ಯ ರಾಗಾ ಪಾತ್ರದಲ್ಲಿ.
ಶ್ರುತಿ ನಾಯ್ಡು ನಿರ್ಮಾಣದಲ್ಲ ಮೂಡಿ ಬರುತ್ತಿರುವ ಈ ಧಾರಾವಾಹಿ ಪ್ರೋಮೋಗಳು ಈಗಾಗಲೇ ವೈರಲ್ ಆಗುತ್ತಿದೆ.
ಧಾರಾವಾಹಿ ನಾಯಕನಾಗಿ ಸುಜಿತ್ ಗೌಡ ಹಾಗೂ ಬಾಲ ನಟನಾಗಿ ಆಲಾಪ್ ಮಿಂಚಲಿದ್ದಾರೆ.
ಮನಸೆಲ್ಲಾ ನೀನೆಯಲ್ಲಿ ರಶ್ಮಿಕಾ ಬಬ್ಲಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಳುಮುಂಜಿ ಪಾತ್ರ ಅಲ್ಲವೇ ಅಲ್ಲ ಎಂದು ಹೇಳುತ್ತಾರೆ.

Latest Videos

click me!