‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ಪೂರ್ಣಿ ಪಾತ್ರದ ಮೂಲಕ ಮನೆಮಾತಾಗಿದ್ದ ನಟಿ ಲಾವಣ್ಯ ಭಾರಧ್ವಜ್ ಇತ್ತೀಚೆಗೆ ಅದ್ಧೂರಿಯಾಗಿ ಸೀಮಂತ ಮಾಡಿಕೊಂಡಿದ್ದು, ಕಾರ್ಯಕ್ರಮಕ್ಕೆ ಸೀರಿಯಲ್ ತಂಡವೇ ಆಗಮಿಸಿ, ಚೊಚ್ಚಲ ತಾಯಿಗೆ ಶುಭ ಕೋರಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಪೋಷಕ ಪಾತ್ರಗಳ ಮೂಲಕವೇ ಗಮನ ಸೆಳೆದ ನಟಿ ಲಾವಣ್ಯ ಭಾರಧ್ವಜ್. ಇವರು ಹೆಚ್ಚು ಜನಪ್ರಿಯತೆ ಪಡೆದ ಪಾತ್ರ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯ ಪೂರ್ಣಿ ಪಾತ್ರ. ಇದೀಗ ಪೂರ್ಣಿ ಪಾತ್ರಧಾರಿ ಲಾವಣ್ಯ ಚೊಚ್ಚಲ ತಾಯ್ತನದ ಸಂಭ್ರಮದಲ್ಲಿದ್ದಾರೆ.
27
ಶ್ರೀರಸ್ತು ಶುಭಮಸ್ತು ನಟಿ
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಶ್ರೀರಸ್ತು ಶುಭಮಸ್ತು’ವಿನಲ್ಲಿ ಅವಿನಾಶ್ ಪತ್ನಿ ಪೂರ್ಣಿಯಾಗಿ, ಅವಿಯ ಪ್ರೀತಿಯ ಪತ್ನಿಯಾಗಿ, ಮಾವನ ಮುದ್ದಿನ ಸೊಸೆಯಾಗಿ, ಮನೆಮಂದಿಯ ಜೊತೆಗೆ, ಜನರ ಪ್ರೀತಿಯನ್ನು ಗೆದ್ದಿದ್ದ ಸೊಸೆಯಾಗಿದ್ದರು ಲಾವಣ್ಯ ಭಾರಧ್ವಜ್.
37
ತಾಯ್ತನದ ಸಂಭ್ರಮ
ಇದೀಗ ಲಾವಣ್ಯ ಚೊಚ್ಚಲ ತಾಯ್ತನದ ಸಂಭ್ರಮದಲ್ಲಿದ್ದಾರೆ. ತುಂಬು ಗರ್ಭಿಣಿಯಾಗಿರುವ ಲಾವಣ್ಯ ಇತ್ತೀಚೆಗೆ ತಮ್ಮ ಸೀಮಂತವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದು, ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
ಸೀಮಂತದ ಸಂಭ್ರಮದಲ್ಲಿರುವ ಲಾವಣ್ಯಗೆ ಶುಭ ಹಾರೈಸಲು ಶ್ರೀರಸ್ತು ಶುಭಮಸ್ತು ಧಾರಾವಾಹಿಯ ನಟ, ನಟಿಯರು ಹಾಗೂ ನಿರ್ದೇಶಕರು ಕೂಡ ಆಗಮಿಸಿದ್ದರು. ಸುಧಾರಾಣಿ ಪುತ್ರಿಯಾಗಿ ನಟಿಸಿದ ನಟಿ ದೀಪಾ ಕಟ್ಟೆ, ಸೀಮಂತದ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ.
57
ಸುಧಾರಾಣಿಯಿಂದ ದತ್ತಣ್ಣನವರೆಗೂ ಎಲ್ಲರೂ ಹಾಜರ್
ಧಾರಾವಾಹಿಯಲ್ಲಿ ನಾಯಕಿಯಾಗಿದ್ದ ನಟಿ ಸುಧಾರಾಣಿ, ಮಾವ ಆಗಿದ್ದ ದತ್ತಾತ್ರೇಯ ಆಲಿಯಾ ಜನರ ಪ್ರೀತಿಯ ದತ್ತ ತಾತ, ದೀಪಾ ಕಟ್ಟೆ, ಸ್ವಪ್ನಾ ದೀಕ್ಷಿತ್, ದರ್ಶಿತ್, ದರ್ಶಿನಿ ಡೆಲ್ಟಾ ಹಾಗೂ ನಕುಲ್ ಶರ್ಮಾ, ಜೊತೆಗೆ ನಿರ್ದೇಶಕರಾದ ಸುದೇಶ್ ಕೆ ರಾವ್ ಆಗಮಿಸಿ ಲಾವಣ್ಯಗೆ ಶುಭ ಹಾರೈಸಿದ್ದಾರೆ.
67
ಮುದ್ದಿನ ಗಂಡ ಹಾಗೂ ಮಾವ ಮಿಸ್ಸಿಂಗ್
ಅಂದ ಹಾಗೇ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾವನಾಗಿ ನಟಿಸಿದ್ದ ಅಜಿತ್ ಹಂಡೆ ಹಾಗೂ ಗಂಡನಾಗಿ ನಟಿಸಿದ್ದ ಅರ್ಫತ್ ಶರೀಫ್ ಮಾತ್ರ ಕಾರ್ಯಕ್ರಮದಲ್ಲಿ ಮಿಸ್ ಆದಂತಿತ್ತು. ಹಸಿರು ಮತ್ತು ಪಿಂಕ್ ಸೀರೆಯಲ್ಲಿ ಲಾವಣ್ಯ ಮಿಂಚುತ್ತಿದ್ದರು. ತಾಯ್ತನದ ಕಳೆ ಮುಖದಲ್ಲಿ ಎದ್ದು ಕಾಣುತ್ತಿತ್ತು.
77
ಶಶಿ ಹೆಗ್ಡೆ ಜೊತೆ ಪ್ರೀತಿಸಿ ಮದುವೆ
ಲಾವಣ್ಯ ಭಾರಧ್ವಜ್, ರಾಜಾರಾಣಿ ಧಾರಾವಾಹಿಯಲ್ಲಿ ತಮ್ಮ ಸಹ ನಟರಾಗಿದ್ದ ನಟ ಶಶಿ ಹೆಗ್ಡೆಯವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರ ದಾಂಪತ್ಯಕ್ಕೆ 4 ವರ್ಷಗಳು ತುಂಬಿದ್ದು, ಇದೀಗ ಇಬ್ಬರು ಜೊತೆಯಾಗಿ ಮೊದಲ ಮದುವಿನ ಆಗಮನದ ಸಂಭ್ರಮವನ್ನು ಸಂಭ್ರಮಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.