ಭಾಗ್ಯಲಕ್ಷ್ಮಿ: ತಾಂಡವ್ ಸೀಕ್ರೆಟ್ ತಿಳಿದು, ಬೇಕಾದ್ದನ್ನು ಗಿಟ್ಟಿಸುತ್ತಿರುವ ಪೂಜಾ ರಿಯಲ್ ಲೈಫಲ್ಲಿ ಹೆಂಗೆ?

First Published | Oct 27, 2023, 11:24 AM IST

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮಿಯಲ್ಲಿ ಭಾಗ್ಯ ತಂಗಿ ಪೂಜಾ ಪಾತ್ರ ಇದೀಗ ಸೀರಿಯಲ್‌ನಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಈ ಪಾತ್ರದಲ್ಲಿ ನಟಿಸುತ್ತಿರುವ ಆಶಾ ಅಯ್ಯನಾರ್ ಬಗ್ಗೆ ಒಂದಿಷ್ಟು ತಿಳಿಯೋಣ
 

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಸೀರಿಯನಲ್ಲಿ ಪೂಜಾ ಪಾತ್ರ ಸದ್ಯ ಹೈಲೈಟ್ ಆಗುತ್ತಿದೆ. ಭಾವ ನ ಗುಟ್ಟು ತಿಳಿದ ಪೂಜಾ ತಾಂಡವ್ ನನ್ನು ಬ್ಲಾಕ್ ಮೇಲ್ ಮಾಡ್ತಿದ್ದಾಳೆ, ಜೊತೆಗೆ ತನಗೆ ಬೇಕಾದ ಎಲ್ಲವನ್ನೂ ಧಕ್ಕಿಸಿಕೊಳ್ತಾ ಇದ್ದಾಳೆ. 
 

ಮೊದಲು ಲಕ್ಷ್ಮಿಯನ್ನು ಕೆಟ್ಟದಾಗಿ ನಡೆಸುತ್ತಿದ್ದ, ಸದ್ಯ ಭಾವನ ಆಟಗಳನ್ನು ರೆಡ್ ಹ್ಯಾಂಡ್ ಆಗಿ ಮೊಬೈಲಿನಲ್ಲಿ ಸೆರೆ ಹಿಡಿದು, ಪೂಜಾ ಪಾತ್ರಕ್ಕೆ ಪರ್ಫೆಕ್ಟ್ ಅನ್ನುವಷ್ಟು ಉತ್ತಮ ನಟನೆ ಮಾಡುತ್ತಾ ಜನ ಮನ ಗೆದ್ದಿರುವ ನಟಿ ಆಶಾ ಅಯ್ಯನಾರ್ (Asha Ayyanar). 
 

Tap to resize

ಆಶಾ ಈ ಮೊದಲು ರಾಧಾ ರಮಣ, ಮೂರು ಗಂಟು ಸೀರಿಯಲ್‌ನಲ್ಲಿ ನಟಿಸಿದ್ದರು, ಇದೀಗ ಭಾಗ್ಯಲಕ್ಷ್ಮಿಯ ಪೂಜಾ ಆಗಿ ನೆಗೆಟಿವ್ ರೋಲ್ ಮೂಲಕವೇ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದಾರೆ. ಈಗಂತೂ ನಟನೆಯಲ್ಲಿ ಮತ್ತಷ್ಟು ಪಳಗಿರುವ ಇವರ ಅಭಿನಯವನ್ನು ಜನರು ಮೆಚ್ಚಿಕೊಳ್ಳುತ್ತಿದ್ದಾರೆ.
 

ನವರಾತ್ರಿ ಸ್ಪೆಷಲ್ ಎಪಿಸೋಡ್ ನಲ್ಲೂ ಸಹ ದೇವಿ ಭಕ್ತೆ ಸರಸ್ವತಿಯಾಗಿ ಆಶಾ ನಟಿಸಿದ್ದರು. ಅಷ್ಟೇ ಅಲ್ಲದೇ ಭರ್ಜರಿ ಬ್ಯಾಚುಲರ್ ನ ಕೆಲವೊಂದು ಎಪಿಸೋಡ್ ಗಳಲ್ಲೂ ಸಹ ಆಶಾ ರುದ್ರ ಮಾಸ್ಟರ್ ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. 
 

ತಮ್ಮ ಕುತಂತ್ರ ಬುದ್ದಿಯಿಂದಲೇ ಸೀರಿಯಲ್ ನಲ್ಲಿ ಫೇಮಸ್ ಆಗಿರುವ ಆಶಾಗೆ ನೆಗೆಟಿವ್ ಶೇಡ್ (negative shade) ನಿಂದಾಗಿ ಸೋಶಿಯಲ್ ಮೀಡೀಯಾದಲ್ಲಿ ಪ್ರೇಕ್ಷಕರಿಂದ ಬೈಸಿಕೊಳ್ಳುತ್ತಾರಂತೆ. ಹಾಗಾಂತ, ಅದನ್ನು ನೆಗೆಟಿವ್ ಆಗಿ ತೆಗೆದುಕೊಳ್ಳದೆ, ತನ್ನ ನಟನೆಯನ್ನು ಜನ ಒಪ್ಪಿಕೊಂಡಿರೋದಕ್ಕೆ ಖುಷಿಪಡ್ತಾರೆ ನಟಿ.

ಇತ್ತೀಚೆಗಂತೂ ಸೀರಿಯಲ್ ನಲ್ಲಿ ತಾಂಡವ್ ನ ಜುಟ್ಟು ತನ್ನ ಕೈಯಲ್ಲಿ ಇರಿಸಿಕೊಂಡು ತನಗೆ ಬೇಕಾದಂತೆ ಆಡಿಸುತ್ತಿರುವ ಪೂಜಾ ಪಾತ್ರಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದು, ಪೂಜಾ ಪಾತ್ರವನ್ನು ಪರ್ಫೆಕ್ಟ್ ಆಗಿ ನಿಭಾಯಿಸುತ್ತಿದ್ದೀರಿ, ಅತ್ಯುತ್ತಮವಾಗಿ ನಟಿಸುತ್ತೀರಿ ಎಂದೆಲ್ಲಾ ಅಭಿಮಾನಿಗಳು ಹೇಳಿದ್ದಾರೆ. 
 

ಸೀರಿಯಲ್‌ನಲ್ಲಿ ರೀಲ್ಸ್ ಮಾಡಿಕೊಂಡೇ ಇರುವ ಆಶಾ ನಿಜ ಜೀವನದಲ್ಲೂ ಸೀರಿಯಲ್ ತಂಡದವರ ಜೊತೆ ತುಂಬಾನೆ ರೀಲ್ಸ್ ಮಾಡಿಕೊಂಡು ಸೋಶಿಯಲ್ ಮಿಡಿಯಾದಲ್ಲಿ ಪ್ರತಿದಿನ ಶೇರ್ ಮಾಡ್ತಾರೆ. ಇವರನ್ನು ರೀಲ್ಸ್ ರಾಣಿ ಅಂತಾನೆ ಕರಿಯಬಹುದು. 
 

ನಿಜ ಜೀವನಕ್ಕೂ ಪೂಜಾ ಪಾತ್ರಕ್ಕೂ ತುಂಬಾ ವ್ಯತ್ಯಾಸ ಇದೆ ಎನ್ನುವ ಆಶಾ, ಆನ್‌ಸ್ಕ್ರೀನ್ ಪಾತ್ರ ಪೂಜಾ ತರ ನಾನು ಅಲ್ವೇ ಅಲ್ಲ. ತುಂಬಾ ಚಿಲ್ ಆಗಿ, ಎಲ್ಲರನ್ನೂ ನಗಿಸ್ತಾ ಇರ್ತೀನಿ. ನಿಜ ಜೀವನದಲ್ಲಿ ನನ್ನ ಹುಡುಗನ್ನ ಯಾರದ್ರೂ ಮದ್ವೆ ಆಗ್ತಾರೆ ಅಂದ್ರೆ ಬಿಟ್ಟುಕೊಡುವಂತಹ ಹುಡುಗಿ ನಾನು ಅಂತಾರೆ. 
 

ಆಶಾ ಮಾಡೆಲಿಂಗ್ ಕೂಡ ಮಾಡುತ್ತಾರೆ. ಇವರ ಸೋಶಿಯಲ್ ಮೀಡಿಯಾದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಸಾಕಷ್ಟು ಫೋಟೋ ಶೂಟ್ ಮಾಡಿಸಿರೋದು ಕಾಣಬಹುದು. ಇವರು ಯೂಟ್ಯೂಬ್ ಚಾನೆಲ್ ಸಹ ಆರಂಭಿಸಿದ್ದು, ಆ ಮೂಲಕವೂ ಜನರಿಗೆ ಹತ್ತಿರವಾಗಿದ್ದಾರೆ. 
 

Latest Videos

click me!