ವೈರಲ್ ಆಗ್ತಿದೆ ಸಾದ್ವಿನಿ ಕೊಪ್ಪ ಹಾಡುಗಳು: 'ಸರಿಗಮಪ' ಖ್ಯಾತಿಯ ಚೆಲುವೆ ಇವರೇ

First Published | Nov 18, 2020, 12:02 PM IST

ಮೂರನೇ ವಯಸ್ಸಿನಿಂದಲೂ ಸಂಗೀತಾಭ್ಯಾಸ ಮಾಡಿ ಸರಿಗಮಪದಲ್ಲಿ ಮಿಂಚಿದ ಮಲೆನಾಡ ಚೆಲುವೆ ಸಾದ್ವಿನಿ ಕೊಪ್ಪ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಾರೆ. ಇಲ್ನೋಡಿ ಫೋಟೋಸ್

ಸರಿಗಮಪ ಖ್ಯಾತಿಯ ಸಾದ್ವಿನಿ ಕೊಪ್ಪ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಗಾಯನದ ಮೂಲಕ ವೈರಲ್ ಆಗಿದ್ದಾರೆ.
ಲಾಕ್‌ಡೌನ್ ನಂತರ ಸಾದ್ವಿನಿ ಅವರು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.
Tap to resize

ವೇದಿಕೆ ಕಾರ್ಯಕ್ರಮಗಳು ಕಮ್ಮಿಯಾದಾಗ ಸೋಷಿಯಲ್ ಮೀಡಿಯಾ ಮೂಲಕವೇ ಸಂಗೀತ ಪ್ರಿಯರನ್ನು ರಂಜಿಸಿದ್ದಾರೆ ಸಾದ್ವಿನಿ.
ಕೊಪ್ಪದವಾರದ ಸಾದ್ವಿನಿ ಕುಟುಂಬಕ್ಕೆ ಸಂಗೀತ ಶಾರದೆಯ ಕೃಪೆ ಇದೆ. ಅವರ ಪೋಷಕರೂ ಸಂಗೀತ ಹಿನ್ನೆಲೆಯವರೆಂಬುದು ವಿಶೇಷ.
ಸಾದ್ವಿನಿ ಪೋಷಕರು ಮತ್ತು ಒಂದಷ್ಟು ಜನ ಸೇರಿಕೊಂಡು ನಾದಬ್ರಹ್ಮ ಸಂಗೀತ ಶಾಲೆಯನ್ನೂ ನಡೆಸುತ್ತಿದ್ದಾರೆ.
ಮನಸೂರೆಗೊಳ್ಳುವಂತೆ ಹಾಡೋ ಸಾದ್ವಿನಿ 3 ವರ್ಷದಿಂದ ಸಂಗೀತಾಭ್ಯಾಸ ಮಾಡುತ್ತಿದ್ದಾರೆಂಬುದು ಮೆಚ್ಚಲೇ ಬೇಕಾದ ವಿಷಯ.
ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಪಡೆದಿರೋ ಸಾದ್ವಿನಿ ವಯಲಿನ್, ನೃತ್ಯಾಭ್ಯಾಸವನ್ನೂ ಮಾಡಿದ್ದಾರೆ.
ಚಿಕ್ಕ ವಯಸ್ಸಿನಿಂದಲೂ ಚಾನೆಲ್‌ಗಳಿಗೆ ಕಾರ್ಯಕ್ರಮ ಕೊಡುತ್ತಿದ್ದರು ಸಾದ್ವಿನಿ
ರಾಜೇಶ್ ಕೃಷ್ಣನ್ ಅವರು ಸಾದ್ವಿನಿಯರವನ್ನು ಪಿಯರ್‌ಲೆಸ್ ಸಿಂಗರ್ ಎಂದೇ ಕರೆದು ಹೊಗಳಿದ್ದಾರೆ.
ಸದ್ಯ ಇವರು ಸರಿಗಮಪ 17ರಲ್ಲಿ ಜೂರಿಯಾಗಿ ಭಾಗವಹಿಸುತ್ತಿದ್ದಾರೆ.

Latest Videos

click me!