ಅಮೂಲ್ ಬೇಬಿ ಖ್ಯಾತಿಯ ನಟ ಸಾಗರ್ ಬ್ಯಾಚುಲರ್ ಲೈಫ್‌ಗೆ ಗುಡ್ ಬೈ ಹೇಳಿ ವೈವಾಹಿಕ ಜೀವನಕ್ಕೆ (married life) ಕಾಲಿಡುತ್ತಿದ್ದಾರೆ. ಅಂದಹಾಗೆ ಸಾಗರ್ ಕೈ ಹಿಡಿಯುತ್ತಿರುವ ಯುವತಿ ಯಾರು ಮತ್ಯಾರು ಅಲ್ಲ ನಟಿ, ಮಾಡೆಲ್ ಸಿರಿ ರಾಜು. ಇವರು ಕನ್ನಡ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ.
ಇನ್ನೆರಡು ದಿನಗಳಲ್ಲಿ ಅಂದರೆ ಇದೇ ಜನವರಿ 26 ರಂದು ಬೆಂಗಳೂರಲ್ಲಿ ಸಾಗರ್ ಬಿಳಿಗೌಡ (Sagar Biligowda), ಸಿರಿ ರಾಜು ಅವರು ವಿವಾಹವಾಗಲಿದ್ದಾರೆ. ಸದ್ಯ ಇಬ್ಬರು ಮದುವೆ ಕೆಲಸಗಳಲ್ಲಿ ಸದ್ಯಕ್ಕೆ ಬ್ಯುಸಿ ಆಗಿದ್ದಾರೆ. ಯಾರು ಈ ಸಿರಿ, ಇವರಿಬ್ಬರ ಪರಿಚಯ ಹೇಗಾಯ್ತು ಅನ್ನೋದನ್ನು ನೋಡೋಣ.
ಸಿರಿ ರಾಜು ಕೂಡ ಮಾಡೆಲ್ ಕಮ್ ನಟಿ (Model and actress). ಇವರು ಉದ್ಯಮಿ ಕೂಡ ಹೌದು. ಸಿರಿ ರಾಜು ಅವರು ಈವೆಂಟ್ ಕಂಪನಿಯನ್ನ ನಡೆಸುತ್ತಿದ್ದಾರೆ. ವಿಜಯ್ ರಾಘವೇಂದ್ರ ಜೊತೆಗೆ FIR 6 to 6 ಸಿನಿಮಾದಲ್ಲಿ ಸಿರಿ ರಾಜು ಅಭಿನಯಿಸುತ್ತಿದ್ದಾರೆ. ಇನ್ನು ಕೆಲವು ವೆಬ್ ಸೀರೀಸ್ ಗಳಲ್ಲೂ ನಟಿಸಿದ್ದಾರೆ.
ಇನ್ನು ಇಬ್ಬರ ಲವ್ ಸ್ಟೋರಿ (Love story) ಆರಂಭವಾದದ್ದು ಹೀಗೆ… ಖಾಸಗಿ ವಾಹಿನಿಯೊಂದರಲ್ಲಿ ನಡೆದ ಇವೆಂಟ್‍ನಲ್ಲಿ ಸಾಗರ್, ಸಿರಿ ರಾಜು ಭೇಟಿಯಾಗಿ ಸ್ನೇಹವಾಗಿತ್ತು. ನಂತರ ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟರು. ಇದಾದ ಬಳಿಕ ಎರಡೂ ಕುಟುಂಬದವರು ಮಾತನಾಡಿಕೊಂಡು ಮದುವೆ ಮಾಡುತ್ತಿದ್ದಾರೆ. ಇದು ಲವ್ ಕಮ್ ಅರೆಂಜ್ ಮ್ಯಾರೇಜ್.
ಸಿರಿ ಮತ್ತು ಸಾಗರ್ ಅವರದ್ದು ಪ್ರೇಮ ವಿವಾಹ. ಇಬ್ಬರೂ ತಮ್ಮ ಪ್ರೀತಿ ವಿಚಾರವನ್ನು ಪೋಟೋ ಶೇರ್ ಮಾಡುವ ಮೂಲಕ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (social media) ಮೊದಲ ಬಾರಿಗೆ ಹಂಚಿಕೊಂಡಿದ್ದರು.. ಸಾಗರ್ ಮತ್ತು ಸಿರಿ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ಬಳಿಕ ಇಬ್ಬರ ನಿಶ್ಚಿತಾರ್ಥ ಫೋಟೋಗಳು ಸಾಕಷ್ಟು ವೈರಲ್ ಆಗಿದ್ದವು.
ಸಾಗರ್ ಸದ್ಯ ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸತ್ಯ ಸೀರಿಯಲ್ ನಿಂದಾಗಿ ಇವರು ಅಮೂಲ್ ಬೇಬಿ ಅಂತನೆ ಫೇಮಸ್ ಆಗಿದ್ದಾರೆ. ಸೀರಿಯಲ್ ನಲ್ಲಿ ಮುಗ್ಧ ಹುಡುಗನಾಗಿ, ಅಮ್ಮನ ಮುದ್ದಿನ ಮಗನಾಗಿ ಅಭಿನಯಿಸುತ್ತಿದ್ದಾರೆ. ಜೊತೆಗೆ ತಮ್ಮ ನಟನೆ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ
ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಾಗರ್ ಬಿಳಿಗೌಡ ನಟನೆಯಲ್ಲಿ ಆಸಕ್ತಿ ಹೊಂದಿದ್ದರು. ಬಳಿಕ ತಮ್ಮ ನಟನಾ ಕೌಶಲ್ಯವನ್ನು ‘ಕಿನ್ನರಿ’ ಧಾರಾವಾಹಿಯಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸುವ ಮೂಲಕ ಆರಂಭಿಸಿದರು. ಬಳಿಕ ‘ಮನಸಾರೆ’ ಸೀರಿಯಲ್‌ನಲ್ಲಿ ಯುವರಾಜ್ ಪಾತ್ರದಲ್ಲಿ ಮಿಂಚಿದ್ದರು. ಸದ್ಯ ‘ಸತ್ಯ’ ಸೀರಿಯಲ್‌ನಲ್ಲಿ ಹೀರೋ ಪಾತ್ರ ಮಾಡ್ತಿದ್ದಾರೆ.