ತಲೆ ತಿರುಗುತ್ತೆ, ವಾಂತಿಯಾಗ್ತಿದೆ; 2 ತಿಂಗಳ ಗರ್ಭಿಣಿ ಎಂದು ಬಹಿರಂಗ ಪಡಿಸಿದ ನಿವೇದಿತಾ ಗೌಡ

First Published | Jan 24, 2023, 4:07 PM IST

ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ನಾನು ಪ್ರಗ್ನೆಂಟ್ ಎಂದು ಹೇಳಿಕೊಂಡ ನಿವೇದಿತಾ ಗೌಡ. ಕಾಮೆಂಟ್‌ನಲ್ಲಿ ತರಾಟೆಗೆ ತೆಗೆದುಕೊಂಡ ನೆಟ್ಟಿಗರು... 
 

ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ನಿವೇದಿತಾ ಗೌಡ ಸ್ಪರ್ಧಿಸುತ್ತಿದ್ದಾರೆ. ಈ ವೇಳೆ ವೇದಿಕೆ ಮೇಲೆ ಸ್ಕಿಟ್ ಮುಗಿಸಿಕೊಂಡ ಜಡ್ಜ್‌ ಜೊತೆ ಮಾತನಾಡುವಾಗ ನಿವೇದಿತಾ ಗೌಡ ಸಹಿ ಸುದ್ದಿ ಹಂಚಿಕೊಂಡಿದ್ದಾರೆ. 

 ಒಂದು ತಟ್ಟೆಯಲ್ಲಿ ಮಾವಿನ ಕಾಯಿ, ಹುಣಸೇ ಹಣ್ಣು ತಂದು ವೇದಿಕೆ ಮೇಲಿಟ್ಟರು ನಿರಂಜನ್ ದೇಶಪಾಂಡೆ ಇದೆಲ್ಲಾ ಏನೆಂದು ಪ್ರಶ್ನೆ ಮಾಡುತ್ತಾರೆ. ಹಾಸ್ಯ ಮಾಡುತ್ತಲೇ ನಿವಿ ಇದು ಬಟ್ಟೆ ಇರುವ ಹುಣಸೇ ಮತ್ತೊಂದು ಬಟ್ಟೆ ತೆಗೆದಿರುವ ಹುಣಸೇ ಎನ್ನುತ್ತಾರೆ.

Tap to resize

ಎಲ್ಲಾ ಓಕೆ ಈಗ ಇದೆಲ್ಲಾ ತಂದಿರುವುದು ಯಾಕೆಂದು ತೀರ್ಪುಗಾರ್ತಿ ಶ್ರುತಿ ಕೃಷ್ಣ ಕೇಳಿದಾಗ 'ನನಗೆ ಎರಡು ತಿಂಗಳು ನಾನು ಪ್ರೆಗ್ನೆಂಟ್' ಎಂದು ನಿವೇದಿತಾ ಹೇಳುತ್ತಾರೆ. ಒಂದು ನಿಮಿಷ ಪ್ರತಿಯೊಬ್ಬರು ಶಾಕ್ ಆಗುತ್ತಾರೆ.

'ಅದಿಕ್ಕೆ ಸಾಧು ಕೋಕಿಲ ಸರ್ ನನ್ನನ್ನು ರೇಗಿಸುತ್ತಿರುವುದು. ಈ ಸೀಸನ್‌ನಲ್ಲಿ ನಾನು ತುಂಬಾ ಗ್ಲೋ ಆಗುತ್ತಿರುವ ಸುಂದರವಾಗಿ ಕಾಣಿಸುತ್ತಿರುವರ' ಎಂದು ನಿವೇದಿತಾ ಗೌಡ ಹೇಳುತ್ತಾರೆ.

ಎರಡು ತಿಂಗಳು ಎಂದು ಹೇಳಿದರೆ ಜನರಿಗೆ ಅರ್ಥ ಆಗುವುದಿಲ್ಲ ಏನೆಂದು ವಿವರಿಸಿ ಹೇಳು ನಿರಂಜನ್ ಹೇಳುತ್ತಾರೆ.  'ನನಗೆ ತಲೆ ಸುತ್ತು, ವಾಮಿಟಿಂಗ್, ಬೆಳಗ್ಗೆ ಎದ್ದೇಳಲು ಆಗುವುದಿಲ್ಲ' ಎನ್ನುತ್ತಾರೆ.

'ಹೀಗೆ ಆಗುತ್ತಿರುವುದಕ್ಕೆ ನನಗೆ ರಿಹರ್ಸಲ್‌ಗೆ ಬರಲು ಆಗುತ್ತಿಲ್ಲ' ಎಂದು ನಿವಿ ಹೇಳಿದಾಗ, ಯಾಕೆ ಈ ವಿಚಾರ ಹೇಳುತ್ತಿರುವೆ ಎಂದು ಶ್ರುತಿ ಮರು ಪ್ರಶ್ನೆ ಮಾಡುತ್ತಾರೆ. 'ನಾನು ಪ್ರೆಗ್ನೆಂಟ್ ಅದಿಕ್ಕೆ ಹೇಳುತ್ತಿರುವುದು' ಎನ್ನುತ್ತಾರೆ. 

ಕಂಟೆಂಟ್‌ ಕ್ರಿಯೇಟ್ ಮಾಡಲು ನಿವಿ ಈ ರೀತಿ ಸುಳ್ಳು ಹೇಳುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಏಕೆಂದರೆ ಕೆಲವು ದಿನಗಳ ಚಂದನ್ ಶೆಟ್ಟಿ ಸದ್ಯಕ್ಕೆ ಪ್ಲ್ಯಾನ್ ಮಾಡುವುದಿಲ್ಲ ಎಂದಿದ್ದಾರೆ. 

Latest Videos

click me!