ದೇವರೇ ಬಂದು ಎದುರು ನಿಂತರೂ ನಾ ನಿನ್ನನ್ನಷ್ಟೇ ಪೂಜಿಸುವೆ … ಅಮ್ಮನ ಹುಟ್ಟುಹಬ್ಬಕ್ಕೆ ಸಾನ್ಯಾ ವಿಶ್ ಮಾಡಿದ್ದು ಹೀಗೆ!

First Published | Mar 12, 2024, 5:54 PM IST

ಬಿಗ್ ಬಾಸ್ ಸೀಸನ್ 9 ರ ಮೂಲಕ ಸಂಚಲನ ಮೂಡಿಸಿದ್ದ ಸಾನ್ಯಾ ಅಯ್ಯರ್ ತಾಯಿ ಇತ್ತಿಚ್ಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅವರಿಗೆ ಸಾನ್ಯಾ ಪ್ರೀತಿಯಿಂದ ವಿಶ್ ಮಾಡಿ, ದೇವರಿಗಿಂತ ಅಮ್ಮನೇ ಮಿಗಿಲು ಎಂದಿದ್ದಾರೆ. 
 

ಪುಟ್ಟ ಗೌರಿ ಮದುವೆ ಸೀರಿಯಲ್ ನಲ್ಲಿ ಪುಟ್ಟ ಗೌರಿಯಾಗಿ ಅಭಿನಯಿಸಿ, ಬಳಿಕ ಬಿಗ್ ಬಾಸ್ ಸೀಸನ್ 9ರ ಮೂಲಕ ಸೆನ್ಸೇಶನ್ ಕ್ರಿಯೇಟ್ ಮಾಡಿದ ಸಾನ್ಯಾ ಅಯ್ಯರ್ (Saanya Iyer) ತಮ್ಮ ಅಮ್ಮನ ಬರ್ತ್ ಡೇ ಗೆ ಮುದ್ದಾಗಿ ವಿಶ್ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. 
 

ಇತ್ತೀಚೆಗಷ್ಟೇ ಸಾನ್ಯಾ ಅಯ್ಯರ್ ತಾಯಿ ದೀಪಾ ಅಯ್ಯರ್ (Deepa Iyer) ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಅಮ್ಮನ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಸಾನ್ಯಾ ಅಮ್ಮನ ಜೊತೆಗಿರುವ ಹಲವು ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡುವ ಮೂಲಕ ಮುದ್ದಾಗಿ ವಿಶ್ ಮಾಡಿದ್ದಾರೆ. 
 

Tap to resize

ದೇವರೇ ಬಂದು ಎದುರು ನಿಂತರೂ ನಾ ನಿನ್ನನ್ನಷ್ಟೇ ಪೂಜಿಸುವೆ, ಹ್ಯಾಪಿಯೆಸ್ಟ್ ಹುಟ್ಟುಹಬ್ಬ ಮೈ ಲವ್, ಲೆಟ್ಸ್ ದ ಅಡ್ವೆಂಚರ್ ಬಿಗಿನ್ ಎಂದು ತಾಯಿಗೆ ದೇವರಿಗಿಂತಲೂ ಹೆಚ್ಚಿನ ಸ್ಥಾನ ನೀಡುವ ಮೂಲಕ ಮುದ್ದಾಗಿ ವಿಶ್ ಮಾಡಿದ್ದಾರೆ. 
 

ತಮ್ಮ ಫ್ಯಾಷನ್ ಸೆನ್ಸ್‌ನಿಂದಾನೇ ಹೆಸರು ಮಾಡಿರುವ ನಟಿ ಸಾನ್ಯಾ ಅಯ್ಯರ್, ಸೋಶಿಯಲ್ ಮಿಡಿಯಾದಲ್ಲಿ (Social media) ಸಖತ್ ಆಕ್ಟೀವ್ ಆಗಿರುತ್ತಾರೆ, ಹೆಚ್ಚಾಗಿ ಇವರು ತಮ್ಮ ಅಮ್ಮನ ಜೊತೆಗಿನ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಅಮ್ಮನೇ ಸಾನ್ಯಾರ ಬೆಸ್ಟ್ ಫ್ರೆಂಡ್ ಕೂಡ ಹೌದು ಅನ್ನೋದನ್ನು ಹಲವು ಬಾರಿ ನಟಿ ಹೇಳಿಕೊಂಡಿದ್ದಾರೆ. 
 

ಸಾನ್ಯಾ ಅಮ್ಮ ದೀಪಾ ಅಯ್ಯರ್ ಸಹ ನಟಿಯಾಗಿದ್ದು, ಹಲವಾರು ಸೀರಿಯಲ್ ಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಸಿನಿಮಾದಲ್ಲೂ ನಟಿಸಿದ್ದಾರೆ. ಇತ್ತೀಚೆಗೆ ಕೊನೆಗೊಂಡ ಲಕ್ಷಣ ಸೀರಿಯಲ್ ನಲ್ಲಿ ನಕ್ಷತ್ರ ತಾಯಿಯಾಗಿ ದೀಪಾ ನಟಿಸಿದ್ದರು. 
 

ಸಿಂಗಲ್ ಪೇರೆಂಟ್ ಆಗಿ ದೀಪಾ ಅಯ್ಯರ್, ಸಾನ್ಯಾರನ್ನು ಬೆಳೆಸಿದ್ದು, ಸಾನ್ಯಾರ ಪ್ರತಿ ಹೆಜ್ಜೆಯಲ್ಲೂ ಸಾತ್ ನೀಡುತ್ತಾ, ಅವರಿಗೆ ಬೆನ್ನೆಲುಬಾಗಿ ನಿಲ್ಲುವವರು ತಾಯಿ ರೂಪ ಅಯ್ಯರ್. ಇಬ್ಬರು ಹೆಚ್ಚಾಗಿ ಜೊತೆಯಾಗಿ ಪಾರ್ಟಿ ಮಾಡುತ್ತಾ, ಟ್ರಾವೆಲ್ ಮಾಡುತ್ತಿರುತ್ತಾರೆ. ಜೊತೆಗೆ ಫೊಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. 
 

ಸ್ಯಾಂಡಲ್ ವುಡ್ ನ ಫ್ಯಾಷನ್ ಐಕಾನ್ ಆಗಿ ಗುರುತಿಸಿಕೊಂಡಿರುವ ಸಾನ್ಯಾ ಅಯ್ಯರ್, ಅಭಿನಯದ ಗೌರಿ ಸಿನಿಮಾ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದ್ದು, ಇಂದ್ರಜಿತ್ ಲಂಕೇಶ್ ನಿರ್ದೇಶನದ ಮತ್ತು ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ ಈ ಚಿತ್ರ ಎಪ್ರಿಲ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. 
 

Latest Videos

click me!