ತಾಂಡವ್ ಪ್ರೀತಿಯಲ್ಲಿ ಬಿದ್ದು, ಭಾಗ್ಯನ ಸಂಸಾರಕ್ಕೇ ಕೊಳ್ಳಿ ಇಟ್ತಿರೋ ಶ್ರೇಷ್ಠಾ ರಿಯಲ್ ಲೈಫಲ್ಲಿ ಹೇಗೆ?

Published : Oct 06, 2023, 04:24 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯ ಲಕ್ಷ್ಮೀ ಸೀರಿಯಲ್ ನಲ್ಲಿ ತಾಂಡವ್ ನ ಪ್ರೀತಿಯಲ್ಲಿ ಬಿದ್ದು ಮನೆಯವರನ್ನೇ ದೂರ ಮಾಡೋ ಸೆಲ್ಫಿಶ್ ಶ್ರೇಷ್ಠಾ ರಿಯಲ್ ಲೈಫ್ ನಲ್ಲಿ ಹೇಗೆ ಅನ್ನೋದನ್ನು ನೋಡೋಣ.   

PREV
18
ತಾಂಡವ್ ಪ್ರೀತಿಯಲ್ಲಿ ಬಿದ್ದು, ಭಾಗ್ಯನ ಸಂಸಾರಕ್ಕೇ ಕೊಳ್ಳಿ ಇಟ್ತಿರೋ ಶ್ರೇಷ್ಠಾ ರಿಯಲ್ ಲೈಫಲ್ಲಿ ಹೇಗೆ?

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಮತ್ತು ಜನಮೆಚ್ಚಿದ ಧಾರಾವಾಹಿಗಳಲ್ಲಿ ಒಂದು ಎಂದರೆ ಅದು ಭಾಗ್ಯಲಕ್ಷ್ಮಿ (Bhagyalakshmi). ಅದರಲ್ಲಿ ಪ್ರತಿಯೊಂದು ಪಾತ್ರಗಳು ಸಹ ಜನ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಶ್ರೇಷ್ಠಾ ಪಾತ್ರವೂ ಅಷ್ಟೇ ಮುಖ್ಯ.
 

28

ಮದುವೆಯಾಗಿದೆ ಎಂದು ಗೊತ್ತಿದ್ದೂ, ತಾಂಡವ್ ಪ್ರೀತಿಯ ಬಲೆಯಲ್ಲಿ ಬಿದ್ದು, ಆತನನ್ನು ಮದುವೆಯಾಗಲು ಏನೆಲ್ಲಾ ಹರಸಾಹಸ ಮಾಡುತ್ತಾ, ಭಾಗ್ಯಳ ಸುಂದರ ಸಂಸಾರಕ್ಕೆ ಬೆಂಕಿ ಇಡುವ ಶ್ರೇಷ್ಠಾ ಪಾತ್ರದಲ್ಲಿ ನಟಿಸುತ್ತಿರುವ ನಟಿಯ ನಿಜವಾದ ಹೆಸರು ಕಾವ್ಯಾ ಗೌಡ (Kavya Gowda). 
 

38

ತನಗೆ ಬೇಕಾದ್ದನ್ನು ಪಡೇದೇ ತೀರುವ ಹಠ, ಸೆಲ್ಫಿಶ್ ಭಾವನೆ, ಹುಚ್ಚು ಪ್ರೀತಿ, ತನ್ನ ಪ್ರೀತಿಗಾಗಿ ಅಮ್ಮ ಅಪ್ಪನನ್ನೆ ದೂರ ಮಾಡುವ, ತನ್ನ ಯೋಜನೆಗೆ ಅಡ್ಡಿಯಾಗುತ್ತಿರುವವರನ್ನು ದಾರಿಯಿಂದ ಸರಿಸಲು ಏನು ಬೇಕಾದರೂ ಮಾಡಬಲ್ಲ ಹುಡುಗಿ ಶ್ರೇಷ್ಠಾ. ಈ ಪಾತ್ರಕ್ಕೆ ಕಾವ್ಯಾ ಗೌಡ, ನಿಜಕ್ಕೂ ಜೀವ ತುಂಬುತ್ತಿದ್ದಾರೆ. 
 

48

ಕಾವ್ಯಾ ಗೌಡಾಗೆ ಇದು ಮೊದಲ ಸೀರಿಯಲ್ ಅಲ್ಲ, ಹಲವು ವರ್ಷಗಳ ಹಿಂದೆ ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ ಸೀರಿಯಲ್ ನಲ್ಲಿ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಆದರೆ ಕೆಲವೇ ದಿನಗಳಲ್ಲಿ ಸೀರಿಯಲ್ ಬಿಡಬೇಕಾಗಿ ಬಂತು. ಬಳಿಕ ಐದು ವರ್ಷಗಳ ಕಾಲ ತೆಲುಗು ಕಿರುತೆರೆಯಲ್ಲಿ ಮಿಂಚಿದ ನಟಿ ಇವರು. 
 

58

ಇನ್ನು ಕಾವ್ಯಾ ಗೌಡ ಸಿನಿಮಾದಲ್ಲೂ ನಟಿಸಿದ್ದಾರೆ. ವಿಜಯ್ ರಾಘವೇಂದ್ರ ಜೊತೆ ರಿಂಗ ರಿಂಗ ರೋಸಸ್ ಸಿನಿಮಾದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ ಶೋಧ ಎನ್ನುವ ಚಿತ್ರದಲ್ಲೂ ನಟಿಸಿದ್ದಾರೆ. ಇದಾದ ಬಳಿಕ ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 
 

68

ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಮೊದಲು ಗೌತಮಿ ಗೌಡ ಶ್ರೇಷ್ಠಾ ಪಾತ್ರ ನಿರ್ವಹಿಸುತ್ತಿದ್ದರು. ಆ ಪಾತ್ರಕ್ಕೆ ಕಾವ್ಯಾ ಬಂದಾಗ, ಮೊದಲಿಗೆ ಈ ಪಾತ್ರ ಮಾಡಲು ಸಾಧ್ಯವೇ ಎನ್ನುವ ಭಯ ಇತ್ತಂತೆ ಇವರಿಗೆ. ಅಳುಮುಂಜಿ ಪಾತ್ರಗಳನ್ನೆ ಮಾಡುತ್ತಾ ಬಂದಿದ್ದ ಕಾವ್ಯಾಗೆ ಈ ಪಾತ್ರ ಚಾಲೆಂಜಿಗ್ ಆಗಿತ್ತಂತೆ. 
 

78

ಸದ್ಯಕ್ಕಂತೂ ಶ್ರೇಷ್ಠಾ ಪಾತ್ರಕ್ಕೆ ಜೀವ ತುಂಬಿರೋ ನಟಿಯನ್ನು ಜನರು ಗುರುತು ಹಿಡಿಯುತ್ತಿರುವುದು ಸಂತೋಷ ತಂದಿದೆ ಅಂತೆ. ತುಂಬಾ ಜನ ಬೈದಿದ್ದು ಇದೆಯಂತೆ. ಒಬ್ಬರು ಬಂದು, ಬಿಟ್ಟು ಬಿಡಿ ತಾಂಡವನ್ನು ನಿಮಗೆ ಬೇರೊಬ್ಬ ಹುಡುಗ ಸಿಗ್ತಾನೆ ಅಂತಾನೂ ಹೇಳಿದ್ರಂತೆ. ಜನ ಹೆಚ್ಚು ಬೈದ್ರೆ ನನ್ನ ಪಾತ್ರ ಮತ್ತು ನಟನೆ ಬಗ್ಗೆ ಖುಷಿಯಾಗುತ್ತೆ ಎನ್ನುತ್ತಾರೆ ಕಾವ್ಯಾ. 
 

88

ಬೆಂಗಳೂರಿನವರೇ ಆದ ಕಾವ್ಯಾ ಸೀರಿಯಲ್ ನಲ್ಲಿ ಇರುವಂತೆ ನಿಜ ಜೀವನದಲ್ಲೂ ಸಖತ್ ಸ್ಟೈಲಿಶ್ ಆಗಿದ್ದಾರೆ. ಅದನ್ನು ಅವರ ಸೋಶಿಯಲ್ ಮೀಡಿಯಾ ನೋಡಿದ್ರೇನೆ ತಿಳಿಯುತ್ತೆ. ಆದರೆ ಶ್ರೇಷ್ಠಾ ಅಂತ ವ್ಯಕ್ತಿತ್ವ ಮಾತ್ರ ನನ್ನದಲ್ಲ, ನಾನು ತುಂಬಾನೆ ಸಾಫ್ಟ್ ಹುಡುಗಿ ಎನ್ನುತ್ತಾರೆ ಕಾವ್ಯ ಗೌಡ. 
 

Read more Photos on
click me!

Recommended Stories