ಮಗಳ ಭರತನಾಟ್ಯ ರಂಗಪ್ರವೇಶ : ಖುಷಿಯಲ್ಲಿ ಅಮ್ಮ ಸುಧಾರಾಣಿ

Published : Oct 06, 2023, 03:41 PM IST

ಕನ್ನಡದ ಎವರ್ ಗ್ರೀನ್ ನಟಿ ಸುಧಾರಾಣಿಯವರ ಪುತ್ರಿ ನಿಧಿ ಇದೀಗ ಭರತನಾಟ್ಯ ರಂಗಪ್ರವೇಶ ಮಾಡಿದ್ದು, ಮಗಳ ಜೀವನದ ದೊಡ್ಡ ಸಾಧನೆಯ ಬಗ್ಗೆ ಹೆಮ್ಮೆಪಟ್ಟುಕೊಂಡಿರುವ ಸುಧಾರಾಣಿ ಈ ಕುರಿತು ವಿಡೀಯೋಗಳನ್ನು ಹಂಚಿಕೊಂಡಿದ್ದಾರೆ.   

PREV
17
ಮಗಳ ಭರತನಾಟ್ಯ ರಂಗಪ್ರವೇಶ : ಖುಷಿಯಲ್ಲಿ ಅಮ್ಮ ಸುಧಾರಾಣಿ

ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ನಟಿ ಸುಧಾರಾಣಿ (Sudharani). ಅವರ ನಟನೆ, ಸೌಂದರ್ಯ ಎಲ್ಲವೂ ಹಿಂದೆ ಇದ್ದಂತೆ ಇಂದಿಗೂ  ಮೋಹಕವಾಗಿದೆ. ಇವರ ಪುತ್ರಿ ನಿಧಿ ಕೂಡ ಪ್ರತಿಭಾನಿತ್ವೆ ಅನ್ನೋದರಲ್ಲಿ ಎರಡು ಮಾತಿಲ್ಲ. ಈ ಕುರಿತು ಸ್ವತಃ ಅಮ್ಮ ಸುಧಾರಾಣಿ ಹೆಮ್ಮೆಪಟ್ಟುಕೊಂಡಿದ್ದಾರೆ. 
 

27

ಸುಧಾರಾಣಿ ಮತ್ತು ಗೋವರ್ಧನ್ ವಿವಾಹ 2000 ನೇ ಇಸವಿಯಲ್ಲಿ ನಡೆಯಿತು. ಗೋವರ್ಧನ್ ಸುಧಾರಾಣಿಯವರ ಜೀವನದ ಬೆಳಕು ಅಂತಾನೆ ಹೇಳಬಹುದು. ಇವರಿಬ್ಬರಿಗೆ 2001ರಲ್ಲಿ ಜನಿಸಿದ ಪುತ್ರಿ ನಿಧಿ (Nidhi). ಈಕೆಗೆ ಈಗ 22 ವರ್ಷ. 
 

37

ಸುಧಾರಾಣಿಯವರು ತಮ್ಮ ಮುದ್ದಿನ ಮಗಳನ್ನು ಪ್ರೀತಿಯಿಂದ ಸುಬ್ಬಿ ಕುಟ್ಟಿ ಎನ್ನುತ್ತಾರೆ. ತಮ್ಮ ಮಗಳ ಬಗ್ಗೆ, ಫ್ಯಾಮಿಲಿ, ನಾಯಿಗಳ ಜೊತೆಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ನಟಿ ಶೇರ್ ಮಾಡುತ್ತಿರುತ್ತಾರೆ. 
 

47

ನಿಧಿ ಸಿಬಿಎಸ್ ಸಿ ಉನ್ನತ ಶ್ರೇಣಿಯಲ್ಲಿ ಪಾಸ್ ಆಗಿದ್ದರು. ಆ ಸಂದರ್ಭದಲ್ಲಿ ಸುಧಾರಾಣಿ ಈ ಸಂತಸವನ್ನು ಹಂಚಿಕೊಂಡಿದ್ದರು. ಇದೀಗ ಸಂಗೀತ, ನೃತ್ಯದಲ್ಲಿ ಪ್ರವೀಣೇಯಾಗಿರುವ ನಿಧಿಯ ಜೀವನದ ಹೆಮ್ಮೆಯ ಕ್ಷಣದ ಬಗ್ಗೆ ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (Social media) ಹಂಚಿಕೊಂಡಿದ್ದಾರೆ. 
 

57

ನಿಧಿ ಇತ್ತೀಚೆಗಷ್ಟೇ ಭರತನಾಟ್ಯ (Bharatanatya) ರಂಗಪ್ರವೇಶ ಮಾಡಿದ್ದು, ಮಗಳ ಅಧ್ಬುತ ಸಾಧನೆಯ ಕ್ಷಣಗಳನ್ನು ಸೆರೆಹಿಡಿದಿರುವ ನಟಿ, ಅದನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ರಂಗಪ್ರವೇಶ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂದಿದೆ ಎಂದು ಸಹ ನಟಿ ಹೇಳಿದ್ದಾರೆ. 
 

67

ನಿಧಿ ಹಲವಾರು ವರ್ಷಗಳಿಂದ ಭರತನಾಟ್ಯ ಕಲಿಯುತ್ತಿದ್ದಾರೆ. ಜೊತೆಗೆ ಸಂಗೀತ ಕೂಡ ಕಲಿತಿದ್ದಾರೆ, ಅಷ್ಟೇ ಅಲ್ಲದೇ ಸಂಗೀತ ಸಾಧನಗಳನ್ನು ಇವರು ನುಡಿಸುತ್ತಾರೆ. ಭರತನಾಟ್ಯದ ಅತ್ಯಂತ ದೊಡ್ಡ ಹೆಜ್ಜೆ ರಂಗಪ್ರವೇಶ, ಹಾಗಾಗಿ ಮಗಳ ರಂಗಪ್ರವೇಶದ ದಿನ ಹೊಟ್ಟೆಯಲ್ಲಿ ಚಿಟ್ಟೆ ಹಾರಾಡುತ್ತಿರುವ ಅನುಭವ ಆಗಿತ್ತು ಎನ್ನುತ್ತಾರೆ ನಟಿ. 
 

77

ಇನ್ನು ನಟಿ ಸುಧಾರಾಣಿಯವರ ಬಗ್ಗೆ ಹೇಳೋದಾದರೆ ಕನ್ನಡ ಸಿನಿಮಾರಂಗದಲ್ಲಿ ಮಿಂಚಿದ ಈ ನೀಳ ಸುಂದರಿ ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ(serial) ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತುಳಸಿ ಪಾತ್ರದ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ ನಟಿ. 
 

Read more Photos on
click me!

Recommended Stories