ತಮ್ಮ ಸೀರಿಯಲ್ ಲೈಫ್ ಸೀಕ್ರೆಟ್ ರಿವೀಲ್ ಮಾಡಿದ ರಾಮಚಾರಿ -ಚಾರು

First Published | Dec 26, 2023, 4:50 PM IST

ದಾವಣಗೆರೆಯಲ್ಲಿ ಸೀರಿಯಲ್ ಸಂತೆ ಸಂಭ್ರಮದಲ್ಲಿ ಎಂಜಾಯ್ ಮಾಡುತ್ತಿರುವ ರಾಮಾಚಾರಿಯ ಜೋಡಿಗಳಾದ ರಾಮಾಚಾರಿ ಮತ್ತು ಚಾರು ಇದೀಗ ತಮ್ಮ ಸೀರಿಯಲ್ ಲೈಫ್ ನ ಒಂದಷ್ಟು ಸೀಕ್ರೆಟ್ ಗಳನ್ನು ರಿವೀಲ್ ಮಾಡಿದ್ದಾರೆ. 
 

ವಿಭಿನ್ನ ತಿರುವುಗಳೊಂದಿಗೆ ಜನರ ಕುತೂಹಲ ಕೆರಳಿಸುತ್ತಾ ಸಾಗುತ್ತಿರುವ ರಾಮಾಚಾರಿ (Ramachari) ಸೀರಿಯಲ್ ಜನರ ಮೆಚ್ಚಿನ ಧಾರವಾಹಿಯಾಗಿರೋದ್ರಲ್ಲಿ ಸಂಶಯವೇ ಇಲ್ಲ. ಸದ್ಯ ಸೀರಿಯಲ್ ತಂಡ ದಾವಣಗೆರೆಯಲ್ಲಿ ಸೀರಿಯಲ್ ಸಂತೆಯ ಸಂಭ್ರಮದಲ್ಲಿದೆ.
 

ಸೀರಿಯಲ್ ಸಂತೆಯ (Serial Sante) ಸಂಭ್ರಮದ ನಡುವೆ ಕಲರ್ಸ್ ಕನ್ನಡ ಚಾನೆಲ್, ಚಾರು ಮತ್ತು ರಾಮಚಾರಿ ಖ್ಯಾತಿಯ ಮೌನ ಗುಡ್ಡೆಮನೆ ಮತ್ತು ರಿತ್ವಿಕ್ ಕೃಪಾಕರ್ ಅವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದು, ಆ ಪ್ರಶ್ನೆಗಳು ಮೂಲಕ ಈ ಜೋಡಿಗಳು ತಮ್ಮ ಜೀವನದ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. 
 

Tap to resize

ರಾಮಾಚಾರಿ ಹಾಗೂ ಚಾರು ಇಬ್ಬರು ಕೂಡ ಸೀರಿಯಲ್ ಸೆಟ್ನಲ್ಲಿ ಏನು ಮಾಡುತ್ತಾರೆ ಮತ್ತು ಏನು ಮಾಡುವುದಿಲ್ಲ ಎಂಬುದನ್ನು ತಿಳಿಸಿದ್ದಾರೆ. ಯಾರು ಅತಿ ಹೆಚ್ಚು ಸುಳ್ಳು ಹೇಳುತ್ತಾರೆ ಯಾರು ಡಯಟ್ ಚೀಟ್ ಮಾಡ್ತಾರೆ, ಅನ್ನೋದನ್ನೆಲ್ಲಾ ರಿವೀಲ್ ಮಾಡಿದ್ದಾರೆ. ಪ್ರಶ್ನೆಗಳು ಮತ್ತು ಉತ್ತರ ಇಲ್ಲಿ ಕೆಳಗೆ ಇವೆ. ನೀವೇ ನೋಡಿ… 
 

ಸೀರಿಯಲ್ ಸೆಟ್‌ಗೆ ಯಾರು ಲೇಟ್‌ ಆಗಿ ಬಂದು ಸುಳ್ಳು ಹೇಳಿದ್ದೀರಾ?  
ರಾಮಾಚಾರಿ  :
ಯಾವಾಗ್ಲೂ ಜಿಮ್ ಹೋಗಿ ಬರೋದಕ್ಕೆ ಲೇಟ್ ಆಗೋದು, ಹಾಗಾಗಿ ಪದೇ ಪದೇ ಅದನ್ನ ಹೇಳೋ ಬದಲು ನಾನು‌ ಕೆಲವು ಸಲ  ಬೈಕ್ ಕೆಟ್ಟು ಹೋಯಿತು ಎಂದೆಲ್ಲ ಕಾರಣ ಕೊಟ್ಟಿರುವುದಾಗಿ ತಿಳಿಸಿದ್ದಾರೆ. 
ಚಾರು : ನಾನು ಲೇಟ್ ಆಗಿ‌ ಬರೋದಿದ್ರೆ ಮೊದಲೇ ಹೇಳಿರ್ತಿನಿ ಆದ್ರೆ ಸುಳ್ಳು ಹೇಳಿಲ್ಲ. 

ಕಾಮೆಂಟ್ಸ್ ಓದಿ ಖುಷಿ ಪಟ್ಟಿದ್ದೀರಾ? 
ರಾಮಾಚಾರಿ :
ನಾನು ನನಗೆ ಬರುವ ಕಾಮೆಂಟ್ಸ್ ಓದೋದಿಲ್ಲ ಎಂದಿದ್ದಾರೆ. 
ಚಾರು : ನಾನು ಎಲ್ಲಾ ಕಾಮೆಂಟ್ಸ್ (comments) ಓದಿ ಪಾಸಿಟಿವ್ ಆಗಿ ಅದನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. 

ಕನ್ನಡಿ ಮುಂದೆ ನಿಂತು ಕ್ರೇಜಿ ಪೋಸ್ ಕೊಡುವ ಅಭ್ಯಾಸ ಇದೆಯಾ? 
ರಾಮಾಚಾರಿ :
ಬೇರೆ ಬೇರೆ ಪಾತ್ರಗಳನ್ನು ಹೆಚ್ಚಾಗಿ ಕನ್ನಡಿ ಮುಂದೇನೆ ನಿಂತು ಪ್ರಾಕ್ಟೀಸ್ ಮಾಡಿರೋದು. ಕನ್ನಡಿ ನನ್ನ ಇನ್ನೊಂದು ಫ್ರೆಂಡ್ ಇದ್ದ ಹಾಗೆ. 
ಚಾರು : ಹೆಣ್ಣು ಮಕ್ಕಳು ಅಂದ ಮೇಲೆ ಮಿರರ್ ಬಗ್ಗೆ ಹೇಳೋದೆ ಬೇಡ. ಅದು ಬೆಸ್ಟ್ ಫ್ರೆಂಡ್ ಇದ್ದ ಹಾಗೆ ಎಂದಿದ್ದಾರೆ. 
 

ತುಂಬಾ ಟೇಕ್ಸ್ ತೆಗೆದುಕೊಂಡಿರೋದಕ್ಕೆ ಸಹನಟರ ಮೇಲೆ ಕೋಪ ಬಂದಿದ್ಯಾ? 
ರಾಮಾಚಾರಿ :
ಸೆಗಣಿ ಹಾಕ್ಬೇಡ ಬಕೆಟ್ ಹಿಡಿತೀವಿ ಅಂತ ರೇಗಿಸ್ತೀವಿ.
ಚಾರು : ತುಂಬಾ ಟೇಕ್ಸ್ ತೆಗೆದು ಕೊಂಡಾಗ ತುಂಬಾ ಸಿಟ್ಟು ಬಂದಿರುತ್ತೆ, ಆದ್ರೆ ಹೇಳೋದಕ್ಕೆ ಆಗಲ್ಲ ಹಾಗೆ ಸುಮ್ಮನಿದ್ದು ಬಿಡ್ತೀನಿ. 

ಡಯಟ್ ಚೀಟ್ ಮಾಡಿದ್ದೀರಾ? 
ರಾಮಾಚಾರಿ :
ನಾನು ಚೀಟ್ (diet cheat) ಮಾಡೋದು ಅಪರೂಪಕ್ಕೆ, ಮೂರು ನಾಲ್ಕು ದಿನ ಔಟ್ ಡೋರ್ ಶೂಟ್ ಇದ್ದಾಗ, ಬಾಕ್ಸ್ ತೆಗೆದುಕೊಂಡು ಹೋಗೋದಕ್ಕೆ ಆಗದೇ ಇದ್ದಾಗ ಚೀಟ್ ಮಾಡಿದ್ದು ಇದೆ. 
ಚಾರು :  ನನ್ನ ಡಯಟ್ (Diet) ನಾನೆ ಮಾಡ್ಕೊಂಡಿರೋದು. ನಾನು ಹೆಚ್ಚಾಗಿ ಚೀಟ್ ಮಾಡ್ತಾ ಇರ್ತೀನಿ ಅಂದಿದ್ದಾರೆ. 

Latest Videos

click me!