ಅಗ್ನಿಸಾಕ್ಷಿ, ರಾಮಾಚಾರಿ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಖ್ಯಾತ ಕಿರುತೆರೆ ನಟಿ ಐಶ್ವರ್ಯ ಸಾಲಿಮಠ್ ಮತ್ತು ನಟ ವಿನಯ್ ಅವರು ಪೋಷಕರಾಗುವ ಸಂಭ್ರಮದಲ್ಲಿದ್ದಾರೆ. ಇದೀಗ ಅದ್ದೂರಿಯಾಗಿ ಸೀಮಂತ ಮಾಡಿಕೊಂಡಿದ್ದು ಫೋಟೊಗಳನ್ನು ಹಂಚಿಕೊಂಡಿದ್ದಾರೆ.
‘ಅಗ್ನಿಸಾಕ್ಷಿ’, ‘ರಾಮಾಚಾರಿ’ , ‘ಸೇವಂತಿ’ ಸೇರಿ ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳಲ್ಲಿ ನೆಗೆಟಿವ್ ಪಾತ್ರಗಳಲ್ಲಿ ನಟಿಸಿದ್ದ ನಟಿ ಐಶ್ವರ್ಯ ಸಾಲಿಮಠ. ಅವರ ಪತಿ ವಿನಯ್ ಜು ಕೂಡ ಕಿರುತೆರೆಯ ಖ್ಯಾತ ನಟ. ಈ ಜೋಡಿ ಇದೀಗ ಮೊದಲ ಬಾರಿಗೆ ಪೋಷಕರಾಗುವ ಸಂಭ್ರಮದಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ತಮ್ಮ ಮುದ್ದಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
25
ಸೀಮಂತ ಸಂಭ್ರಮದಲ್ಲಿ ಐಶ್ವರ್ಯ
ಐಶ್ವರ್ಯ ಸಾಲಿಮಠ ಇದೀಗ ತುಂಬು ಗರ್ಭಿಣಿಯಾಗಿದ್ದು, ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಿಕೊಂಡಿದ್ದಾರೆ. ಪೋಷಕರಾಗಿ ಬಡ್ತಿ ಪಡೆಯುತ್ತಿರುವ ಜೋಡಿ, ಇನ್’ಸ್ಟಾಗ್ರಾಂನಲ್ಲಿ ಸೀಮಂತ ಶಾಸ್ತ್ರದ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸಂಭ್ರಮವನ್ನು ಶೇರ್ ಮಾಡಿಕೊಂಡಿದ್ದಾರೆ. ತಿಂಗಳ ಹಿಂದೆಯೂ ಐಶ್ವರ್ಯ ಅವರ ಸೀಮಂತ ನಡೆದಿದ್ದು, ಇದೀಗ ಮತ್ತೆ ಅಮ್ಮನ ಮನೆಯ ಕಡೆಯಿಂದ ನಡೆಯುವ ಸೀಮಂತ ಶಾಸ್ತ್ರದಂತೆ ಕಾಣಿಸುತ್ತಿದೆ.
35
ಪೋಷಕರಾಗಿ ಭಡ್ತಿ ಪಡೆಯುತ್ತಿರುವ ಐಶ್ವರ್ಯ -ವಿನಯ್
2022ರಲ್ಲಿ ಐಶ್ವರ್ಯಾ ಸಾಲಿಮಠ ಮತ್ತು ವಿನಯ್ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಬಳಿಕ ‘ರಾಜಾ ರಾಣಿ’ ರಿಯಾಲಿಟಿ ಶೋನಲ್ಲಿ ಈ ಜೋಡಿ ಸ್ಪರ್ಧಿಸಿದ್ದರು. ಇದೀಗ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಐಶ್ವರ್ಯ ‘ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. ಪೋಷಕರಾಗಿ ಭಡ್ತಿ ಪಡೆಯುತ್ತಿರುವ ಜೋಡಿಗೆ ಅಭಿಮಾನಿಗಳು ಶುಭ ಕೋರಿದ್ದಾರೆ. ಜೊತೆಗೆ ಆರೋಗ್ಯಯುತ ಮಗು ಜನಿಸಲಿ ಎಂದು ಹಾರೈಸಿದ್ದಾರೆ.
ಐಶ್ವರ್ಯಾ ಸಾಲೀಮಠ ಹಾಗೂ ವಿನಯ್ ಗಣೇಶ ಹಬ್ಬದ ದಿನ ಈ ಸಿಹಿ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಆ ಸಂದರ್ಭದಲ್ಲಿ ನಟಿ ತಮ್ಮ ಮುದ್ದಾದ ಫೋಟೊ ಹಂಚಿಕೊಂಡು, “ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ನಮ್ಮ ಸಣ್ಣ ಸೀಕ್ರೇಟ್‌ನ್ನು ಹಂಚಿಕೊಳ್ಳುವ ಸಮಯವಿದು. ಈ ವಿಶೇಷ ದಿನದಂದು ನಾವು ಪಾಲಕರಾಗುತ್ತಿದ್ದೇವೆ ಎಂದು ಘೋಷಿಸಲು ನಮಗೆ ತುಂಬಾ ಸಂತೋಷವಾಗುತ್ತಿದೆ. ನಾವು ಪಾಲಕರಾಗುತ್ತಿದ್ದೇವೆ. ದೇವರು ನಾವು ಕೇಳಿದ್ದಕ್ಕಿಂತ ಹೆಚ್ಚಿನದನ್ನು ನಮಗೆ ಆಶೀರ್ವದಿಸಿದ್ದಾನೆ. ಕೊನೆಗೂ ನಮ್ಮ ಕುಟುಂಬ ಬೆಳೆಯುತ್ತಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳನ್ನು ನಮಗೆ ನೀಡಿ, ದೃಷ್ಟಿ ಹಾಕಬೇಡಿ” ಎಂದಿದ್ದಾರೆ.
55
ಪ್ರೀತಿ ಶುರುವಾಗಿದ್ದು ಹೀಗೆ
ಇನ್ನು ಈ ಜೋಡಿಯ ಪ್ರೀತಿಯ ಕಥೆಯೂ ಅಷ್ಟೇ ಮುದ್ದಾಗಿದೆ. 2016 ಜೂನ್ 7ರಂದು ‘ಮಹಾಸತಿ’ ಧಾರಾವಾಹಿ ಪ್ರೋಮೋ ಶೂಟಿಂಗ್‌ನಲ್ಲಿ ಇವರಿಬ್ಬರ ಭೇಟಿಯಾಗಿತ್ತು. ಆ ಧಾರಾವಾಹಿಯಲ್ಲಿ ವಿನಯ್ ಹೀರೋ ಆಗಿದ್ದರು. ಇದಾದ ಬಳಿಕ ವಿನಯ್ ಹಾಗೂ ಐಶ್ವರ್ಯಾ ಅವರು ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸಿದರು. ಆದರೆ ಅವರ ಸ್ನೇಹ ಗಟ್ಟಿಯಾಗಿ ಪ್ರೀತಿಗೆ ತಿರುಗಿತ್ತು. ಮೂಲತಃ ಉತ್ತರ ಕರ್ನಾಟಕದವರಾದ ಈ ಜೋಡಿ ಕುಟುಂಬದವರ ಒಪ್ಪಿಗೆ ಪಡೆದು 2022ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಐಶ್ವರ್ಯಾ ಅವರು ‘ಅಗ್ನಿಸಾಕ್ಷಿ’, ‘ಸೇವಂತಿ’, ‘ಸರಯೂ’, ‘ರಾಮಾಚಾರಿ’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ವಿನಯ್ ಕೂಡ ಕೆಲ ಸೀರಿಯಲ್, ಸಿನಿಮಾಗಳಲ್ಲಿ ನಟಿಸಿದ್ದಾರೆ.