ಸೀತೆ, ಹನುಮಂತ, ಕೃಷ್ಣ, ದ್ರೌಪದಿ ನಂತರ ರಾಮನೂ ಬಿಜೆಪಿಗೆ!

First Published | Mar 20, 2021, 10:19 AM IST

ಸಿನಿಮಾ ನಟರು ರಾಜಕೀಯಕ್ಕೆ ಸೇರುವುದು ಹೊಸದೇನಲ್ಲ. ಹಿಂದಿನಿಂದಲೂ ಬಹಳಷ್ಟು ಸ್ಟಾರ್ಸ್‌ ರಾಜಕೀಯದಲ್ಲಿ ಸಕ್ರಿಯವಾಗಿರುವ ಉದಾಹರಣೆಗಳಿವೆ. ಪ್ರಸ್ತುತ 1980ರ ಫೇಮಸ್‌ ಧಾರವಾಹಿ ರಾಮಾಯಾಣದಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ಅರುಣ್‌ ಗೋವಿಲ್‌ ಬಿಜೆಪಿ ಪಕ್ಷ ಸೇರಿದ್ದಾರೆ. ಅವರು ದೆಹಲಿಯಲ್ಲಿ ಪಕ್ಷದ ಸದಸ್ಯತ್ವ ಪಡೆದುಕೊಂಡರು. ರಾಮಯಾಣದ ಸೀತಾ, ರಾವಣ ಜೊತೆಗೆ ಕೃಷ್ಣ ಹಾಗೂ ಹಲವು ಟಿವಿ ಮತ್ತು ಸಿನಿಮಾ ಕಲಾವಿದರ ದೊಡ್ಡ ತಂಡವೇ ಬಿಜೆಪಿಯಲ್ಲಿದೆ.

ರಾಮಾಯಣ ಸೀರಿಯಲ್‌ನಲ್ಲಿ ರಾಮನ ಪಾತ್ರ ಮಾಡಿ ಮನೆಮನೆಯಲ್ಲೂ ಜನಪ್ರಿಯವಾಗಿದ್ದ ಅರುಣ್‌ ಗೋವಿಲ್‌ ಬಿಜೆಪಿಗೆ ಸೇರಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ರಾಮಾಯಣ ಮತ್ತೆ ಪ್ರಸಾರವಾದಾಗ, ಈ ಧಾರಾವಾಹಿಯ ಪಾತ್ರಗಳು ಮತ್ತೆ ಚರ್ಚೆಗೆ ಬಂದಿವೆ..
ಜನವರಿ 12, 1958ರಂದು ಮೀರತ್‌ನಲ್ಲಿ ಜನಿಸಿದ ಅರುಣ್ ಗೋವಿಲ್ ಸಹರಾನ್ಪುರ್ ಮತ್ತು ಶಹಜಹಾನ್ಪುರದಲ್ಲಿ ಶಾಲಾ ಶಿಕ್ಷಣವನ್ನು ಮಾಡಿದರು. ನಂತರ ಮಥುರಾದಿಂದ ಬಿಎಸ್ಸಿ ಮಾಡಿದರು. ಗುರುವಾರ ದೆಹಲಿಯಲ್ಲಿ ಬಿಜೆಪಿ ಸೇರಿದ ಅರುಣ್ ಗೋವಿಲ್ ಈಗ ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗಾಗಿ ಪ್ರಚಾರ ನಡೆಸಲಿದ್ದಾರೆ. ಅರುಣ್ ಗೋವಿಲ್ 1988ರ ಸುಮಾರಿಗೆ ಕಾಂಗ್ರೆಸ್‌ನಲ್ಲಿದ್ದರು.
Tap to resize

ರಾವಣ ಅಂದರೆ ಅರವಿಂದ ತ್ರಿವೇದಿ ಕೂಡ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಅವರು ಸಂಸತ್ತಿನಲ್ಲಿ ಸೀತೆ ಪಾತ್ರ ಮಾಡಿದ್ದ ದೀಪಿಕಾ ಚಿಖಲಿಯಾ ಅವರೊಂದಿಗೆ ಕಾಣಿಸಿಕೊಂಡಿದ್ದರು. 1991ರಲ್ಲಿ ಗುಜರಾತ್‌ನ ಸಬರ್ಕಂತ ಕ್ಷೇತ್ರದಿಂದ ಸಂಸತ್ತಿನ ಸದಸ್ಯರಾಗಿದ್ದರು.
ರಾಮಾಯಣದ ಸೀತಾ ಅಂದರೆ ದೀಪಿಕಾ ಚಿಖಲಿಯಾ 1991ರಲ್ಲಿ ಬರೋಡಾಲೋಕಸಭೆಯಿಂದ ಸಂಸದರಾಗಿ ಆಯ್ಕೆಯಾದರೆ, ಅರವಿಂದ ತ್ರಿವೇದಿ ಸಬರ್ಕಂತನಿಂದ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ದೀಪಿಕಾ 276,038 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ 241,850 ಮತಗಳನ್ನು ಪಡೆದರು.
ರಾಮಾಯಣದಲ್ಲಿ ಹನುಮಂತ ಪಾತ್ರಧಾರಿ ದಾರಾ ಸಿಂಗ್ ಕೂಡ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದರು. ಅವರು 2003 ರಿಂದ 2009ರವರೆಗೆ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿದ್ದರು.
ಮಹಾಭಾರತದಲ್ಲಿ ಶ್ರೀ ಕೃಷ್ಣ ಪಾತ್ರ ವಹಿಸಿದ್ದ ನಿತೀಶ್ ಭರದ್ವಾಜ್ ಅವರು 2004ರಲ್ಲಿ ಲೋಕಸಭಾ ಚುನಾವಣೆಯಲ್ಲಿ ದಿಗ್ವಿಜಯ್ ಸಿಂಗ್ ಅವರ ಸಹೋದರ ಲಕ್ಷ್ಮಣ್ ಸಿಂಗ್ ವಿರುದ್ಧ ಸ್ಪರ್ಧಿಸಿ ಸೋತರು. ಇದಕ್ಕೂ ಮೊದಲು 1996ರ ಚುನಾವಣೆಯಲ್ಲಿ ಅವರು ಜಮ್ಶೆಡ್ಪುರದಿಂದ ಸಂಸದರಾಗಿ ಆಯ್ಕೆಯಾದರು. ಈ ದಿನಗಳಲ್ಲಿ ಅವರು ರಾಜಕೀಯದಿಂದ ದೂರವಾಗಿದ್ದಾರೆ.
ಅನೇಕ ಚಿತ್ರಗಳಲ್ಲಿ ತಾಯಿಯ ಪಾತ್ರದಲ್ಲಿ ಕಾಣಿಸುವ ಕಿರಣ್ ಖೇರ್ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಿದ್ದರು. 2019ರ ಚುನಾವಣೆಯಲ್ಲಿ ಮತ್ತೆ ಆಯ್ಕೆಯಾದರು.
ಕ್ಯುಂಕಿ ಸಾಸ್ ಭೀ ಬಹು ಥಿ ಧಾರಾವಾಹಿ ಮೂಲಕ ಜನಪ್ರಿಯವಾಗಿದ್ದ ಸ್ಮೃತಿ ಇರಾನಿ ಇಂದು ಕೇಂದ್ರ ಸಚಿವ ಸಂಪುಟ ಸಚಿವೆ. ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಮೀರತ್‌ನಿಂದ ರಾಹುಲ್ ಗಾಂಧಿಯನ್ನು ಸೋಲಿಸಿದರು.
ಭೋಜ್‌ಪುರಿ ಮತ್ತು ಹಿಂದಿ ಸಿನಿಮಾಗಳ ಚಿರಪರಿಚಿತ ಮುಖ ರವಿ ಕಿಶನ್ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದರು. ನಂತರ 2017 ರಲ್ಲಿ ಬಿಜೆಪಿಗೆ ಸೇರಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಗೋರಖ್‌ಪುರ ಕ್ಷೇತ್ರದ ಚುನಾಯಿತ ಸಂಸದರು ಇವರು.
ಮನೋಜ್ ತಿವಾರಿ ದೆಹಲಿಯ ಬಿಜೆಪಿ ಉಸ್ತುವಾರಿ. ಈಶಾನ್ಯ ದೆಹಲಿಯ ಬಿಜೆಪಿ ಸಂಸದರಾಗಿರುವ ಇವರು ಭೋಜ್‌ಪುರಿ ಸಿನಿಮಾಗಳ ಫೇಮಸ್‌ ನಟ.
ಬಿ.ಆರ್.ಚೋಪ್ರಾರ ಮಹಾಭಾರತ ಧಾರಾವಾಹಿಯ ಯುಧಿಷ್ಠಿರ ಪಾತ್ರದಾರಿ ಗಜೇಂದ್ರ ಚೌಹಾನ್ ಎಫ್‌ಟಿಐಐ ಅಧ್ಯಕ್ಷರು. ಅವರು ಬಿಜೆಪಿಸಕ್ರಿಯ ಕಾರ್ಯಕರ್ತ.
ಬಾಬುಲ್ ಸುಪ್ರಿಯೋ ಪಶ್ಚಿಮ ಬಂಗಾಳದ ಅಸನ್ಸೋಲ್ಬಿಜೆಪಿ ಸಂಸದ ಹಾಗೂ ಕೇಂದ್ರದಲ್ಲಿ ಮಂತ್ರಿ ಕೂಡ ಆಗಿದ್ದಾರೆ. ಜನಪ್ರಿಯ ಗಾಯಕ ಬಾಬುಲ್ ಸುಪ್ರಿಯೋ ಅವರಿಗೆ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿಯೂ ಟಿಕೆಟ್ ನೀಡಲಾಗಿದೆ. ಇವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆಯೂ ಇದೆ.
2019ರ ಚುನಾವಣೆಯಲ್ಲಿಪಂಜಾಬ್‌ನ ಗುರುದಾಸ್‌ಪುರ ಕ್ಷೇತ್ರದಲ್ಲಿಬಿಜೆಪಿಯಂದ ಸನ್ನಿ ಡಿಯೋಲ್ ಸಂಸದರಾಗಿ ಆಯ್ಕೆಯಾದರು. ಅದೇ ಸಮಯದಲ್ಲಿ ಅವರ ಮಲತಾಯಿ ಹೇಮಾ ಮಾಲಿನಿ ಮಥುರಾದ ಸಂಸದರಾಗಿದ್ದಾರೆ. ಸನ್ನಿ ತಂದೆ ಧರ್ಮಂದ್ರ ಸಹ 15 ನೇ ಲೋಕಸಭಾ ಸದಸ್ಯರಾಗಿದ್ದವರು.
ಬಾಲಿವುಡ್‌ ನಟಿ ರೇಖಾ ಅವರನ್ನು ಬಿಜೆಪಿ ರಾಜ್ಯಸಭೆಗೆ ಆಯ್ಕೆ ಮಾಡಿತ್ತು.ಅದೇ ಸಮಯದಲ್ಲಿ, ನಟಿ ಜಯಪ್ರದಾ ಸಮಾಜವಾದಿ ಪಕ್ಷವನ್ನು ತೊರೆದು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೇರಿದರು.
ಮಹಾಭಾರತ ಧಾರಾವಾಹಿಯಲ್ಲಿ ದ್ರೌಪದಿ ಪಾತ್ರವನ್ನು ನಿರ್ವಹಿಸಿದ್ದ ರೂಪಾ ಗಂಗೂಲಿ ಬಿಜೆಪಿಯ ರಾಜ್ಯಸಭಾ ಸದಸ್ಯೆ..

Latest Videos

click me!