ಪುಣ್ಯವತಿ ಹ್ಯಾಂಡ್ಸಮ್ ಹುಡುಗ ಭುವನ್ ಬ್ರಹ್ಮಗಂಟು ಸೀರಿಯಲ್ ಹೀರೋ!

First Published | Mar 25, 2024, 3:49 PM IST

ಪುಣ್ಯವತಿ ಧಾರಾವಾಹಿಯಲ್ಲಿ ನಂದನ್ ಪಾತ್ರದಲ್ಲಿ  ಮಿಂಚಿದ್ದ ನಟ ಭುವನ್ ಸತ್ಯ ಇದೀಗ ಹೊಸದಾಗಿ ಪ್ರಾರಂಭವಾಗಲಿರುವ ಬ್ರಹ್ಮಗಂಟು ಸೀರಿಯಲ್ ನಲ್ಲಿ ನಾಯಕ ಆಗ್ತಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿದೆ. 
 

ಕೆಲ ತಿಂಗಳ ಹಿಂದಷ್ಟೇ ಕಲರ್ಸ್ ಕನ್ನಡವಾಹಿನಿಯಲ್ಲಿ (colors Kannada) ಪ್ರಸಾರವಾಗಿ ವರ್ಷದೊಳಗೆ ಕಥೆಯನ್ನು ಮುಗಿಸಿದ್ದ ಪುಣ್ಯವತಿ ಸೀರಿಯಲ್ ನೆನಪಿದೆಯಾ? ಪದ್ಮಿನಿ ಮತ್ತು ನಂದನ್ ಪ್ರೀತಿ, ಮದುವೆ ದಿನ ತಂಗಿ ಪೂರ್ವಿಯನ್ನು ಮದುವೆಯಾಗುವ ಕಥೆ ಹೊಂದಿದ ಸೀರಿಯಲ್ ನೆನಪಿದೆ ಅಲ್ವಾ? 
 

ಪುಣ್ಯವತಿ ಧಾರಾವಾಹಿಯಲ್ಲಿ ನಂದನ್ ಪಾತ್ರದಲ್ಲಿ ನಟಿಸಿದ್ದು, ಭುವನ್ ಸತ್ಯ (Bhuvan Satya). ತನ್ನ ನಟನೆಯ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದ ನಟ ಭುವನ್. ಈ ಹ್ಯಾಂಡ್ಸಮ್ ನಟ ಮೋಸ್ಟ್ ಸ್ಟೈಲಿಶ್ ಐಕಾನ್ ಅವಾರ್ಡ್ ಕೂಡ ಪಡೆದಿದ್ದರು. 
 

Tap to resize

ಇದೀಗ ಹೊಸ ವಿಷಯ ಏನೆಂದರೆ ಇದೇ ಭುವನ್ ಸತ್ಯ ಝೀ ಕನ್ನಡದಲ್ಲಿ ಪ್ರಸಾರವಾಗಲಿರುವ ಬ್ರಹ್ಮಗಂಟು (Bramhagantu) ಸೀರಿಯಲ್ ನಲ್ಲಿ ನಾಯಕನಾಗಿ ನಟಿಸ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. 
 

ಸೋಶಿಯಲ್ ಮೀಡಿಯಾಗಳಲ್ಲಿ (Social media) ಈ ಸುದ್ದಿ ಹರಿದಾಡುತ್ತಿದ್ದು, ಪುಣ್ಯವತಿಯ ಹ್ಯಾಂಡ್ಸಮ್ ಹುಡುಗ ಭುವನ್ ಬ್ರಹ್ಮಗಂಟು ಸೀರಿಯಲ್ ನಾಯಕ ಆಗ್ತಿದ್ದಾರೆ ಎನ್ನಲಾಗುತ್ತಿದೆ. ಬ್ರಹ್ಮಗಂಟು ಸೀರಿಯಲ್ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದ್ದು, ಜನಮನ ಗೆದ್ದಿದೆ. 
 

ಬ್ರಹ್ಮಗಂಟು ಅಕ್ಕ ತಂಗಿಯರ ಕಥೆಯಾಗಿದ್ದು, ಅಕ್ಕನಿಗಾಗಿ ತನ್ನ ಸರ್ವಸ್ವವನ್ನು ತ್ಯಾಗ ಮಾಡುವ ತಂಗಿಯ ಕಥೆ. ಅಕ್ಕ ಮಾಡುವ ಎಲ್ಲಾ ತಪ್ಪುಗಳನ್ನು ತನ್ನ ಮೇಲೆ ಎಳೆದುಕೊಂಡು ಸದಾ ಅಕ್ಕನಿಗಾಗಿ ಒಳ್ಳೆಯದನ್ನು ಬಯಸುವ ತಂಗಿಯ ಕಥೆ.
 

ಭುವನ್ ಡ್ಯಾನ್ಸರ್. ಅವರು ಈ ಹಿಂದೆ ಹಲವು ಕಡೆ ಡ್ಯಾನ್ಸ್ ಶೋಗಳನ್ನು ಸಹ ನೀಡಿದ್ದರು. ಪುಣ್ಯವತಿ ಸೀರಿಯಲ್‌ನಲ್ಲಿ ಇವರ ಪಾತ್ರವನ್ನು ಜನರು ಇಷ್ಟಪಟ್ಟಿದ್ದರು. ಇದೀಗ ಬ್ರಹ್ಮಗಂಟು ಸೀರಿಯಲ್‌ನಲ್ಲಿ ಇವರೇ ನಟಿಸುತ್ತಾರೆಯೇ? ನಟಿಸಿದ್ರೆ ಅವರ ಪಾತ್ರ ಹೇಗಿರಬಹುದು ಎನ್ನುವ ಕುತೂಹಲ ಹೆಚ್ಚಿದೆ. 
 

ನೀವು ಕೂಡ ಪುಣ್ಯವತಿಯ ನಂದನ್ ನನ್ನು ಮತ್ತೆ ನೀವು ತೆರೆ ಮೇಲೆ ನೋಡಬೇಕು ಎಂದು ಬಯಸಿದ್ರೆ ನೀವು ಕೂಡ ಬ್ರಹ್ಮಗಂಟು ಸೀರಿಯಲ್ ಆರಂಭವಾಗೋದಕ್ಕೆ ಕಾಯಬೇಕು. ಆದ್ರೆ ಅವರೇ ನಾಯಕನ ಪಾತ್ರ ಮಾಡುತ್ತಾರೋ ಅನ್ನೋದು ಇನ್ನೂ ರಿವೀಲ್ ಆಗಿಲ್ಲ.
 

Latest Videos

click me!