ಕಪ್ಪು ಹೈ ಸ್ಲಿಟ್ ಡ್ರೆಸ್‌ನಲ್ಲಿ ಮಿರ ಮಿರನೆ ಮಿಂಚಿದ ಪ್ರಿಯಾಂಕ ಶಿವಣ್ಣ!

Published : Oct 29, 2023, 04:08 PM ISTUpdated : Oct 29, 2023, 04:10 PM IST

ಸತ್ಯ ಸೀರಿಯಲ್ ನಟಿ ಪ್ರಿಯಾಂಕ ಶಿವಣ್ಣ ಕಪ್ಪು ಹೈ ಸ್ಲಿಟ್ ಡ್ರೆಸ್ ನಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಪ್ರಿಯಾಂಕರ ಈ ಲುಕ್ ನೋಡಿ ಅಭಿಮಾನಿಗಳು ವಾವ್ ಅಂದಿದ್ದಾರೆ.   

PREV
18
ಕಪ್ಪು ಹೈ ಸ್ಲಿಟ್ ಡ್ರೆಸ್‌ನಲ್ಲಿ ಮಿರ ಮಿರನೆ ಮಿಂಚಿದ ಪ್ರಿಯಾಂಕ ಶಿವಣ್ಣ!

ಸತ್ಯ ಸೀರಿಯಲ್ ನಲ್ಲಿ ನೆಗೆಟಿವ್ ಶೇಡ್ ನಲ್ಲಿ ನಟಿಸುತ್ತಿರುವ ನಟಿ ಪ್ರಿಯಾಂಕ ಶಿವಣ್ಣ (Priyanka Shivanna) ಹೊಸ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ತುಂಬಾನೆ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ. 

28

ಕಪ್ಪು ಮತ್ತು ಗೋಲ್ಡ್ ಬಣ್ಣದ ಹೈ ಸ್ಲಿಟ್ ಸ್ಕರ್ಟ್ ಮತ್ತು ಕ್ರಾಪ್ ಟಾಪ್ ಧರಿಸಿದ್ದು, ತುಂಬಾನೆ ಸುಂದರವಾಗಿ ಜೊತೆಗೆ ಬೋಲ್ಡ್ ಆಗಿ ಕಾಣಿಸಿದ್ದಾರೆ. ಅಭಿಮಾನಿಗಳಂತು ಬೆಂಕಿ, ಏಂಜಲ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 

38

ಝೀ ಕನ್ನಡದಲ್ಲಿ ಝೀ ಕುಟುಂಬನ ಅವಾರ್ಡ್ಸ್ ಕಾರ್ಯಕ್ರಮದ ನಾಮಿನೇಶನ್ ಪಾರ್ಟಿಗೆ ಪ್ರಿಯಾಂಕ ಈ ರೀತಿಯಾಗಿ ರೆಡಿಯಾಗಿದ್ದು, ತುಂಬಾನೆ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ. ಇವರ ಲುಕ್ ನೋಡಿ ಅಭಿಮಾನಿಗಳಂತೂ ಫಿದಾ ಆಗಿದ್ದಾರೆ. 

48

ಪ್ರಿಯಾಂಕ ಶಿವಣ್ಣರವರನ್ನು ಕಿರುತೆರೆಯ ಮೋಸ್ಟ್ ಬ್ಯೂಟಿಫುಲ್ ವಿಲನ್ (beautiful villain) ಎಂದೇ ಹೇಳಬಹುದು. ಇವರು ನಟಿಸಿದ ಅಗ್ನಿಸಾಕ್ಷಿ ಸೀರಿಯಲ್ ನ ಚಂದ್ರಿಕಾ ಪಾತ್ರ ಇಂದಿಗೂ ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದೆ. ವಿಲನ್ ಅಂದ್ರೆ ಹೀಗೆ ಇರಬೇಕು ಎನ್ನುವಷ್ಟು ಅದ್ಭುತವಾಗಿ ಪ್ರಿಯಾಂಕ ನಟಿಸಿದ್ದರು. 
 

58

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಅವನು ಮತ್ತು ಶ್ರಾವಣಿ ಸೀರಿಯಲ್ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟು ಪ್ರಿಯಾಂಕ ನಂತರ ಒಂದೂರಲ್ಲಿ ರಾಜಾ ರಾಣಿ, ಪರಿಣ, ಅಗ್ನಿಸಾಕ್ಷಿ, ಧಾರಾವಾಹಿಯಲ್ಲಿ ನಟಿಸಿದ್ದರು. 

68

ಕಿರುತೆರೆಯ ಅವಾರ್ಡ್ಸ್ ಸಮಾರಂಭಗಳಲ್ಲೂ ಜನಮೆಚ್ಚಿದ ಮಂಥರೆ, ಸ್ಟೈಲಿಶ್ ವಿಲನ್ ಅವಾರ್ಡ್ ಸಹ ಪಡೆದಿದ್ದರು. ಇನ್ನು ಇವರು ತೆಲುಗು ಸೀರಿಯಲ್ ಗಳಲ್ಲೂ ವಿಲನ್ ಆಗಿ ಅದ್ಭುತ ಅಭಿನಯ ನೀಡಿದ್ದರು. 

78

ತೆರೆಯ ಮೇಲೆ ವಿಲನ್ ಆಗಿ ಅಬ್ಬರಿಸಿದ ಪ್ರಿಯಾಂಕ ಅವರು ನಿಜವಾಗಿಯೂ ಹೇಗಿರ್ತಾರೆ ಅನ್ನೋದು ಗೊತ್ತಾಗಿದ್ದು ಮಾತ್ರ ಬಿಗ್ ಬಾಸ್ ನಲ್ಲಿ ಪ್ರಿಯಾಂಕ ರಾಕ್ಷಸ ರೂಪವನ್ನು ಮಾತ್ರ ಕಂಡ ಜನರಿಗೆ ಬಿಗ್ ಬಾಸ್ ನಲ್ಲಿ ಮುಗ್ಧೆ, ಫ್ರೆಂಡ್ಲಿ ಆಗಿರುವ ಪ್ರಿಯಾಂಕ ಮುಖ ಕಾಣಿಸಿತು. 
 

88

ಸದ್ಯ ಪ್ರಿಯಾಂಕ ಹಿರಿತೆರೆ ಮತ್ತು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಇವರು ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸತ್ಯಾ ಸೀರಿಯಲ್, ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಆನಂದರಾಗ ಸೀರಿಯಲ್ ನಲ್ಲಿ ಹಾಗೂ ಫ್ಯಾಂಟಸಿ ಎನ್ನುವ ಸಿನಿಮಾದಲ್ಲೂ ವಿಲನ್ ಆಗಿ ನಟಿಸುತ್ತಿದ್ದಾರೆ. 

Read more Photos on
click me!

Recommended Stories