ರಮೇಶ್ ಅರವಿಂದ್ ನಿರ್ಮಾಣದ ನೀನಾದೇ ನಾ ಸೀರಿಯಲ್‌ಗೆ 100ರ ಸಂಭ್ರಮ!

First Published Sep 9, 2023, 11:53 AM IST

ವಿಭಿನ್ನ ಕಥೆಯ ಮೂಲಕ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗಿರುವ ನೀನಾದೆ ನಾ ಸೀರಿಯಲ್ ಇದೀಗ 100 ಸಂಚಿಕೆಗಳನ್ನು ಪೂರೈಸಿದ್ದು, ಆ ಸಂಭ್ರಮವನ್ನು ಖ್ಯಾತ ನಟ ರಮೇಶ್ ಅರವಿಂದ್ ಜೊತೆ ಸಂಭ್ರಮಿಸಿದ್ದಾರೆ. 
 

ಸ್ಟಾರ್ ಸುವರ್ಣದಲ್ಲಿ (Star Suvarna) ಪ್ರಸಾರವಾಗುತ್ತಿರುವ ನೀನಾದೆ ನಾ ಸೀರಿಯಲ್ ತನ್ನ ವಿಭಿನ್ನ ಕಥೆಯ ಮೂಲಕ ಅಪಾರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಸೀರಿಯಲ್ 100 ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. 
 

ನೀನಾದೆ ನಾ ಸೀರಿಯಲ್ 100 ಸಂಚಿಕೆಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸೀರಿಯಲ್ ನಿರ್ಮಾಪಕರಾದ ಸ್ಯಾಂಡಲ್ ವುಡ್ ನ ಖ್ಯಾತ ನಟ ರಮೇಶ್ ಅರವಿಂದ್ (Ramesh Aravind)  ಸೀರಿಯಲ್ ಸೆಟ್‌ಗೆ ಆಗಮಿಸಿ ತಂಡದೊಂದಿದೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. 
 

Latest Videos


ತಮ್ಮ ವಂದನಾ ಮೀಡಿಯಾ ಮೂಲಕ ನೀನಾನೆ ನಾ ಸೀರಿಯಲ್ ನಿರ್ಮಾಣ ಮಾಡುತ್ತಿರುವ ರಮೇಶ್ ಅರವಿಂದ್, ಸೆಟ್ ಗೆ ತೆರಳಿ, ವೇದಾ ಮತ್ತು ವಿಕ್ರಮ್ ಇಬ್ಬರಿಗೂ ಶೇಕ್ ಹ್ಯಾಂಡ್ ಮಾಡಿ, ಶುಭ ಕೋರಿದ್ದಾರೆ. ಬಳಿಕ ತಂಡದ ಎಲ್ಲಾ ಸದಸ್ಯರ ಜೊತೆಗೆ ಸೇರಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. 
 

ನೀನಾನೆ ನಾ ಸೀರಿಯಲ್ (Neenadhe Naa) ಪ್ರಸಾರ ಮಾಡುತ್ತಿರುವ ಸ್ಟಾರ್ ಸುವರ್ಣ ಮತ್ತು ಸೀರಿಯಲನ್ನು ಮೆಚ್ಚಿ ಪ್ರೋತ್ಸಾಹಿಸಿ, 100 ಸಂಚಿಕೆ ಯಶಸ್ವಿಯಾಗಿ ಪೂರೈಸಲು ಕಾರಣರಾದ ಎಲ್ಲಾ ಪ್ರೇಕ್ಷಕರಿಗೆ ರಮೇಶ್ ಧನ್ಯವಾದ ತಿಳಿಸಿದರು. ಹೀಗೆ ಸೀರಿಯಲ್ ನೋಡುತ್ತಾ, ಸದಾ ನಮ್ಮ ಜೊತೆಗಿರಿ ಎಂದು ಹೇಳಿದರು. 
 

ದಿಲೀಪ್ ಶೆಟ್ಟಿ, ಖುಷಿ ಶಿವು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಸೀರಿಯಲ್ ನಲ್ಲಿ ಸ್ವಾತಿ, ಭವ್ಯ ಪೂಜಾರಿ, ಜ್ಯೋತಿ ಬಂಟ್ವಾಳ, ವಿನಾಯಕ ಜೋಷಿ, ನಾಗೇಶ್ ಯಾದವ್, ವಿಶ್ವಾಸ್ ಭಾರಧ್ವಾಜ್, ಅನಿಕಾ ಸಿಂಧ್ಯಾ, ವಿಜಯ್ ಸಿದ್ಧರಾಜ್ ಮೊದಲಾದವರು ನಟಿಸುತ್ತಿದ್ದಾರೆ. 
 

ಇನ್ನು ಸೀರಿಯಲ್ ಕಥೆಯ ಬಗ್ಗೆ ಹೇಳೋದಾದ್ರೆ ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿದ್ರು ಕೂಡ ನಮ್ಮ ಸಂಸ್ಕಾರ-ಸಂಸ್ಕೃತಿಯನ್ನು ಎಂದಿಗೂ ಮರೆಯದ ನಾಯಕಿ ವೇದಾ.. ಅಜ್ಜಿಯ ಪ್ರೀತಿಯ ಮೊಮ್ಮಗಳು. ಈಕೆಗೆ ಮನೆಯವರ ಆಸೆಯಂತೆ ಅವರು ತೋರಿಸಿದ ಹುಡುಗನನ್ನು ಮದುವೆಯಾಗಲು ಒಪ್ಪಿರುತ್ತಾಳೆ. ಆದರೆ ಆಗೋದು ಮಾತ್ರ ಬೇರೆ. 
 

ಇನ್ನೊಂದೆಡೆ ಒರಟ ನಾಯಕ ವಿಕ್ರಂ, ಸದಾ ಕಾಲ ರೌಡಿಸಂ ಮಾಡುವುದರಲ್ಲೇ ಮುಂದು. ಮನೆಯ ಜವಾಬ್ದಾರಿ ಇಲ್ಲದೇ, ಸಂಸ್ಕಾರದ ಅರ್ಥವೇ ಗೊತ್ತಿರದೇ, ಡಿಗ್ರಿ ಆಗಿದ್ದರೂ ಅಬ್ಬೆಪಾರಿಯಂತೆ ಅಲೆದಾಡುತ್ತಿರುವ ವಿಕ್ರಂನನ್ನು ಕಂಡರೆ ಅಪ್ಪನಿಗೆ ಉರಿ. 
 

ಇಂತಹ ವಿಕ್ರಂ ಮತ್ತು ವೇದಾ, ದೈವ ಲಿಖಿತ ಎಂಬಂತೆ, ದೇವಸ್ಥಾನದಲ್ಲಿ ಮದುವೆಯ ಬಂಧನದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಯಾರದ್ದೋ ತಾಳಿ ಕೀಳಲು ಬರುವ ವಿಕ್ರಂನನ್ನು ತಡೆದು ನಿಲ್ಲಿಸುವ ವೇದಾ, ತಾಳಿ ಬಗ್ಗೆ ಭಾಷಣ ನೀಡ್ತಾಳೆ, ಇದರಿಂದ ಕೋಪಗೊಂಡ ವಿಕ್ರಂ, ಹಾಗಿದ್ರೆ ತಾಳಿನೇ ಎಲ್ಲಾ ಅಂದಮೇಲೆ, ನಿಂಗೂ ಕಟ್ತೀನಿ ತಾಳಿ ಎಂದು ಹೇಳುತ್ತಾ, ವೇದಾ ಕುತ್ತಿಗೆಗೆ ತಾಳಿ ಕಟ್ಟಿಯೇ ಬಿಡುತ್ತಾನೆ. 
 

ವೇದಾ ಈ ಕೂಡಲೇ ತಾಳಿ ಕಿತ್ತೆಸೆಯುತ್ತಾಳೆ ಎಂದು ಅಂದುಕೊಂಡ ವಿಕ್ರಂ, ಆದರೆ ನಮ್ಮ ಆಚಾರ ವಿಚಾರಗಳನ್ನು ಎಂದು ಬರೆಯದ ವೇದಾ, ತಾಳಿ ಕಟ್ಟಿದ ವಿಕ್ರಂನೇ ತನ್ನ ಗಂಡ ಎಂದು ಅವನ ಜೊತೆ ಬಾಳಲು ಅವನ ಮನೆಗೆ ಬರ್ತಾಳೆ. ಅಲ್ಲಿನ ಆಕೆಯ ಜೀವನ, ಆಕೆ ವಿಕ್ರಂನನ್ನು ಸರಿದಾರಿಗೆ ತರುತ್ತಾಳಾ? ವಿಕ್ರಂ ಮತ್ತೆ ಮೊದಲಿನಂತಾಗುತ್ತಾನಾ? ಅನ್ನೋದು ಇನ್ನು ಕಥೆ..
 

click me!