ಮಂಗಳಗೌರಿ ಮದುವೆಯಿಂದ ಹೊರಬಂದ ಸೌಂದರ್ಯ! ಏನ್ ಕಾರಣ

First Published | Jun 2, 2020, 10:28 PM IST

ಬೆಂಗಳೂರು(ಜೂ 02) ಅತಿ ಹೆಚ್ಚು ಟಿಆರ್ ಪಿ ತಂದುಕೊಡುತ್ತಿರುವ  'ಮಂಗಳ ಗೌರಿ ಮದುವೆ' ಧಾರಾವಾಹಿ  ವಿಲನ್ ಪಾತ್ರದಲ್ಲನ  ಸೌಂದರ್ಯ ಈ ಧಾರಾವಾಹಿಯಿಂದ ಹೊರಬಂದಿದ್ದಾರೆ. ಅದಕ್ಕೆ ಕಾರಣವನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಹೇಳಿಕೊಂಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಸೌಂದರ್ಯ ಎಂಬ ವಿಲನ್ ಪಾತ್ರದಲ್ಲಿ ರಾಧಿಕಾ ಶ್ರವಂತ್ ನಟಿಸುತ್ತಿದ್ದರು.ಈಗ ಈ ಧಾರಾವಾಹಿಯಿಂದ ರಾಧಿಕಾ ನಿರ್ಗಮಿಸಿದ್ದು ಇವರ
ಜಾಗಕ್ಕೆ ಇನ್ನೊಬ್ಬ ವಿಲನ್ ಎಂಟ್ರಿಯಾಗಿದೆ.
Tap to resize

ಮಂಗಳಗೌರಿ ಪ್ರಯಾಣದಲ್ಲಿ ನೆರವು ನೀಡಿದ ಎಲ್ಲರಿಗೂ ಧನ್ಯವಾದಗಳು. ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ಹೊರಬರುತ್ತಿರುವುದಕ್ಕೆ ನನಗೂ ಕೂಡ ಬೇಸರವಾಗುತ್ತಿದೆ ಎಂದು ಫೇಸ್ ಬುಕ್ ಮೂಲಕ ಬರೆದುಕೊಂಡಿದ್ದಾರೆ.
ಪಾತ್ರ ತುಂಬಾ ಖುಷಿ ಕೊಟ್ಟಿದೆ. ಸೌಂದರ್ಯ ಪಾತ್ರಕ್ಕೆ ನೀವು ತೋರಿಸಿದ ಅಭಿಮಾನ, ಪ್ರೀತಿಗೆ ನಾನು ಚಿರಋಣಿ. ಮಂಗಳಗೌರಿ ಮದುವೆ ಧಾರಾವಾಹಿ ನನಗೆ ಹೊಸ ಬದುಕು ಕಟ್ಟಿಕೊಟ್ಟಿದೆ ಎಂದು ಬರೆದಿದ್ದಾರೆ.
ನಟ, ನಿರ್ದೇಶಕ ಶ್ರವಂತ್ ಜೊತೆ ರಾಧಿಕಾ ಸಪ್ತಪದಿ ತುಳಿದಿದ್ದಾರೆ. ಶ್ರವಂತ್ ನಟ, ನಿರ್ದೇಶಕ ಕೂಡ ಹೌದು.
ಇದೇ ಕಾರಣಕ್ಕೆ ಅವರು ಧಾರಾವಾಹಿಯಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ
ಮಧುಬಾಲ ಧಾರಾವಾಹಿ, ಅಂಬರ, ಚಿಕ್ಕಮಗಳೂರ ಚಿಕ್ಕಮಲ್ಲಿಗೆ, ಪರಾರಿ ಸಿನಿಮಾದಲ್ಲೂ ಶ್ರವಂತ್ ನಟಿಸಿದ್ದರು.
ನಿಮ್ಮೆಲ್ಲರ ಮುಂದೆ ಹೊಸ ರೂಪದಲ್ಲಿ ಬರುತ್ತೇನೆ ಎಂದು ಹೇಳಿದ್ದಾರೆ.
ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯ 'ಪುಟ್ಟಮಲ್ಲಿ' ಧಾರಾವಾಹಿಯಲ್ಲೂ ರಾಧಿಕಾ ಅಭಿನಯಿಸಿದ್ದರು.
ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ನಟನೆಯ 'ಗ್ರಾಮಾಯಣ' ಸಿನಿಮಾದಲ್ಲೂ ಸೌಂದರ್ಯ ನಟಿಸುತ್ತಿದ್ದಾರೆ.
ಹಿಂದೆ ಅನೇಕ ಕಲಾವಿದರು ಧಾರಾವಾಹಿ ಉತ್ತುಂಗದಲ್ಲಿರುವಾಗಲೇ ಪಾತ್ರ ಬದಲಿಸಿ ರಿಯಾಲಿಟಿ ಶೋ ಕಡೆಗೂ ಹೆಜ್ಜೆ ಹಾಕಿದ್ದರು.
ನೆಗೆಟಿವ್ ಶೇಡ್‌ ಪಾತ್ರಗಳಲ್ಲಿಯೇ ಹೆಚ್ಚು ಬಾರಿ ಜನರ ಮುಂದೆ ಬಂದಿದ್ದು ಮೆಚ್ಚುಗೆ ಗಳಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಪೋಟೋ
ಫೇಸ್ ಬುಕ್ ನಲ್ಲಿ ರಾಧಿಕಾ ಬರೆದುಕೊಂಡಿರುವ ಬರಹ

Latest Videos

click me!