ಕೊರೋನಾ ಲಾಕ್ ಡೌನ್; ಆತ್ಮಹತ್ಯೆಗೆ ಶರಣಾದ ಕಿರುತೆರೆ ನಟಿ

First Published | May 27, 2020, 4:20 PM IST

ಆತ್ಮಹತ್ಯೆಗೆ ಶರಣಾದ ಕಿರುತೆರೆ ನಟಿ ಪ್ರೇಕ್ಷಾ ಮೆಹ್ತಾ. ಸಂತಾಪ ಸೂಚಿಸಿದ ನಟ ಕರಣ್ ಕುಂದ್ರಾ . 25ವರ್ಷದ ಪ್ರೇಕ್ಷಾ ಕೆಲಸದ ವಿಷಯವಾಗಿ ಈ ಕೆಟ್ಟ ನಿರ್ಧಾರಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕಿರುತೆರೆ ನಟಿ ಪ್ರೇಕ್ಷಾ ಮೆಹ್ತಾ 1995 ಜುಲೈ 5 ರಂದು ಜನಿಸಿದರು.
ಮೊದಲು ಮಧ್ಯಪ್ರದೇಶದಲ್ಲಿ ನಾಟಕಗಳನ್ನುಮಾಡುತ್ತಿದ್ದರು.
Tap to resize

ಮುಂಬೈಗೆ ಶಿಫ್ಟ್ ಆದ ನಂತರ ತಮ್ಮ ವೃತ್ತಿ ಬದುಕನ್ನು ಕಿರುತೆರೆಯಲ್ಲಿ ಶುರು ಮಾಡಿದರು.
ಕ್ರೈಮ್ ಪ್ಯಾಟ್ರೋಲ್, ಲಾಲ್ ಇಷ್ಕ್, ಮೇರಿ ದುರ್ಗಾ ಮುಂತಾದ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ನ ಹಿಟ್ ಸಿನಿಮಾ ಅಕ್ಷಯ ಕುಮಾರ್ ಅಭಿನಯದ 'ಪ್ಯಾಡ್ ಮ್ಯಾನ್' ಸಿನಿಮಾದಲ್ಲೂ ನಟಿಸಿದ್ದರು.
ಕೊರೋನಾ ವೈರಸ್ ಲಾಕ್‌ಡೌನ್ ನಿಂದ ಕೆಲಸವಿಲ್ಲದೆ ನಿರುದ್ಯೋಗಿಯಾದ್ದರಿಂದ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾಯುವ ಕೆಲವೇ ಗಂಟೆಗಳ ಮುಂಚೆ 'ಕನಸುಗಳು ಸಾವನ್ನಪ್ಪುವುದೇ ಎಲ್ಲಕ್ಕಿಂತ ಹೆಚ್ಚು ಕ್ರೂರ' ಎಂದು ವಾಟ್ಸ್ ಆ್ಯಪ್ ಸ್ಟೇಟಸ್ ಹಾಕಿ ಕೊಂಡಿದ್ದ ನಟಿ.
ಇಂದೋರ್ ನ ತಮ್ಮ ನಿವಾಸದಲ್ಲಿ ಸೋಮವಾರ ( 25-05-2020 ) ದಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅತ್ಯಂತ ಚಿಕ್ಕ ವಯಸ್ಸಿಗೆ(25 ವರ್ಷ)ಮನನೊಂದು ಆತ್ಮಹತ್ಯೆ ಮಾಡಿಕೊಂಡು, ದುರಂತ ಅಂತ್ಯ ಕಂಡಿದ್ದಾರೆ.
ಇವರ ಸಾವಿಗೆ ಕಿರುತೆರೆ ನಟ ಕರಣ್ ಕುಂದ್ರಾ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ.
ಈ ಲಾಕ್‌ಡೌನ್ ಪ್ರತಿಯೊಬ್ಬರಿಗೂ ಕಷ್ಟ ತಂದೊಡ್ಡಿದೆ. ಆದರೆ, ಇಂಥ ನಿರ್ಧಾರಕ್ಕೆ ಬರಬಾರದಿತ್ತು ಪ್ರೇಕ್ಷಾ.
ನಟಿಯ ಆತ್ಮಕ್ಕೆ ಶಾಂತಿ ಸಿಗಲಿ.

Latest Videos

click me!