ದಿನಸಿ ಕಿಟ್ ವಿತರಣೆ; ಜನರ ಸೇವೆಗೆ ಮುಂದಾದ ಮಜಾ ಟಾಕೀಸ್ ರೆಮೋ!

First Published | May 22, 2021, 4:51 PM IST

ಕೊರೋನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಸಂಗೀತಗಾರರು, ಕೇಶ ವಿನ್ಯಾಸಕಾರರು ಹಾಗೂ ಮ್ಯಾನ್ಸನ್ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ ಗಾಯಕಿ  ರೆಮೋ.

ಮಜಾ ಟಾಕೀಸ್ ಕಾಮಿಡಿ ಕಾರ್ಯಕ್ರಮದ ಮೂಲಕ ಜನಪ್ರಿಯವಾಗಿರುವ ಗಾಯಕಿ ರೆಮೋ ಜನರ ಸಹಾಯಕ್ಕೆ ಮುಂದಾಗಿದ್ದಾರೆ.
ಕೆಲವು ದಿನಗಳಿಂದ ಸಂಗೀತಗಾರರು, ಕೇಶ ವಿನ್ಯಾಸಗಾರರು ಹಾಗೂ ಗಾರೆ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಮಾಡುತ್ತಿದ್ದಾರೆ.
Tap to resize

'ಈ ಸಮಯದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡೋಣ. ಒಂದು ತಿಂಗಳು ಅವರ ತಟ್ಟೆಯಲ್ಲಿ ಆಹಾರ ಇರಬೇಕು,' ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದು ಕೊಂಡಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ರೆಮೋ ಅವರಿಗೂ ಕೊರೋನಾ ಸೋಂಕು ತಗುಲಿತ್ತು.
ಪಾಸಿಟಿವ್ ಆ್ಯಂಡ್ ಹ್ಯಾಪಿ ಎಂಬ ಮಂತ್ರದಿಂದ ಕೊರೋನಾ ಗೆದ್ದು ಬಂದು ಜನರ ಸೇವೆ ಮಾಡುತ್ತಿದ್ದಾರೆ.

Latest Videos

click me!