ಬೆಂಗಳೂರು(ಮೇ 14) ಕೊರೋನಾ ಆತಂಕದ ನಡುವೆ ನಟ ಚಂದನ್ ಕುಮಾರ್ ಮತ್ತು ನಟಿ ಕವಿತಾ ಗೌಡ ಸರಳ ವಿವಾಹವಾಗಿದ್ದಾರೆ. ಏಪ್ರಿಲ್ ಒಂದರಂದು ಈ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಂಡಿತ್ತು. ಕಿರುತೆರೆಯ ಯಶಸ್ವಿ ಧಾರಾವಾಹಿ 'ಲಕ್ಷ್ಮೀ ಬಾರಮ್ಮ'ದಲ್ಲಿ ಚಂದು ಮತ್ತು ಚಿನ್ನು ಪಾತ್ರಗಳಲ್ಲಿ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಮನೆ ಮಾತಾಗಿದ್ದರು. ಶುಕ್ರವಾರ (ಮೇ 14) ಚಂದನ್ ಮತ್ತು ಕವಿತಾ ಗೌಡ ಅವರ ವಿವಾಹವು ತುಂಬ ಸರಳವಾಗಿ ನಡೆದಿದೆ. ಸೋಶಿಯಲ್ ಮೀಡಿಯಾ ಮುಖೇನ ಫೋಟೋ ಶೇರ್ ಮಾಡಿಕೊಂಡಿದ್ದು ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಕೆಲವೆ ಆಪ್ತರ ಸಮ್ಮುಖ ಮಾಸ್ಕ್ ಧರಿಸಿ ಮದುವೆಯಾಗಿದ್ದಾರೆ. ಬಿಗ್ ಬಾಸ್ ನ ಬೇರೆ ಬೇರೆ ಸೀಸನ್ ನಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದರು. ಏಪ್ರಿಲ್ ಒಂದರಂದು ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಚಂದನ್ ಮತ್ತು ಕವಿತಾ ಅವರ ನಿಶ್ಚಿತಾರ್ಥ ಕಾರ್ಯಕ್ರಮವು ನೆರವೇರಿತ್ತು. ಆನಂತರ ಮೇ 13-14ರಂದು ನಾವು ಸಪ್ತಪದಿ ತುಳಿಯಲಿದ್ದೇವೆ ಎಂದು ಈ ಜೋಡಿ ಹೇಳಿಕೊಂಡಿತ್ತು. ಪ್ರೇಮ ಬರಹ ಚಿತ್ರದ ಮೂಲಕ ಚಂದನ್ ಸ್ಯಾಂಡಲ್ ವುಡ್ ನಲ್ಲಿಯೂ ಮಿಂಚಿದ್ದರು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸೇರಿದಂತೆ ವಿವಿಧ ಸಿನಿಮಾದಲ್ಲಿ ನಟಿಸಿರುವ ಕವಿತಾ ಗೌಡ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಜೋಡಿ ಇದೀಗ ಖಾಸಗಿ ವಾಹಿನಿಯ ಅಡುಗೆ ಶೋ ಒಂದರಲ್ಲಿ ಕಾಣಿಸಿಕೊಂಡು ರಂಜಿಸುತ್ತಿದ್ದಾರೆ. ಚಂದನ್ ಕುಮಾರ್ ಮತ್ತು ಕವಿತಾ ಗೌಡ ಹೊಸ ಬಾಳಿಗೆ ಶುಭಾಶಯ Kavitha Gowda and Chandan Kumar tied the knot in an all family affair amidst all the lockdown guidelines.