ಕಿರುತೆರೆಯಲ್ಲಿ 2013 ರಿಂದ 2020ರವರೆಗೆ ಪ್ರಸಾರವಾಗುವ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿದ್ದ ಸೀರಿಯಲ್ ಲಕ್ಷ್ಮೀ ಬಾರಮ್ಮ (Lakshmi Baramma). ಈ ಸೀರಿಯಲ್ ಮೂಲಕ ಜನರಿಗೆ ಹತ್ತಿರವಾಗಿದ್ದ ನಟಿಯರು ಎಂದರೆ ಚಿನ್ನು ಮತ್ತು ಗೊಂಬೆ.
ಗೊಂಬೆ ಪಾತ್ರದಲ್ಲಿ ನೇಹಾ ರಾಮಕೃಷ್ಣ (Neha Ramakrishna) ನಟಿಸಿದ್ದು, ಮೊದಲಿಗೆ ಚಿನ್ನು ಪಾತ್ರದಲ್ಲಿ ಕವಿತಾ ಗೌಡ ನಟಿಸಿದ್ದರು. ನಂತರ ಕವಿತಾ ಬದಲು ರಶ್ಮಿ ಪ್ರಭಾಕರ್ ಚಿನ್ನು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಆ ಸೀರಿಯಲ್ ಬಳಿಕ ಇದೇ ಮೊದಲ ಬಾರಿಗೆ ನೇಹಾ ಮತ್ತು ಕವಿತಾ ಜೊತೆಯಾಗಿ ನಟಿಸಲಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಣ್ಯವತಿ ಸೀರಿಯಲ್ ನ (Punyavathi serial) ಸ್ಪೆಷಲ್ ಎಪಿಸೋಡ್ ಒಂದರಲ್ಲಿ ಕವಿತಾ ಮತ್ತು ನೇಹಾ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ನೇಹಾ ರಾಮಕೃಷ್ಣ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದು ಕೊಂಡಿದ್ದಾರೆ.
ನಾವು ಮತ್ತೆ ಜೊತೆಯಾಗಿದ್ದೇವೆ. ನಮ್ಮ ಲಕ್ಷ್ಮೀ ಬಾರಮ್ಮದ ಮೊದಲ ನಿರ್ದೇಶಕ ಮತ್ತು ಚಿನ್ನು ಜೊತೆ ಮತ್ತೆ ಬಂದಿದ್ದೇನೆ. ನಮ್ಮ ಮೂವರ ಕಾಂಬಿನೆಷನ್ ನೀವು ಇಷ್ಟಪಡುತ್ತೀರಿ ಎಂದು ನಂಬಿದ್ದೇನೆ.ಪುಣ್ಯವತಿಯಲ್ಲಿ ಲಕ್ಷ್ಮೀ ಬಾರಮ್ಮ ಚಿನ್ನು ಮತ್ತು ನಿಮ್ಮ ಪ್ರೀತಿಯ ಗೊಂಬೆ ಎಂದು ನೇಹಾ ಬರೆದುಕೊಂಡಿದ್ದಾರೆ.
ಇನ್ನು ಗೊಂಬೆ ಖ್ಯಾತಿಯ ನೇಹಾ ರಾಮಕೃಷ್ಣ ಬಗ್ಗೆ ಹೇಳೋದಾದ್ರೆ ಜನರು ಈಗಲೂ ಸಹ ನೇಹಾರನ್ನು ಗೊಂಬೆ ಎಂದೇ ಗುರುತಿಸುತ್ತಾರೆ. ಸದ್ಯ ನೇಹಾ ನಮ್ಮ ಲಚ್ಚಿ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ತಮ್ಮ ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಸದಾ ಟ್ರಾವೆಲ್ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡುತ್ತಿರುತ್ತಾರೆ.
ಚಿನ್ನು ಖ್ಯಾತಿಯ ಕವಿತಾ ಗೌಡ (Kavitha Gowda) ವಿದ್ಯಾ ವಿನಾಯಕ, ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ತಮಿಳು ಸೀರಿಯಲ್ ಗಳಲ್ಲಿ ಇವರು ಕಾಣಿಸಿಕೊಂಡರು. ಆದರೆ ಮತ್ತೆ ಕನ್ನಡ ಸೀರಿಯಲ್ ನಲ್ಲಿ ಅವರು ಕಾಣಿಸಿಕೊಂಡಿಲ್ಲ. ಸದ್ಯ ಫ್ಯಾಮಿಲಿ ಲೈಫಲ್ಲಿ ಅವರು ಬ್ಯುಸಿ.
ಹಲವಾರು ವರ್ಷಗಳ ನಂತರ ಚಿನ್ನು ಮತ್ತು ಗೊಂಬೆಯನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ನಿಮ್ಮಿಬ್ಬರನ್ನು ಮತ್ತೆ ತೆರೆ ಮೇಲೆ ನೋಡಿ ತುಂಬಾನೆ ಖುಷಿಯಾಗಿದೆ. ಮತ್ತೆ ನಿಮ್ಮನ್ನ ನಾಯಕಿಯರನ್ನಾಗಿ ನೋಡುವ ಆಸೆ ಎಂದು ಅಭಿಮಾನಿಗಳು ಕೇಳಿಕೊಂಡಿದ್ದಾರೆ.