Indian Idol: ಹಿಂದಿಯ ಸೋನಿ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಸಂಗೀತ ಕಾರ್ಯಕ್ರಮ ‘ಇಂಡಿಯನ್ ಐಡಲ್’ ನಲ್ಲಿ ತುಮ್ ದಿಲ್ ಕೀ ಧಡಕನ್ ಮೇ ಎಂದು ಹಾಡಿದ ಕನ್ನಡಿಗ ಶ್ರೀನಿಧಿ ಶಾಸ್ತ್ರಿ ಹಾಡಿಗೆ ಗಾಯಕಿ ಶ್ರೇಯಾ ಘೋಷಲ್ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ.
ಹಿಂದಿ ಕಿರುತೆರೆಯ ಜನಪ್ರಿಯ ಟಿವಿ ರಿಯಾಲಿಟಿ ಶೋಗಳಲ್ಲಿ ಒಂದಾದ ‘ಇಂಡಿಯನ್ ಐಡಲ್’ ಕಾರ್ಯಕ್ರಮದಲ್ಲಿ ಕನ್ನಡದ ಹುಡುಗನೊಬ್ಬ ಮೋಡಿ ಮಾಡುತ್ತಿದ್ದಾನೆ. ಆತನ ಹಾಡು ಕೇಳಿ ತೀರ್ಪುಗಾರರು ಎದ್ದು ನಿಂತು ಚಪ್ಪಾಳೆ ಹೊಡೆದಿದ್ದಾರೆ.
27
ಶ್ರೀನಿಧಿ ಶಾಸ್ತ್ರಿ
ಹೌದು ಕನ್ನಡಿಗ ಶ್ರೀನಿಧಿ ಶಾಸ್ತ್ರಿ ಭಾರತದ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಆಗಿರುವ ಇಂಡಿಯನ್ ಐಡಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅಲ್ಲಿ ತಮ್ಮ ಮಧುರ ಕಂಠದಿಂದ ತೀರ್ಪುಗಾರರರೇ ಮನಸೋತು, ಭೇಷ್ ಎನ್ನುವಂತೆ ಹಾಡಿದುದ್, ಸದ್ಯ ಈ ಹಾಡು ವೈರಲ್ ಆಗುತ್ತಿದೆ.
37
ಖ್ಯಾತ ಗಾಯಕಿ ಶ್ರೇಯಾ ಘೋಷಲ್
ಭಾರತದ ಖ್ಯಾತ ಗಾಯಕಿಯಾಗಿರುವ ಶ್ರೇಯಾ ಘೋಷಲ್ ಮತ್ತು ಗಾಯಕ ಬಾದ್ ಷಾ ತೀರ್ಪುಗಾರರಾಗಿರುವ ಇಂಡಿಯನ್ ಐಡಲ್ ಕಾರ್ಯಕ್ರದ 16ನೇ ಸೀಸನ್ ಈಗಷ್ಟೇ ಆರಂಭವಾಗಿದೆ. ಸದ್ಯ ಇಂಡಿಯನ್ ಐಡಲ್ ಪ್ರೀಮಿಯರ್ ಪಾರ್ಟಿ ನಡೆಯುತ್ತಿದೆ.
ನಮ್ಮ ಕನ್ನಡಿಗನೇ ಆಗಿರುವ ಶ್ರೀನಿಧಿ ಶಾಸ್ತ್ರೀ ಹಾಡಿಗೆ ಗಾಯಕಿ ಶ್ರೇಯಾ ಘೋಷಲ್ ಸೇರಿ ಇತರ ತೀರ್ಪುಗಾರರು ತಲೆದೂಗುತ್ತಾ, ಎದ್ದು ನಿಂತು ಚಪ್ಪಾಳೆ ತಟ್ಟಿದರೆ, ಬಾದ್ ಷಾ ನೇರವಾಗಿ ವೇದಿಕೆಗೆ ತೆರಳಿ ಶ್ರೀನಿಧಿಯನ್ನು ಎತ್ತಿ ತಮ್ಮ ಖುಷಿಯನ್ನು ಸಂಭ್ರಮಿಸಿದ್ದಾರೆ.
57
ಯಾರು ಈ ಶ್ರೀನಿಧಿ ಶಾಸ್ತ್ರಿ ನೆನಪಿದ್ಯಾ?
ಸದ್ಯ ಹಿಂದಿ ಸಂಗೀತ ಕಾರ್ಯಕ್ರಮದಲ್ಲಿ ಸದ್ದು ಮಾಡುತ್ತಿರುವ ಶ್ರೀನಿಧಿ ಶಾಸ್ತ್ರಿ, ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಸರಿಗಮಪ' ಕಾರ್ಯಕ್ರಮದ 17ನೇ ಸೀಸನ್‌ನ ವಿನ್ನರ್ ಆಗಿದ್ದರು. ಇವರು ಟ್ರೋಫಿ ಜೊತೆ 10 ಲಕ್ಷ ರೂ.ಗಳನ್ನು ಸಹ ಬಹುಮಾನವಾಗಿ ಪಡೆದಿದ್ದರು.
67
ನಾದಮಯ ಹಾಡಿನ ಮೂಲಕ ಮನ ಗೆದ್ದಿದ್ದ ಶ್ರೀನಿಧಿ
ಶ್ರೀನಿಧಿ ಶಾಸ್ತ್ರೀ ಅವರ ಜೊತೆ ಅಶ್ವಿನ್ ಶರ್ಮಾ , ಕಿರಣ್ ಪಾಟೀಲ್, ಶ್ರೀನಿಧಿ ಶಾಸ್ತ್ರಿ, ಕಂಬದ ರಂಗಯ್ಯ ಮತ್ತು ಶಾರದಾ ಪಾಟೀಲ್ ಫೈನಲ್ ಪ್ರವೇಶಿಸಿದ್ದರು. ಭರ್ಜರಿ ಪೈಪೋಟಿಯ ನಡುವೆ ಶ್ರೀನಿಧಿ. ಡಾ. ರಾಜ್‌ಕುಮಾರ್ ಅಭಿನಯದ 'ಜೀವನ ಚೈತ್ರ' ಸಿನಿಮಾದ 'ನಾದಮಯ...' ಹಾಡನ್ನು ಅದ್ಭುತವಾಗಿ ಹಾಡುವ ಮೂಲಕ ಸೀಸನ್ 17ರ ವಿನ್ನರ್ ಆಗಿ ಹೊರಹೊಮ್ಮಿದ್ದರು.
77
ಕನ್ನಡಿಗನ ಬಗ್ಗೆ ಹೆಮ್ಮೆ ಪಟ್ಟ ಕನ್ನಡಿಗರು
ಇದೀಗ ಶ್ರೀನಿಧಿ ಹಿಂದಿ ಮ್ಯೂಸಿಕ್ ರಿಯಾಲಿಟಿ ಶೋನಲ್ಲಿ ಸದ್ದು ಮಾಡುತ್ತಿದ್ದು, ಕನ್ನಡಿಗರು, ನಮ್ಮ ಕನ್ನಡದ ಹುಡುಗನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಈ ಸೀಸನ್ ವಿನ್ನರ್ ಆಗಿ ಗೆದ್ದು ಬರುವಂತೆ ಹಾರೈಸಿದ್ದಾರೆ. ಅಂದ ಹಾಗೇ ಇವರು ಹಿಂದಿ ಸರಿಗಮಪದಲ್ಲೂ ಭಾಗವಹಿಸಿದ್ದರು.