ಗೋಲ್ಡ್‌, ಕಾರ್‌, ಮನೆ ಹೇಗೆ ಬಂತು? ಕೊನೆಗೂ Youtube Income ಬಿಚ್ಚಿಟ್ಟ ನಿಖಿಲ್‌, ನಿಶಾ, ಮಧು ಗೌಡ

Published : Mar 20, 2026, 05:31 PM IST

Kannada Youtuber Nikhil Ravindra Income: ಯುಟ್ಯೂಬರ್‌ ನಿಖಿಲ್‌ ರವೀಂದ್ರ-ನಿಶಾ, ಮಧು ಗೌಡ ಅವರು ಯುಟ್ಯೂಬ್‌ ವಿಡಿಯೋದಿಂದಲೇ ಪದೇ ಪದೇ ಮನೆ ಮಾಡ್ತಾರೆ, ಗೋಲ್ಡ್‌, ಕಾರ್‌ ತಗೊಳ್ತಾರೆ ಎಂಬ ಮಾತಿತ್ತು. ಈಗ ಈ ಬಗ್ಗೆ ನಿಶಾ ಮಾತನಾಡಿದ್ದು, ಯುಟ್ಯೂಬ್‌ ಆದಾಯ ಎಷ್ಟು ಎಂದು ರಿವೀಲ್‌ ಮಾಡಿದ್ದಾರೆ. 

PREV
16
ಎಲ್ಲವನ್ನೂ ನಾವು ಹೇಳೋದಿಲ್ಲ

ನಾವು YouTube ಅಲ್ಲಿ ಇರಬಹುದು, ರೀಲ್ಸ್ ಅಲ್ಲಿ ಇರಬಹುದು, ನಮ್ಮ ಜೀವನದಲ್ಲಿ ಒಂದು 50% ಅಷ್ಟೇ ನಾವು ನಿಮ್ಮ ಹತ್ತಿರ ತೋರಿಸಿಕೊಳ್ಳೋದು. ಉಳಿದದ್ದು ಪರ್ಸನಲ್ ಲೈಫ್ ಇರುತ್ತದೆ. ನನ್ನ ತಾಯಿ ವಿಡಿಯೋದಲ್ಲಿ ಕಾಣಿಸಿಕೊಳ್ಳೋದಿಲ್ಲ. ನಮ್ಮದು ಮೂರು ಮನೆಯಿದೆ.

26
ಹಿಂದಿ ಯುಟ್ಯೂಬರ್ಸ್‌ಗೆ ಬರಬಹುದು

ನಮಗೆ ತಿಂಗಳಿಗೆ 10 ಲಕ್ಷ ರೂಪಾಯಿ ಬರುತ್ತದೆ, ಇವರಿಗೆ 5 ಲಕ್ಷ ಬರುತ್ತದೆ ಅಂತೆಲ್ಲ ಹೇಳಿರ್ತಾರೆ. ಅದು ಸುಳ್ಳು ಅಂತನೂ ಹೇಳೋದಿಕ್ಕೆ ಆಗೋದಿಲ್ಲ. ಹಿಂದಿ ಯುಟ್ಯೂಬರ್ಸ್‌ಗೆ ಅಷ್ಟೆಲ್ಲ ಹಣ ಬರಬಹುದು, ಆದರೆ ನಮ್ಮ ಕನ್ನಡಿಗರಿಗೆ ಅಷ್ಟು ಹಣ ಬರೋದು ಕಷ್ಟ. ನಮ್ಮ ಕನ್ನಡ ವಿಡಿಯೋಗಳನ್ನು ಕನ್ನಡದವರು ಮಾತ್ರ ನೋಡ್ತಾರೆ.

36
ಎಷ್ಟು ಹಣ ಕಟ್‌ ಆಗುತ್ತದೆ?

ನಮಗೆ ಒಂದು ತಿಂಗಳಿಗೆ ಒಂದು ಲಕ್ಷ ರೂಪಾಯಿ ಬರುತ್ತದೆ ಅಂತ ಅನ್ಕೊಳ್ಳಿ. ಆ 1 ಲಕ್ಷ ರೂಪಾಯಿ ನನ್ನ ಬ್ಲಾಗ್‌ಗೆ ಅಂದ್ರೆ ನನ್ನ YouTube ಚಾನೆಲ್‌ನ್ನು ಒಂದು ಏಜೆನ್ಸಿ ಅವರು ಹ್ಯಾಂಡಲ್ ಮಾಡುತ್ತಿದ್ದು, ಅವರು 1 ಲಕ್ಷ ರೂಪಾಯಿಯಲ್ಲಿ 25% ಕಟ್ ಮಾಡಿಕೊಳ್ತಾರೆ. ಅದರಲ್ಲಿ ಟಿಡಿಎಸ್ ಎಲ್ಲ ಕಟ್ ಆಗಿ ಒಂದು 60ರಿಂದ 50 ಬರುತ್ತದೆ. ವೀಕ್ಷಣೆ ಹೆಚ್ಚಾದಷ್ಟು ಹಣ ಬರುತ್ತದೆ, ಆದರೆ ಯುಟ್ಯೂಬ್‌ನಿಂದಲೇ ನಾವು ಹಣ ಮಾಡ್ತಿದ್ದೀವಿ ಎನ್ನೋದು ಸುಳ್ಳು.

46
ಗೋಲ್ಡ್‌, ಥಾರ್‌ ತಗೊಂಡಿಲ್ಲ

ಪ್ರತಿದಿನ ಮೂರು ಬ್ಲಾಗ್ ಮಾಡಿಕೊಂಡು, YouTube ಇಂದ ದುಡ್ಡು ಬರುತ್ತದೆ ಅಂತ ಎಷ್ಟೋ ದುಡ್ಡು ಮಾಡಿ ಮೈಸೂರಿನಲ್ಲಿ ಇನ್ನೂ ಮೂರು ಮನೆ ಕಟ್ಟಬಹುದಿತ್ತು. ಮಧು ಗೋಲ್ಡ್‌ ತಗೊಂಡಾಗ, ಅಣ್ಣ ಥಾರ್‌ ತಗೊಂಡಾಗ ಯುಟ್ಯೂಬ್‌ ಹಣದಿಂದಲೇ ತಗೊಂಡೆವು ಎಂದುಕೊಂಡಿರಿ.

56
ಅಣ್ಣನ ಉದ್ಯಮ ಏನು?

ನನ್ನ ಅಣ್ಣ ಮೊದಲಿನಿಂದಲೂ ಬ್ಯುಸಿನೆಸ್ ಮಾಡ್ತಿದ್ದಾನೆ. ನನ್ನ ಅಣ್ಣನಿಗೆ ಈ YouTube ಅಮೌಂಟ್ ಒಂದು 20% ಅಷ್ಟೇ. ಬೆಂಗಳೂರಿನಲ್ಲಿ ನನ್ನ ಅಣ್ಣನ ಜಿಮ್‌ ಇದೆ, ಅದು ಅದರಪಾಡಿಗೆ ನಡೆಯುತ್ತಿದೆ. ಮೈಸೂರಿನಲ್ಲಿ ಮೆಡಿಕಲ್‌ ಸ್ಟೋರ್‌ ಇದ್ದು, ಅದನ್ನು ಅಣ್ಣ ಅವನ ಫ್ರೆಂಡ್‌ಗೆ ಕೊಟ್ಟಿದ್ದಾನೆ. ಈಗ ನಾವು ಅಷ್ಟು ಹಣವನ್ನು ನಿಧು ವಸ್ತ್ರಕ್ಕೆ ಹಾಕಿದ್ದೇವೆ.

66
ಎಷ್ಟು ಹಣ ಸಿಗಬಹುದು?

ನಮಗೆ ಪ್ರತಿ ತಿಂಗಳು ಯುಟ್ಯೂಬ್‌ನಿಂದ ಒಂದು ಲಕ್ಷದಿಂದ ಎರಡು ಲಕ್ಷ ರೂಪಾಯಿ ಒಳಗಡೆ ಬರುತ್ತಿದೆ. ಇದರಲ್ಲಿ ಪ್ರತಿ ತಿಂಗಳು ಚೂರು ಹೆಚ್ಚು ಕಡಿಮೆ ಆಗುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories