ಕಿರುತೆರೆ ಆ್ಯಂಗ್ರಿ ಯಂಗ್ ಮ್ಯಾನ್ ಎಜೆ ಖ್ಯಾತಿಯ ದಿಲೀಪ್ ರಾಜ್ ಮುದ್ದಾದ ಫ್ಯಾಮಿಲಿ ಇದು…

Published : Mar 13, 2024, 05:07 PM ISTUpdated : Mar 13, 2024, 05:22 PM IST

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ಮನೆಮಾತಾಗಿರುವ ಎಜೆ ಆಲಿಯಾಸ್ ದಿಲೀಪ್ ರಾಜ್ ಅವರ ರಿಯಲ್ ಲೈಫ್ ಫ್ಯಾಮಿಲಿ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.   

PREV
18
ಕಿರುತೆರೆ ಆ್ಯಂಗ್ರಿ ಯಂಗ್ ಮ್ಯಾನ್ ಎಜೆ ಖ್ಯಾತಿಯ ದಿಲೀಪ್ ರಾಜ್ ಮುದ್ದಾದ ಫ್ಯಾಮಿಲಿ ಇದು…

ಕನ್ನಡ ಹಿರಿತೆರೆ ಮತ್ತು ಕಿರುತೆರೆಯಲ್ಲಿ ಮಿಂಚಿ, ನಟರಾಗಿ, ನಿರ್ಮಾಪಕರಾಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ ಜನಪ್ರಿಯತೆ ಗಳಿಸಿರುವ ನಟ, ಸದ್ಯ ಕಿರುತೆರೆಯ ಆಂಗ್ರಿ ಯಂಗ್ ಮ್ಯಾನ್ ದಿಲೀಪ್ ರಾಜ್ (Dileep Raj). 
 

28

ಸದ್ಯ ಝೀ ಕನ್ನಡಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ (Hitler Kalyana) ಸೀರಿಯಲ್ ನಲ್ಲಿ ಎಜೆ ಪಾತ್ರದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಕಿರುತೆರೆ ಪ್ರೇಕ್ಷಕರ ಮೋಸ್ಟ್ ಫೇವರಿಟ್ ಹೀರೋ ಆಗಿ ಮಿಂಚುತ್ತಿದ್ದಾರೆ ದಿಲೀಪ್ ರಾಜ್. 
 

38

44 ವರ್ಷದ ದಿಲೀಪ್ ರಾಜ್ ನಟನಾ ರಂಗದಲ್ಲಿ ಕಳೆದ 20 ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಜೊತೆಗೆ ಪತ್ನಿಯ ಜೊತೆಗೆ ಸೇರಿ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ಅಡಿಯಲ್ಲಿ ಹಲವು ಹಿಟ್ ಸೀರಿಯಲ್ ಗಳನ್ನೂ ನಿರ್ಮಿಸಿದ್ದಾರೆ. ಹಿಟ್ಲರ್ ಕಲ್ಯಾಣ ಕೂಡ ಇವರದ್ದೇ ನಿರ್ಮಾಣದ (production) ಸೀರಿಯಲ್. 
 

48

ದಿಲೀಪ್ ರಾಜ್ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಇವರ ಪತ್ನಿ ಶ್ರೀವಿದ್ಯಾ (Shreevidya) ಕೂಡ ನಿರ್ಮಿಸುತ್ತಿದ್ದು, ಹಲವರಿಗೆ ಕೆಲಸ ನೀಡಿದ್ದಾರೆ ಈ ದಂಪತಿಗಳು. ಇವರಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದು, ಅವರ ಹೆಸರು ಧೃತಿ ಮತ್ತು ಅದಿತಿ. ಇಬ್ಬರೂ ಝೀಕುಟುಂಬ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. 
 

58

ದಿಲೀಪ್ ಹಾಗೂ ವಿದ್ಯಾ ಇಬ್ಬರೂ ಟ್ರಾವೆಲ್ ಪ್ರಿಯರಾಗಿದ್ದು, ಸಮಯ ಸಿಕ್ಕಾಗಲೆಲ್ಲಾ ಫ್ಯಾಮಿಲಿ ಜೊತೆಯಾಗಿ ದೇಶ, ವಿದೇಶ ಟ್ರಾವೆಲ್ ಮಾಡುತ್ತಿರುತ್ತಾತ್ತೆ ಈ ಜೋಡಿ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫೋಟೋಗಳನ್ನು ಸಹ ಕಾಣಬಹುದು. ಕೆಲ ವರ್ಷಗಳ ಹಿಂದೆ ಹೊಸ ಮನೆ ಕೂಡ ಖರೀದಿಸಿದ್ದು, ರಾಜ್ ಶ್ರೀ ಎಂಬುವದು ಮನೆ ಹೆಸರು.

68

ಇನ್ನು ದಿಲೀಪ್ ವಿದ್ಯಾ ಜೊತೆಯಾಗಿ ಸೇರಿ ತಮ್ಮದೇ ಪ್ರೊಡಕ್ಷನ್ ಹೌಸ್ (production house) ಮೂಲಕ ಪಾರು, ಮಲೆಮಹದೇಶ್ವರ, ವಿದ್ಯಾ ವಿನಾಯಕ, ಮೊದಲಾದ ಹಿಟ್ ಸೀರಿಯಲ್ ಗಳನ್ನು ನೀಡಿದ್ದರು. ಸದ್ಯ ಹಿಟ್ಲರ್ ಕಲ್ಯಾಣ ಜವಾಬ್ಧಾರಿಯನ್ನು ಸಂಪೂರ್ಣವಾಗಿ ವಿದ್ಯಾ ಅವರೇ ನೋಡಿಕೊಳ್ತಿದ್ದಾರೆ. 
 

78

ದಿಲೀಪ್ ರಾಜ್ ಅವರು ಕಳೆದ ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯರಾಗಿದ್ದು, ಇವರು ಹಿಟ್ಲರ್ ಕಲ್ಯಾಣ ಸೇರಿ, ಜನನಿ, ಅರ್ಧ ಸತ್ಯ, ಕುಂಕುಮ ಭಾಗ್ಯ, ಮಳೆ ಬಿಲ್ಲು, ಮಾಂಗಲ್ಯ ಮೊದಲಾದ ಧಾರಾವಾಹಿಗಳಲ್ಲೂ ನಟಿಸಿದ್ದರು. 
 

88

ಸೀರಿಯಲ್ ಮಾತ್ರವಲ್ಲ ಚಲನಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ದಿಲೀಪ್ 7 ಒ ಕ್ಲಾಕ್, ಬಾಯ್ ಫ್ರೆಂಡ್, ಕ್ರೇಜಿ ಸ್ಟಾರ್, ಲವ್ ಗುರು, ಚಾಲೆಂಜ್, ಟೋನಿ, ಯೂ ಟರ್ನ್, ಮಿಲನ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ (Punith Raj Kumar) ಎದುರು ಖಳನಾಯಕರಾಗಿ ಸಹ ನಟಿಸಿದ್ದರು.
 

click me!

Recommended Stories