ತೆಲುಗು ಕಿರುತೆರೆಯಲ್ಲಿ ಕನ್ಯಾಕುಮಾರಿ ಧಾರಾವಾಹಿ ನಟ ಯಶವಂತ್‌ ಗೌಡ

Published : Dec 14, 2022, 03:13 PM ISTUpdated : Dec 14, 2022, 03:14 PM IST

ಕನ್ನಡದ ನಟನಟಿಯರು ಪರಭಾಷೆಯ ಸಿನಿಮಾಗಳಲ್ಲಿ ತಮ್ಮ ಛಾಪು ಮೂಡಿಸಿರುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಇದು ಕೇವಲ ದೊಡ್ಡ ತೆರೆಗೆ ಮಾತ್ರ ಸೀಮಿತವಾಗಿಲ್ಲ. ಕನ್ನಡದ ಕಿರುತೆರೆ ಕಲಾವಿದರು ಕೂಡ ಬೇರೆ ಭಾಷೆಗಳಲ್ಲಿ ತಮ್ಮ ನಟನೆಯ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅದಕ್ಕೆ ಉದಾಹರಣೆ ಎಂದರೆ ನಟ ಯಶವಂತ್ ಗೌಡ (Yashwanth Gowda). ಇವರು ಈಗ ತೆಲುಗು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿದೆ ಯಶವಂತ್‌ ಅವರ ಜರ್ನಿಯ ಕಿರು ಪರಿಚಯ. 

PREV
18
ತೆಲುಗು ಕಿರುತೆರೆಯಲ್ಲಿ ಕನ್ಯಾಕುಮಾರಿ ಧಾರಾವಾಹಿ ನಟ ಯಶವಂತ್‌ ಗೌಡ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ಯಾಕುಮಾರಿ ಎಂಬ ಧಾರಾವಾಹಿಯಲ್ಲಿ ಕ್ಯಾಬ್ ಡ್ರೈವರ್ ಆಗಿ, ಸಿರಿವಂತ ಮನೆಯ ಹೆಣ್ಣು ಮಗಳನ್ನು ಮದುವೆಯಾಗೋ ಚರಣ್ ಕನ್ನಡಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. 

28

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಕನ್ಯಾಕುಮಾರಿ ಧಾರಾವಾಹಿ ಮೂಲಕ ತಮ್ಮ ನಟನೆಗೆ ಎಂಟ್ರಿ ಕೊಟ್ಟ  ಯಶವಂತ್ ಗೌಡ,
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಓದು ಮುಗಿದ ನಂತರ ಮಾಡೆಲಿಂಗ್‌ ಕ್ಷೇತ್ರಕ್ಕೆ ಕಾಲಿಟ್ಟರು. ನಂತರ 2021ರಲ್ಲಿ ತಮ್ಮ ಆಕ್ಟಿಂಗ್‌ ಕೆರಿಯರ್‌ ಶುರು ಮಾಡಿದರು. 

38

ಕನ್ಯಾಕುಮಾರಿ ಸಿರಿಯಲ್‌ನಲ್ಲಿ ಹೀರೋ ಆಗಿ ಕಾಣಿಸಿಕೊಂಡ ಯಶವಂತ್‌ಗೆ ಮೊದಲ ಅವಕಾ‍ಶವೇ  ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ದೇವರು, ಬಡತನ, ಸಿರಿವಂತ ಕುಟುಂಬಗಳ ನಡುವಿನ ಈ ಧಾರಾವಾಹಿಯ ಕಥೆ ವೀಕ್ಷಕರ ಮನ ಗೆಲ್ಲುವಲ್ಲಿ ಅಷ್ಟು ಯಶಸ್ಸು ಕಾಣಲಿಲ್ಲ. 

48

ಆದರೆ, ನಟನಾಗಿ ಅಭಿನಯಿಸಿದ್ದ ಚರಣ್ ಮಾತ್ರ ಎಲ್ಲರ ಗಳಿಸುವಲ್ಲಿ ಗೆದ್ದಿದ್ದರು. ಕನ್ನಡ ಕಿರುತೆರೆ ಯಶಸ್ಸಿನ ನಂತರ ಯಶವಂತ್‌ ಈಗ ತೆಲುಗು ಕಿರುತೆರೆಗೆ ಹಾರಿದ್ದಾರೆ.  ಈಗಾಗಲೇ ಸಾಕಷ್ಟು ಕನ್ನಡದ ಕಿರುತೆರೆ ಕಲಾವಿದರು ತೆಲುಗು ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ. ಆ ಲಿಸ್ಟ್‌ಗೆ ಯಶವಂತ್ ಕೂಡ ಸೇರಿಕೊಂಡಿದ್ದಾರೆ.

58

ಯಶವಂತ್ ಅವರು ಅವಕಾಶ ಪಡೆದ ಮೊದಲ ತೆಲುಗು ಸೀರಿಯಲ್ ಹೆಸರು 'ಅಮ್ಮಾಯಿಗಾರು'.  ಅಂದಹಾಗೆ ಈ ಸಿರಿಯಲ್‌ನಲ್ಲಿ ಯಶವಂತ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವುದು ಕೂಡ ಕನ್ನಡ ಕಿರುತೆರೆಯ  ಖ್ಯಾತ ನಟಿ ಎನ್ನುವುದು ವಿಶೇಷ,

68

ಅಮ್ಮಾಯಿಗಾರು' ಧಾರಾವಾಹಿಯಲ್ಲಿ ಈಗಾಗಲೇ ತೆಲುಗು ಟಿವಿಯಲ್ಲಿ ಮಿಂಚುತ್ತಿರುವ ಕನ್ನಡದ ನಿಶಾ ರವಿಕೃಷ್ಣನ್ ಅವರು ಯಶವಂತ್‌ ಗೌಡ ಅವರ ಜೊತೆಯಾಗಿ ನಟಿಸುತ್ತಿದ್ದು, ಅಲ್ಲಿಯೂ ಈ ಸೀರಿಯಲ್ ಮನೆ ಮನೆ ತಲುಪಿದೆ.

78

ಯಶವಂತ್‌ ಹೊಸ ಧಾರಾವಾಹಿ ಬಗ್ಗೆ ತುಂಬಾ ಉತ್ಸುಕನಾಗಿರುವುದಾಗಿ ಹೇಳಿದ್ದಾರೆ. ತೆಲುಗು ಭಾಷೆ ಕಲಿಯುವುದು ಸವಾಲಿನ ಕೆಲಸವಾಗಿದ್ದು, ಶೀಘ್ರದಲ್ಲೇ ಭಾಷೆ ಕಲಿಯುವ ಭರವಸೆ ಇದೆ ಎನ್ನುತ್ತಾರೆ ಈ ಯುವ ನಟ. 

88

ಯಾವುದೇ ತರಬೇತಿ ಇಲ್ಲದೆ ನಟನಾ ಕ್ಷೇತ್ರಕ್ಕೆ ಬಂದಿದ್ದು, ಖುಷಿ ಕೊಟ್ಟಿದೆ, ನಾನು ನಟನಾಗುಲು ಡಾ ರಾಜ್‌ ಕುಮಾರ್‌ ಸ್ಪೂರ್ತಿ ಎಂದಿರುವ ಚರಣ್ ಆಲಿಯಾಸ್ ಯಶವಂತ್ ಮನೆಯಲ್ಲಿ ದೇವರ ಫೋಟೋ ಜೊತೆ ಡಾ ರಾಜ್‌ ಕುಮಾರ್‌ ಅವರ ಫೋಟೋ ಸಹ ಇದೆಯಂತೆ.
 

click me!

Recommended Stories