ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಟಿಯರಾದ ನೇಹಾ ಗೌಡ, ಅನುಪಮಾ ಗೌಡ ಮತ್ತು ಇಶಿತಾ ಮುರುಗಾ ಗೋವಾ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಚೆಲುವೆಯರು ಫೋಟೋ ಹಂಚಿಕೊಂಡು ತಮ್ಮ ಸ್ನೇಹ ಎಷ್ಟು ಗಟ್ಟಿ ಎಂದು ತೋರಿಸಿದ್ದಾರೆ.
ಬೀಚ್ ಬಳಿ ಮಜಾ ಮಾಡಿರುವುದಲ್ಲದೆ ಗೋವಾದ ಟೂರಿಸ್ಟ್ ಸ್ಥಳಗಳನ್ನು ವೀಕ್ಷಿಸಿದ್ದಾರೆ. ಎಲ್ಲಾ ಫೋಟೋಗಳನ್ನು ರೀಲ್ಸ್ ಮೂಲಕ ಹಂಚಿಕೊಂಡಿದ್ದಾರೆ.
ಪ್ಲ್ಯಾನ್ ಮಾಡದ ಟ್ರಿಪ್‌ಗಳು ಸಖತ್ ಮಜಾವಾಗಿರುತ್ತದೆ, ಸಣ್ಣ ಮಾತುಕತೆ ಬ್ಯಾಗ್ ಪ್ಯಾಕ್ ಮಾಡಿದ್ದು ಅಷ್ಟೆ ಆಗಲೇ ಗೋವಾದಲ್ಲಿ ಇದ್ದೀವಿ ಎಂದು ಬರೆದುಕೊಂಡಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋನಲ್ಲಿ ಇಶಿತಾ ಮುರುಗಾ ಸ್ಪರ್ಧಿಸುತ್ತಿದ್ದಾರೆ. ದಿನೇ ದಿನೇ ಇಶಿತಾ ಆಂಡ್ ಟೀಂ ಟಫ್ ಫೈಟ್ ನೀಡುತ್ತಿದ್ದಾರೆ.
ಇನ್ನು ರಾಜಾ ರಾಣಿ ಮತ್ತು ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಿರೂಪಣೆ ನಂತರ ಅನುಪಮಾ ಗೌಡ ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ರಿವೀಲ್ ಮಾಡಿಲ್ಲ.
ಲಕ್ಷ್ಮಿ ಬಾರಮ್ಮ ಧಾರಾವಾಹಿ ನಂತರ ಅನೇಕ ಟಿವಿ ಶೋಗಳು ಮತ್ತು ಗೆಸ್ಟ್ ಅಪಿಯರೆನ್ಸ್ ಮಾಡಿದ ನಂತರ ನೇಹಾ ಇದೀಗ ತಮಿಳು ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ.