ಮಂಗಳೂರು(ಫೆ. 02) ಕನ್ನಡ ಕೋಗಿಲೆ ಖ್ಯಾತಿಯ ಗಾಯಕಿ ಅಖಿಲಾ ಪಜಿಮಣ್ಣು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಧನಂಜಯ್ ಶರ್ಮಾ ಎಂಬುವರ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ. ನಿಶ್ಚಿತಾರ್ಥದ ವಿಡಿಯೋ ಮತ್ತು ಪೋಟೋವನ್ನು ಅಖಿಲಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆ ಹರಿದು ಬಂದಿದೆ. ಎಲ್ಲರಿಗೂ ಅಖಿಲಾ ಹಾಗೂ ಧನಂಜಯ್ ಧನ್ಯವಾದ ತಿಳಿಸಿದ್ದಾರೆ. ಅಖಿಲಾ ಪ್ರಶಸ್ತಿ ಗೆಲ್ಲಲ್ಲಿಲ್ಲವಾದರೂ ಅಪಾರ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. ಹಳೆಯ ಹಾಡುಗಳನ್ನು ಅಖಿಲಾ ಸುಶ್ರಾವ್ಯವಾಗಿ ಪ್ರಸ್ತುತಪಡಿಸುತ್ತಾರೆ. ಕನ್ನಡ ಕೋಗಿಲೆಯ ನಂತರ ಶೋಗಳಲ್ಲಿ ಬ್ಯುಸಿಯಾದರು. ಯೂಟ್ಯೂಬ್ ಮೂಲಕವೂ ಅಭಿಮಾನಿಗಳನ್ನು ತಲುಪುವ ಕೆಲಸ ಮಾಡಿದರು. ಕಿರುತೆಯೆಯಲ್ಲಿಯೂ ನಿರೂಪಕಿಯಾಗಿನ ಅಖಿಲಾ ಕಾಣಿಸಿಕೊಂಡರು. ಅಜ್ಜಿ ಸೀರೆಯಲ್ಲಿ ಅಖಿಲಾ ಕಾಣಿಸಿಕೊಂಡಿದ್ದರು. ಹೊಸ ಜೋಡಿಗೆ ನಮ್ಮ ಕಡೆಯಿಂದಲೂ ಶುಭಾಶಯ Kannada Kogile Singer Akhila Pajimannu got Engaged to Dhanajnay Sharma Mangaluru Puttur ಹೊಸ ಬಾಳಿನ ಹಾದಿಯಲ್ಲಿ ಕನ್ನಡ ಕೋಗಿಲೆ ಅಖಿಲಾ