'ನಮಸ್ಕಾರ, ನಮ್ಮ ಮಗ ಇಂದು ಬೆಳಿಗ್ಗೆ ಜನಿಸಿದ್ದಾನೆ. ದೇವರ ದಯೆಯಿಂದ ಮಗು ತಾಯಿ ಇಬ್ಬರೂ ಚೆನ್ನಾಗಿದ್ದಾರೆ. ನಿಮ್ಮೆಲ್ಲರ ಪ್ರೀತಿಗೆ ತುಂಬಾ ಧನ್ಯವಾದಗಳು. ಆಶೀರ್ವಾದ ಮತ್ತು ಪ್ರಾರ್ಥನೆಗಳು, ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ ಗಿನ್ನಿ ಮತ್ತು ಕಪಿಲ್ ಕೃತಜ್ಞತೆ' ಎಂದು ಕಪಿಲ್ ಶರ್ಮಾ ಟ್ವೀಟ್ ಮಾಡಿದ್ದಾರೆ.
undefined
ಸ್ವಲ್ಪ ದಿನಗಳ ಮೊದಲು, ಗಿನ್ನಿ ಮತ್ತೆ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿಯನ್ನು ಕಪಿಲ್ ಅಭಿಮಾನಿಗಳೊಂದಿಗೆ ಹಂಚಿಕೊಂಡರು. ಟ್ವಿಟರ್‌ನಲ್ಲಿ #Askkapil ಸಮಯದಲ್ಲಿ,'ಕಪಿಲ್ ಶರ್ಮಾ ಶೋ ಏಕೆ ಪ್ರಸಾರ ಮಾಡುತ್ತಿಲ್ಲ?' ಎಂದು ಅಭಿಮಾನಿಯೊಬ್ಬರು ಕೇಳಿದರು.
undefined
ಇದಕ್ಕೆ ಪ್ರತಿಕ್ರಿಯೆಯಾಗಿ ಕಪಿಲ್ ಶರ್ಮಾ, 'ಏಕೆಂದರೆ ನಾನು ಇನ್ನೊಂದು ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದೇನೆ..ಹೆಂಡತಿಯೊಂದಿಗೆ ಸಮಯ ಕಳೆಯಬೇಕಾಗಿದೆ.. ಹಾಗಾಗಿ ಶೋ ನಿಲ್ಲಿಸುತ್ತಿದ್ದೇನೆ' ಎಂದಿದ್ದರು.
undefined
ಕಪಿಲ್ ಶರ್ಮಾ ಮಗಳು ಅನೈರಾಳ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅನೈರಾಜನಿಸಿದ್ದು ಡಿಸೆಂಬರ್ 10, 2019 ರಂದು.
undefined
ಕಪಿಲ್ ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಇದನ್ನು ವಿಡಿಯೋ ಮೂಲಕ ಅನೌನ್ಸ್ ಮಾಡಿದ್ದಾರೆ.
undefined
ಕಾರಣಾಂತರಗಳಿಂದ ಕಪಿಲ್ ಶರ್ಮಾ ಶೋ ನಿಲ್ಲಲಿದೆ ಎಂಬ ಸುದ್ದಿ ಬಂದಿದ್ದರೂ ಖಾಸಗಿ ಚಾನಲ್ ಅದನ್ನು ದೃಢಪಡಿಸಿರಲಿಲ್ಲ.
undefined
ಕಪಿಲ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಹೈಂಡ್ ದಿ ಜೋಕ್ಸ್ ವಿತ್ ಕಪಿಲ್ ಎಂಬ ಸರಣಿಯನ್ನು ಸಹ ಪ್ರಾರಂಭಿಸಿದ್ದಾರೆ.
undefined
2018 ರ ಡಿಸೆಂಬರ್‌ನಲ್ಲಿ ಕಪಿಲ್ ಮತ್ತು ಗಿನ್ನಿ ದಾಂಪತ್ಯ ಜೀವನ ಪ್ರಾರಂಭಿಸಿದ್ದರು. ಇವರಿಬ್ಬರ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
undefined