ಮಾಡರ್ನ್ ಡ್ರೆಸಲ್ಲಿ ವೈಷ್ಣವಿಗೌಡ, ಸೀತಮ್ಮಾ ಏನಮ್ಮಾ ನಿನ್ ಕಥೆ ಎಂದ ಫ್ಯಾನ್ಸ್!

First Published | Sep 22, 2023, 8:03 PM IST

ಸೀತಾರಾಮ ಸೀರಿಯಲ್‌ ಜೀ ಕನ್ನಡದಲ್ಲಿ ಟಿಆರ್‌ಪಿಯಲ್ಲೂ, ಜನಪ್ರಿಯತೆಯಲ್ಲೂ ಮುಂದಿರೋ ಸೀರಿಯಲ್ ಆಗಿದೆ. ಈ ಸೀರಿಯಲ್‌ನಲ್ಲಿ ಸದ್ಯಕ್ಕೀಗ ಸೀತಾ (ವೈಷ್ಣವಿಗೌಡ) ಬಹಳ ಕಷ್ಟದಲ್ಲಿದ್ದಾಳೆ. ಆದರೆ, ನಿಜ ಜೀವನದಲ್ಲಿ ವೈಷ್ಣವಿ ಫುಲ್‌ ಎಂಜಾಜ್‌ ಮಾಡುತ್ತಿದ್ದಾಳೆ.

ಸೀತಾ ರಾಮ ಧಾರಾವಾಹಿಯಲ್ಲಿ ಗಣೇಶ ಹಬ್ಬವನ್ನು ಮುಗಿಸಿದ ಬೆನ್ನಲ್ಲಿಯೇ ನಟಿ ವೈಷ್ಣವಿಗೌಡ ಹೊಸದಾಗಿ ಫೋಟೋ ಶೂಟ್‌ ಮಾಡಿಸಿಕೊಂಡಿದ್ದು, ತಮ್ಮ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸೀತಾರಾಮ ಸೀರಿಯಲ್‌ ಜೀ ಕನ್ನಡದಲ್ಲಿ ಟಿಆರ್‌ಪಿಯಲ್ಲೂ, ಜನಪ್ರಿಯತೆಯಲ್ಲೂ ಮುಂದಿರೋ ಸೀರಿಯಲ್ ಆಗಿದೆ. ಈ ಸೀರಿಯಲ್‌ನಲ್ಲಿ ಸದ್ಯಕ್ಕೀಗ ಸೀತಾ (ವೈಷ್ಣವಿಗೌಡ) ಬಹಳ ಕಷ್ಟದಲ್ಲಿದ್ದಾಳೆ. ಆದರೆ, ನಿಜ ಜೀವನದಲ್ಲಿ ವೈಷ್ಣವಿ ಫುಲ್‌ ಎಂಜಾಜ್‌ ಮಾಡುತ್ತಿದ್ದಾಳೆ.

Tap to resize

ಇನ್ನು ತೋಳಿಲ್ಲದ ಸಿಲ್ವರ್‌ ಕಲರ್ ಡ್ರೆಸ್‌ ಧರಿಸಿ ಪೋಟೋಗೆ ಪೋಸ್‌ ಕೊಟ್ಟಿರುವ ವೈಷ್ಣವಿಗೌಡ ಅವರ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಇವರ ಡ್ರೆಸ್‌ಗಿಂತಲೂ ಮುಖ ಮೇಲಿನ ಮೂಗುತಿಯೇ ಹೆಚ್ಚು ಆಕರ್ಷಣೀಯವಾಗಿದೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ವೈಷ್ಣವಿಗೌಡ ಅವರ ಮೂಗುತಿ ನೋಡಿದ ನೆಟ್ಟಿಗರು ನೀವು ಕನ್ನಡ ಧಾರಾವಾಹಿ ಉದ್ಯಮದ ನಿಜವಾದ ಮೂಗುತಿ ಸುಂದರಿ ಎಂದು ಹಾಡಿ ಹೊಗಳಿದ್ದಾರೆ.

ಧಾರಾವಾಹಿಯಲ್ಲಿ ಸದಾ ಸಿಂಪಲ್‌ ಆಗಿ ಕಾಣುವ ನಿಮ್ಮನ್ನು ಹಾಟ್‌ ಡ್ರೆಸ್‌ನಲ್ಲಿ ನೋಡಿದ ನನ್ನ ಹೃದಯ ಕರಗಿ ಹೋಗುತ್ತಿದೆ. ಇದಕ್ಕೆ ಕಾರಣ ನೀವೊಬ್ಬ ಸ್ಟೈಲ್‌ ಐಕಾನ್‌ ಎಂದು ಕಮೆಂಟ್‌ ಮಾಡಿದ್ದಾರೆ.

ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುವ ವೈಷ್ಣವಿ ಆಗಿಂದಾಗ್ಗೆ ಹೊಸ ಹೊಸ ಫೋಟೋ, ರೀಲ್ಸ್, ವೀಡೀಯೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ (Instagram Account) ಶೇರ್ ಮಾಡುತ್ತಾ, ಜನರಿಗೆ ಹತ್ತಿರವಾಗುತ್ತಿದ್ದಾರೆ. ಇದೀಗ ನಟಿ ಒಂದಷ್ಟು ಫೋಟೋಗಳನ್ನು ಮತ್ತೆ ಶೇರ್ ಮಾಡಿದ್ದಾರೆ. 

ಈ ಹಿಂದೆ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಮಿಂಚಿದ್ದ ವೈಷ್ಣವಿ ಗೌಡ ಈಗ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಸೀರಿಯಲ್ (Sita Rama Serial) ನಲ್ಲಿ ಮುದ್ದು ಸಿಹಿಯ ಸೀತಮ್ಮನಾಗಿ ನಟಿಸಿ ಪ್ರೇಕ್ಷಕರ ಮನಸ್ಸನ್ನು ಮತ್ತೊಮ್ಮೆ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಸೀತಾ ರಾಮ ಸೀರಿಯಲ್ ಬಗ್ಗೆ ಹೇಳೋದಾದ್ರೆ, ಅಗ್ನಿ ಸಾಕ್ಷಿ ಸೀರಿಯಲ್ ನಂತರ ಸೀರಿಯಲ್ ನಿಂದ ದೂರವೇ ಇದ್ದ ನಟಿ ವೈಷ್ಣವಿಗೆ ಈ ಸೀರಿಯಲ್ ಸಹ ಬಹು ದೊಡ್ಡ ಹಿಟ್ ಕೊಡಲಿದೆ ಎಂದರೆ ತಪ್ಪಾಗಲ್ಲ.

Latest Videos

click me!