6 ವರ್ಷ ಇದ್ದಾಗಲೇ 200 ಕಾರು ಹೆಸರು ಗೊತ್ತಿತ್ತು; ಧಾರಾವಾಹಿ ನಟ ದರ್ಶಕ್ ಬೈಕ್‌ ಕ್ರೇಜ್!

Published : Apr 05, 2022, 02:31 PM IST

ಬೆಟ್ಟದ ಹೂ ಧಾರಾವಾಹಿ ನಟ ದರ್ಶಕ್‌ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬೈಕ್ ಕ್ರೇಜ್‌ ಮತ್ತು ಲಾಂಗ್‌ ಡ್ರೈವ್ ಜರ್ನಿ ಬಗ್ಗೆ ಬರೆದುಕೊಂಡಿದ್ದಾರೆ. 

PREV
17
6 ವರ್ಷ ಇದ್ದಾಗಲೇ 200 ಕಾರು ಹೆಸರು ಗೊತ್ತಿತ್ತು; ಧಾರಾವಾಹಿ ನಟ ದರ್ಶಕ್ ಬೈಕ್‌ ಕ್ರೇಜ್!

 ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೆಟ್ಟದ ಹೂ ಧಾರಾವಾಹಿ ನಟಿ ರಾಹುಲ್ ಉರ್ಫ್ ದರ್ಶಕ್‌ ಬೈಕ್ ಕ್ರೇಜ್‌ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 

27

'ನೀವು ನನ್ನನ್ನು ಕೇಳಿದರೆ, ದೇಶದಲ್ಲಿ ಆಗಿರುವ ಬೆಸ್ಟ್‌ ಆವಿಷ್ಕಾರವೆಂದರೆ ವೀಲ್ಸ್‌ಗಳು. ಮತ್ತು ಸುಂದರವಾದ ಯಂತ್ರಗಳನ್ನು ರಚಿಸಲು ಅವುಗಳನ್ನು ಒಟ್ಟಿಗೆ ಸೇರಿಸಲು ಯೋಚಿಸಿದವನು ನಿಜವಾಗಿಯೂ ಪ್ರತಿಭೆ' ಎಂದು ದರ್ಶಕ್ ಬರೆದುಕೊಂಡಿದ್ದಾರೆ.

37

 'ನಾನು ಮೋಟರ್‌ಹೆಡ್‌. ಸುಮಾರು 6 ವರ್ಷದ ಹುಡುಗ ಇದ್ದಾಗ ನನಗೆ 200ಕ್ಕೂ ಹೆಚ್ಚು ಕಾರುಗಳ ಹೆಸರು ನೆನಪಿತ್ತು. ಕಾಲೇಜು ದಿನಗಳಲ್ಲಿ ನಾನು ಬೈಕ್‌ ಬಗ್ಗೆ ಹೆಚ್ಚಿಗೆ ತಿಳಿದುಕೊಂಡಿದ್ದು'

47

'ಕಾಲೇಜಿನಲ್ಲಿ ನಾನು ಪಾಕೆಟ್‌ಮನಿ ಸೇವ್‌ ಮಾಡಿಕೊಂಡು ಬೈಕ್ ಮ್ಯಾಗಜಿನ್‌ ಖರೀದಿ ಮಾಡುತ್ತಿದ್ದೆ. ಇಂಜಿನಿಯರಿಂಗ್ ಕೊನೆ ವರ್ಷದಲ್ಲಿ ಮೊದಲ ಬೈಕ್‌ ಖರೀದಿಸಿದ್ದು'

57

 '250cc ಸಿಂಗಲ್ ಸಿಲಿಂಡರ್ ಹೋಂಡಾ CBR 250R ಅದಾಗಿತ್ತು. ತುಂಬಾ ಹಠ ಮಾಡಿದ ನಂತರ ತಾಯಿ ತನ್ನ ಪ್ರೀತಿಯ ಮಗನಿಗೆ ಕೊಟ್ಟ ಉಡುಗೊರೆ ಅದು'

67

'ನನ್ನ ದಿನ ಎಷ್ಟೇ ಕೆಟ್ಟದಾಗಿದ್ದರೂ ನನ್ನ ಬೈಕುಗಳು ಸದಾ ಉತ್ತಮ ಭಾವನೆ ಕೊಡುತ್ತದೆ. ಬೈಕ್‌ ಮೇಲೆ ಸವಾರಿ ಮಾಡುವಾಗ ನಾನು ಸದಾ ನಗುತ್ತಿರುವೆ' 

77

 ಪ್ರತಿ ಬೈಕ್ ಫೋಟೋ ಅಪ್ಲೋಡ್ ಮಾಡಿದಾಗ ತಪ್ಪದೆ ಹೆಲ್ಮೆಟ್ ಧರಿಸಿ ಜಾಗೃತೆಯಿಂದ ಬೈಕ್ ಓಡಿಸಿ ಎಂದು ಬರೆಯುತ್ತಾರೆ. ದರ್ಶಕ್‌ ಪತ್ನಿ ಕೂಡ ಬೈಕ್‌ ರೈಡ್‌ಗೆ ಸಪೋರ್ಟ್ ಮಾಡುತ್ತಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories