2ನೇ ಗಂಡ, ಮಗನೊಟ್ಟಿಗೆ ಹೊಸ ಫೋಟೋ ಶೇರ್ ಮಾಡಿದ ನಟಿ ಜ್ಯೋತಿ ರೈ

Published : Oct 07, 2023, 02:41 PM IST

ಕನ್ನಡ ಸೀರಿಯಲ್ ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಜ್ಯೋತಿ ರೈ, ಸದ್ಯ ತಮ್ಮ ಮೇಕ್ ಓವರ್ ಮತ್ತು ಎರಡನೇ ಮದುವೆಯಿಂದಾಗಿ ಭಾರಿ ಸುದ್ದಿಯಲ್ಲಿದ್ದಾರೆ. ಇದೀಗ ತಮ್ಮ ಮಗ ಮತ್ತು ಎರಡನೇ ಪತಿ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ.   

PREV
18
2ನೇ ಗಂಡ, ಮಗನೊಟ್ಟಿಗೆ ಹೊಸ ಫೋಟೋ ಶೇರ್ ಮಾಡಿದ ನಟಿ ಜ್ಯೋತಿ ರೈ

ಜ್ಯೋತಿ ರೈ (Jyoti Rai) ಹೆಸರು ಕಳೆದ ಕೆಲವು ಸಮಯದಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸದಾ ಸೀರಿಯಲ್ ಗಳಲ್ಲಿ ಸಾಂಪ್ರದಾಯಿಕ ಲುಕ್ ನಲ್ಲಿ ಕಾಣಿಸುತ್ತಿದ್ದ ಜ್ಯೋತಿ ರೈ ಈಗಂತೂ ಮಾಡರ್ನ್ ಡ್ರೆಸ್ ನಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ತಮ್ಮ ಲುಕ್‌ನಿಂದಾನೆ ಎಲ್ಲರ ಗಮನ ಸೆಳೆಯುತ್ತಿದ್ದಾರೆ. 

28

ತಮ್ಮ ಮೇಕ್ ಓವರ್ ಜೊತೆಗೆ ತಮ್ಮ ಪರ್ಸನಲ್ ಲೈಫ್‌ನಿಂದಾನೂ ನಟಿ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಈಗಾಗಲೇ ಮದುವೆಯಾಗಿ ವಿಚ್ಚೇದನ ಪಡೆದಿದ್ದ ನಟಿ ಇದೀಗ ತೆಲುಗು ನಿರ್ದೇಶಕ ಪೂರ್ವಜ್ ಜೊತೆ ಮತ್ತೆ ಮದುವೆಯಾಗಿದ್ದು, ಇಬ್ಬರು ಜೊತೆಯಾಗಿರುವ ಸಾಕಷ್ಟು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ.
 

38

ಇದೀಗ ನಟಿ ತಮ್ಮ ಪುತ್ರ ಮತ್ತು ಪತಿ ಪೂರ್ವಜ್ ಜೊತೆಗಿನ ಮುದ್ದಾದ ಫ್ಯಾಮಿಲಿ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಹೌದು ನಟಿಗೆ ಮೊದಲ ಮದುವೆಯಲ್ಲಿ ಈಗಾಗಲೇ ಒಬ್ಬ ಮಗನಿದ್ದು, ಆತನಿಗೆ 10 ವರ್ಷ ವಯಸ್ಸು.
 

48

ನಟಿ ಈ ಹಿಂದೆಯೇ ತಮ್ಮ ಮಗನಿಗೆ ಆಟಿಸಂ ಸಮಸ್ಯೆ (Autism problem) ಇರೋದಾಗಿ ಹೇಳಿದ್ದರು. ಆದರೆ ಮಗನಿಗೆ ಪೂರ್ಣ ಪ್ರಮಾಣದ ಸಮಸ್ಯೆ ಇಲ್ಲ. ಸಣ್ಣ ಪ್ರಮಾಣದಲ್ಲಿ ಆಟಿಸಂ ಸಮಸ್ಯೆ ಇದೆ. ಮಗನಿಗೆ ಊರ್ವೇಶ್ ಎಂದು ಹೆಸರಿಟ್ಟಿದ್ದಾರೆ. 
 

58

ನಟಿ ಇದೀಗ ತಮ್ಮ ಮಗನ ಜೊತೆಗೆ ಮತ್ತು ಎರಡನೆ ಪತಿ ಪೂರ್ವಜ್ ಜೊತೆಗೆ ಔಟಿಂಗ್ ಮಾಡಿದ್ದು, ತಾವು ಕಳೆದಿರುವ ತಮ್ಮ ಪುಟ್ಟ ಕುಟುಂಬದ ಜೊತೆಗೆ ಕಳೆದಿರುವ ಮುದ್ದಾದ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.
 

 

68

ನಟಿ ಜ್ಯೋತಿ ರೈ ಬಗ್ಗೆ ಹೇಳೋದಾದ್ರೆ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಜ್ಯೋತಿ ಅವರಿಗೆ ಡಿಗ್ರಿ ಮುಗಿಯುತ್ತಿದ್ದಂತೆ 20ನೇ ವಯಸ್ಸಲ್ಲೆ ಮದುವೆಯಾಗಿತ್ತು. ತಮ್ಮ 21ನೇ ವರ್ಷಕ್ಕೆ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಇಲ್ಲಿವರೆಗೂ ಸಿನಿಮಾ, ಕಿರುತೆರೆಯಲ್ಲಿ ಹಲವು ಪಾತ್ರಗಳಲ್ಲಿ ಮಿಂಚಿ ಸೈ ಎನಿಸಿಕೊಂಡಿದ್ದಾರೆ. 
 

78

ಅನುರಾಗ ಸಂಗಮ, ಜೋಗುಳ, ಗೆಜ್ಜೆಪೂಜೆ, ಲವಲವಿಕೆ, ಕನ್ಯಾದಾನ, ಪ್ರೇರಣಾ, ಕಿನ್ನರಿ,  ಕಸ್ತೂರಿ ನಿವಾಸ ಮುಂತಾದ 18ಕ್ಕೂ ಹೆಚ್ಚು ಕನ್ನಡ ಮತ್ತು ತೆಲುಗು ಧಾರಾವಾಹಿ ಹಾಗೂ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. 

88

ಇತ್ತೀಚಿನ ದಿನಗಳಲ್ಲಿ ಸೀರಿಯಲ್ ಗಳಲ್ಲಿ ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಜ್ಯೋತಿ ರೈ ಇದೀಗ ಸೀರಿಯಲ್‌ಗಳಿಗೆ ಗುಡ್ ಬೈ ಹೇಳಿ, ವೆಬ್ ಸೀರೀಸ್‌ಗಳತ್ತ ಮುಖ ಮಾಡಿದ್ದಾರೆ. ತಮ್ಮ ಹೊಸ ವೆಬ್ ಸೀರಿಸ್‌ಗಳ ಫೋಟೋಗಳನ್ನು ಸಹ ನಟಿ ಶೇರ್ ಮಾಡಿದ್ದು, ತುಂಬಾ ಬೋಲ್ಡ್ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

Read more Photos on
click me!

Recommended Stories