ಇನ್‌ಫ್ಲುಯೆನ್ಸರ್‌ನ್ನು ಮಂಚಕ್ಕೆ ಕರೆದ್ನಾ ಮಾಜಿ ಬಿಗ್ ಬಾಸ್ ಸ್ಪರ್ಧಿ? ಚಾಟ್ ಸ್ಕ್ರೀನ್‌ಶಾಟ್ ಲೀಕ್

Published : Jan 16, 2026, 11:18 PM IST

ಇನ್‌ಫ್ಲುಯೆನ್ಸರ್‌ನ್ನು ಮಂಚಕ್ಕೆ ಕರೆದ್ನಾ ಮಾಜಿ ಬಿಗ್ ಬಾಸ್ ಸ್ಪರ್ಧಿ? ಚಾಟ್ ಸ್ಕ್ರೀನ್‌ಶಾಟ್ ಲೀಕ್, ಸೋಶಿಯಲ್ ಮೀಡಿಯ ಮೂಲಕ ಇನ್‌ಫ್ಲುಯೆನ್ಸರ್ ಚಾಟ್ ಸ್ಕ್ರೀನ್‌ಶಾಟ್ ಲೀಕ್ ಮಾಡಿದ್ದಾರೆ. ಇದರೊಂದಿಗೆ ಕೋಲಾಹಲವೇ ಎದ್ದಿದೆ. 

PREV
15
ಬಿಗ್ ಬಾಸ್ ಮಾಜಿ ಸ್ಪರ್ಧಿಯ ಕಿತಾಪತಿ

ಬಿಗ್ ಬಾಸ್ ಮಾಜಿ ಸ್ಪರ್ಧಿಯ ಅಸಲಿಯತ್ತು ಬಹಿರಂಗವವಾಗಿದೆ. ಇನ್‌ಫ್ಲುಯೆನ್ಸರ್‌ಗೆ ಮಾಡಿದ ಮೆಸೇಜ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪರೋಕ್ಷವಾಗಿ ಮಹಿಳಾ ಇನ್‌ಪ್ಲುಯೆನ್ಸರ್‌ನ್ನು ಬಿಗ್ ಬಾಸ್ ಮಾಜಿ ಸ್ಪರ್ಧಿ ಮಂಚಕ್ಕೆ ಕರೆದ್ರಾ ಅನ್ನೋ ಚರ್ಚೆಗಳು ಶುರುವಾಗಿದೆ.

25
ಸ್ಕ್ರೀನ‌್‌ಶಾಟ್ ಲೀಕ್

ಹಿಂದಿ ಬಿಗಾ ಬಾಸ್ 7ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದ ಸ್ಪರ್ಧಿ ಅಜಾಝ್ ಖಾನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೆಹಲಿಯ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಫಿಟ್ ವರ್ಶಾ ಅನ್ನೋ ಯುವತಿಗೆ ಮೆಸೇಜ್ ಮಾಡಿ ಕಿರುಕುಳ ನೀಡಿರುವುದು ಬಹಿರಂಗವಾಗಿದೆ. ಸ್ವತಃ ಫಿಟ್ ವರ್ಶಾ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಈ ವಿಚಾರ ಬಹಿರಂಗಪಡಿಸಿದ್ದಾರೆ.

35
ಬಿಗ್ ಬಾಸ್ ಸ್ಪರ್ಧಿಯ ಮೆಸೇಜ್ ಲೀಕ್

ಸೋಶಿಯಲ್ ಮೀಡಿಯಾದಲ್ಲಿ ಇನ್‌ಫ್ಲುಯೆನ್ಸರ್ ಫಿಟ್ ವರ್ಶಾ ವಿಡಿಯೋ ಮೂಲಕ ಅಜಾಝ್ ಖಾನ್ ಕಳುಹಿಸಿರುವ ಮೆಸೇಜ್‌ಗಳ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇದೇ ವೇಳೆ ಬಿಗ್ ಬಾಸ್ ಸ್ಪರ್ಧಿಯೊಬ್ಬರ ಮೆಸೇಜ್, ಅವರ ಅಸಲಿಯತ್ತು ಎಕ್ಸ್‌ಪೋಸ್ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

45
ನಾನು ದೆಹಲಿಯಲ್ಲಿದ್ದೇನೆ, ನಾವಿಬ್ಬರು ಸೇರಿ

ನಾನು ದೆಹಲಿಯಲ್ಲಿದ್ದೇನೆ, ನಾವಿಬ್ಬರು ಸೇರಿ ಮಾಡಬಹುದು, ಈಗಲೆ ಮಾತನಾಡು ಎಂದು ಮೆಸಜ್ ಕಳುಹಿಸಿದ್ದಾರೆ.ಇಷ್ಟೇ ಅಲ್ಲ ಮಾತನಾಡಲು ನಂಬರ್ ಕೂಡ ಹಂಚಿಕೊಂಡಿದ್ದಾರೆ. ಇತ್ತ ಅಜಾಝ್ ಖಾನ್ ಮೆಸೆಜ್ ನೋಡಿ ಗರಂ ಆದ ಫಿಟ್ ವರ್ಶಾ, ಗೆಟ್ ಲಾಸ್ಟ್ ಎಂದು ಮೆಸೇಜ್ ಮಾಡಿ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ.

ನಾನು ದೆಹಲಿಯಲ್ಲಿದ್ದೇನೆ, ನಾವಿಬ್ಬರು ಸೇರಿ

55
ಅಜಾಜ್ ಹಾಗೂ ಪತ್ನಿ ಪ್ರತಿಕ್ರಿಯೆ ಏನು

ಫಿಟ್ ವರ್ಶಾ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿರುವ ಸ್ಕ್ರೀನ್‌ಶಾಟ್ ಕುರಿತು ಬಿಗ್ ಬಾಸ್ ಮಾಜಿ ಸ್ಪರ್ಧಿ ಅಜಾಝ್ ಖಾನ್ ಆಗಲಿ ಅಥವಾ ಅಜಾಝ್ ಪತ್ನಿ ಆಯಿಷಾ ಖಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಸ್ಕ್ರೀನ್‌ಶಾಟ್‌ಗಳು ಕೋಹಾಲ ಸೃಷ್ಟಿಸಿದೆ.

ಅಜಾಜ್ ಹಾಗೂ ಪತ್ನಿ ಪ್ರತಿಕ್ರಿಯೆ ಏನು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories