ಬಿಗ್ ಬಾಸ್ ಮನೆಯಲ್ಲೂ ಹಾರಿದ ತಿರಂಗಾ; ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮಿಸಿದ ಸ್ಪರ್ಧಿಗಳು

First Published | Aug 15, 2022, 2:24 PM IST


ಬಿಗ್ ಬಾಸ್ ಮನೆಯಲ್ಲೂ ತಿರಂಗಾ ಹಾರಿದೆ. ಬಿಗ್ ಬಾಸ್ ಒಟಿಟಿ ಕನ್ನಡ ಪ್ರಾರಂಭವಾಗಿ ಒಂದು ವಾರವಾಗಿದೆ. ಈಗಾಗಲೇ ಒಬ್ಬರು ಸ್ಪರ್ಧಿ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಸ್ಪರ್ಧಿಗಳು ಎರಡನೇ ವಾರಕ್ಕೆ ಕಾಲಿಟ್ಟಿದ್ದಾರೆ. ಇಂದು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಸ್ವಾತಂತ್ರ್ಯ ದಿನಚಾರಣೆ ಆಚರಿಸಿದ್ದಾರೆ. 

ದೇಶದಾದ್ಯಂತ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮನೆ ಮನದಲ್ಲೂ ತ್ರಿವರ್ಣ ಧ್ವಜ ಹಾರುತ್ತಿದೆ. 75ನೇ ಸ್ವಾತಂತ್ರ್ಯದ ಅಮೃತಮಹೋತ್ಸವ ಘಳಿಗೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕರೆಕೊಟ್ಟಿರುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ದೇಶದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿಯೊಬ್ಬರು ಮನೆಮೇಲೆ ರಾಷ್ಟ್ರಧ್ವಜ ಹಾರಿಸಿ ದೇಶಕ್ಕೆ ಗೌರವ ಸಲ್ಲಿಸಿದ್ದಾರೆ. 
 

ಬಿಗ್ ಬಾಸ್ ಮನೆಯಲ್ಲೂ ತಿರಂಗಾ ಹಾರಿದೆ. ಬಿಗ್ ಬಾಸ್ ಒಟಿಟಿ ಕನ್ನಡ ಪ್ರಾರಂಭವಾಗಿ ಒಂದು ವಾರವಾಗಿದೆ. ಈಗಾಗಲೇ ಒಬ್ಬರು ಸ್ಪರ್ಧಿ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಸ್ಪರ್ಧಿಗಳು ಎರಡನೇ ವಾರಕ್ಕೆ ಕಾಲಿಟ್ಟಿದ್ದಾರೆ. ಇಂದು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಸ್ವಾತಂತ್ರ್ಯ ದಿನಚಾರಣೆ ಆಚರಿಸಿದ್ದಾರೆ. 

Tap to resize

ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ತಿರಂಗಾ ಹಾರಿಸಿದ್ದಾರೆ. ಸಂಭ್ರಮದಿಂದ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಿದ್ದಾರೆ. ಕೆಲವರು ಕೇಸರಿ, ಬಳಿ, ಹಸಿರು ಬಟ್ಟೆ ಧರಿಸಿದ್ದರು. ಇನ್ನು ಕೆಲವರು ಬಿಳಿ ಬಟ್ಟೆ ಧರಿಸಿ ತಿರಂಗಾ ಹಾರಿಸಿ ದೇಶಕ್ಕೆ ಗೌರವ ಸಲ್ಲಿಸಿದರು. 

ಬಿಗ್ ಬಾಸ್ ಮನೆಯ ಸ್ವಾತಂತ್ರ್ಯೋತ್ಸವ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ವೇಳೆ ಅನೇಕರು ಅನೇಕ ಚಟುವಟಿಗಳನ್ನು ಮಾಡಿದರು. ಅಕ್ಷತಾ ನೃತ್ಯ ಮಾಡಿ ಗಮನಸೆಳೆದರೇ, ರೂಪೇಶ್ ವಿಶೇಷ ಹಾಡಿನ ಮೂಲಕ ಎಲ್ಲರ ಮನಗೆದ್ದರು. 
 

ಬಿಗ್ ಬಾಸ್ ಮನೆಯಲ್ಲೂ ಸ್ವಾತಂತ್ರ್ಯ ದಿನೋತ್ಸವ ಸಂಭ್ರಮಿಸಿರುವುದು ಅನೇಕರ ಮೆಚ್ಚುಗೆಗೆ ಗಳಿದೆ. ಇದೇ ಮೊದಲ ಬಾರಿಗೆ ಬಿಗ್ ಮನೆಯಲ್ಲಿ ತಿರಂಗಾ ಹಾರಿಸಲಾಗಿದೆ. 
 

ಸದ್ಯ ಬಿಗ್ ಬಾಸ್ ಮನೆಯಲ್ಲಿ ಒಟ್ಟು 15 ಸ್ಪರ್ಧಿಗಳಿದ್ದಾರೆ. ಒಟ್ಟು 16 ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರಿದ್ದರು. ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್ ಆಗಿ ಹೊರಹೋಗಿದ್ದಾರೆ. ಇದೀಗ ಎರಡನೇ ವಾರಕ್ಕೆ ಬಿಗ್ ಬಾಸ್ ಕಾಲಿಟ್ಟಿದ್ದು ಈ ವಾರ ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು ಎನ್ನುವ ಮೂಡಿಸಿದೆ. 

ಮೊದಲ ವಾರ ಅರ್ಜುನ್ ಕ್ಯಾಪ್ಟನ್ ಆಗಿದ್ದರು. ಈ ಮೂಲಕ ಬಿಗ್ ಬಾಸ್ ಒಟಿಟಿಯ ಮೊದಲ ಕ್ಯಾಪ್ಟನ್ ಎನ್ನುವ ಹೆಗ್ಗಳಿ ಪಡೆದಿದ್ದರು. ಇದೀಗ 2ನೇ ವಾರ ಕ್ಯಾಪ್ಟನ್ ಪಟ್ಟ ಯಾರಿಗೆ ಸಿಗಲಿದೆ ಎಂದು ಕಾದುನೋಡಬೇಕು.   

Latest Videos

click me!