ಗಿಣಿರಾಮ ನಟಿಗೆ ಕೂಡಿ ಬಂದ ಕಂಕಣ ಭಾಗ್ಯ., ಸೈನಿಕನ ವರಿಸಿದ ಕಾವೇರಿ

First Published | Mar 1, 2024, 3:26 PM IST

ಗಿಣಿರಾಮ ಧಾರಾವಾಹಿಯಲ್ಲಿ ಸೀಮಾ ಆಗಿ ಅದ್ಭುತವಾಗಿ ಅಭಿನಯಿಸಿದ್ದ ನಟಿ ಕಾವೇರಿ ಬಾಗಲಕೋಟೆ ತಮ್ಮ ಬಹುಕಾಲದ ಗೆಳೆಯ ಸೈನಿಕ ವಿಠಲ್ ಜೊತೆ ಸಪ್ತಪದಿ ತುಳಿದಿದ್ದಾರೆ. 
 

ಕಲರ್ಸ್ ಕನ್ನಡ (colors kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿಣಿರಾಮ ಧಾರಾವಾಹಿಯಲ್ಲಿ ನಾಯಕ ಶಿವರಾಮನ ತಂಗಿ ಸೀಮಾ ಪಾತ್ರದಲ್ಲಿ ಮಿಂಚಿದ್ದ ನಟಿ ಕಾವೇರಿ ಭಾಗಲಕೋಟೆ. ತಮ್ಮ ಅಂದದ ಜೊತೆ ಅಭಿನಯದಿಂದ ಕನ್ನಡಿಗರ ಮನಸ್ಸು ಗೆದ್ದಿದ್ದರು. 
 

ನಟಿ ಮತ್ತು ಮೇಕಪ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿರುವ ಕಾವೇರಿ (Kaveri Bagalkote) ಕಳೆದ ಫೆಬ್ರವರಿ 26ರಂದು ಬಾಗಲಕೋಟೆಯಲ್ಲಿ  ತಾವು 8 ವರ್ಷಗಳಿಂದ ಲವ್ ಮಾಡುತ್ತಿದ್ದ, ಸೈನಿಕ ವಿಠ್ಠಲ್ ಹಿರಣ್ಣನವರ್ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ.
 

Tap to resize

ಗಿಣಿರಾಮ (Ginirama) ಸೀರಿಯಲ್ ಅರ್ಧದಲ್ಲೇ ಬಿಟ್ಟಿದ್ದ ಕಾವೇರಿ ಸದ್ಯ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಇವರು ತಮ್ಮ ಸ್ನೇಹಿತರು ಮತ್ತು ಭಾವಿ ಪತಿಯ ಜೊತೆಗೆ ಬ್ಯಾಚುಲರ್ ಪಾರ್ಟಿ ಮಾಡಿ ಸಂಭ್ರಮಿಸಿದ್ದರು. 
 

ಅಷ್ಟೇ ಅಲ್ಲ ಅದ್ದೂರಿಯಾಗಿ ಪ್ರಿ ವೆಡ್ಡಿಂಗ್ ಫೋಟೋಶೂಟ್ (pre wedding photoshoot) ಕೂಡ ಮಾಡಿಸಿಕೊಂಡಿದ್ದು, ತಮ್ಮ ಮದುವೆ ಡೇಟ್ ರಿವೀಲ್ ಮಾಡಲು ಇದೇ ಫೋಟೋಗಳನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. 
 

ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಕಾವೇರಿ ಸದ್ಯ ತಮ್ಮ ಮೇಕಪ್ ಬಗ್ಗೆ ಹೆಚ್ಚಿನ ರೀಲ್ಸ್ ಮಾಡಿ ಹಾಕುತ್ತಿರುತ್ತಾರೆ, ಅದರ ಜೊತೆ ಡ್ಯಾನ್ಸ್, ಸಿನಿಮಾ ಹಾಡಿಗೆ ರೀಲ್ಸ್ ಮಾಡಿ ಸಹ ಶೇರ್ ಮಾಡುತ್ತಿರುತ್ತಾರೆ. ತಮ್ಮ ಪತಿ ಜೊತೆಯೂ ಇವರು ಇಲ್ಲಿವರೆಗೆ ಹಲವು ವಿಡಿಯೋ ಮಾಡಿ ಶೇರ್ ಮಾಡಿದ್ದರು. 
 

ಮದುವೆಗೆ ಸುಮಾರು ತಿಂಗಳುಗಳ ಹಿಂದೆಯೇ ಇವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪ್ರೀತಿ ಬಗ್ಗೆ ಮಾತನಾಡಿದ್ದ ನಾನು ಸೈನಿಕನ ಪತ್ನಿ ಆಗುವವಳು ಅಂತ ಹೇಳಲು ಹೆಮ್ಮೆ ಆಗುತ್ತದೆ ಎಂದು ಹೇಳಿಕೊಂಡಿದ್ದರು. 
 

ಉತ್ತರ ಕರ್ನಾಟಕದ ಕಥೆಯನ್ನು ಹೊಂದಿದ್ದ ರಿತ್ವಿಕ್ ಮಠದ್, ನಯನಾ ನಾಗರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಗಿಣಿರಾಮ ಸೀರಿಯಲ್ ನಲ್ಲಿ ಆರಂಭದಲ್ಲಿ ಸೀಮಾ ಆಗಿ ಕಾವೇರಿ ಜನರ ಮೆಚ್ಚುಗೆ ಪಡೆದಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದ ಈ ಸೀರಿಯಲ್‌ ನ್ನು ಅರ್ಧದಲ್ಲೇ ಬಿಟ್ಟಿದ್ದರು. ಬಳಿಕ ತಮ್ಮ ಊರಾದ ಬಾಗಲಕೋಟೆಯಲ್ಲಿ ಮೇಕಪ್ ಆರ್ಟಿಸ್ಟ್ (makeup artist) ಆಗಿ ಕೆಲಸ  ಮಾಡುತ್ತಿದ್ದು, ತಮ್ಮದೇ ಆದ ಸ್ಟುಡಿಯೋ ಕೂಡ ಹೊಂದಿದ್ದಾರೆ. 

Latest Videos

click me!