ಜಿಮ್‌ ಮಾಡಿ ಮಂಡಿ ನೋವು ಹೆಚ್ಚಾಗಿದೆ, ಟೆನ್ಶನ್‌ಗೆ ತೂಕ ಹೆಚ್ಚಾಗಿದೆ: ಗೀತಾ ಭಾರತಿ ಭಟ್

First Published | Feb 5, 2024, 4:31 PM IST

ಇದ್ದಕ್ಕಿದ್ದಂತೆ ವರ್ಕೌಟ್ ನಿಲ್ಲಿಸಿದ ಗೀತಾ ಭಾರತಿ ಭಟ್. ಟೀಕೆ ಮಾಡುವ ಜನರಿಗೆ ರಿಯಾಲಿಟಿ ಏನೆಂದು ತಿಳಿಸಿದ ನಟಿ.

ಬ್ರಹ್ಮಗಂಟು ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಗೀತಾ ಭಾರತಿ ಭಟ್ ಈಗ ರವಿಕೆ ಪ್ರಸಂಗ ಸಿನಿಮಾದಲ್ಲಿ ಸಾನ್ವಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಧಾರಾವಾಹಿ ಮುಗಿದ ನಂತರ ಗೀತಾ ವರ್ಕೌಟ್ ಶುರು ಮಾಡಿಕೊಂಡು ಆರೋಗ್ಯದ ಕಡೆ ಗಮನ ಕೊಟ್ಟರು. ಇದ್ದಕ್ಕಿದ್ದಂತೆ ಲೆಕ್ಕ ಮಾಡಲಾಗದಷ್ಟು ತೂಕ ಕಳೆದುಕೊಂಡರು. ಈಗ ಅರ್ಧಕ್ಕೆ ನಿಲ್ಲಿಸಿದ್ದಾರೆ.

Tap to resize

 'ಸದ್ಯಕ್ಕೆ ನನ್ನ ಫಿಟ್ನೆ ಜರ್ನಿಗೆ ಸಣ್ಣ ಬ್ರೇಕ್ ಬಿದ್ದಿದೆ. ಕಾರಣ ಕೊಟ್ಟರೆ ಹಲವಾರು ಕೊಡಬಹುದು ಆದರೆ ಜನರು ಅದನ್ನು ಕಾರಣವಾಗಿ ನೋಡುತ್ತಾರೆ ಹೊರತು ರಿಯಾಲಿಟಿ ಏನೆಂದು ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ' ಎಂದು ಗೀತಾ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

'ನನಗೆ ಏನಾಗುತ್ತಿದೆ ಎಂದು ನನಗೆ ಮಾತ್ರ ಗೊತ್ತಿದೆ. ತುಂಬಾ ವರ್ಕೌಟ್ ಮಾಡಿ ನನಗೆ ಈಗ ಮಂಡಿ ನೋವಿದೆ ಶುರುವಾಗಿದೆ. ತುಂಬಾ ಡ್ಯಾಮೇಜ್ ಆಗಿಬಿಟ್ಟರೆ ವರ್ಕೌಟ್ ಮಾಡುವುದು ಇರಲಿ ನನಗೆ ಸರಿಯಾಗಿ ನಡೆಯುವುದಕ್ಕೂ ಆಗುವುದಿಲ್ಲ'

'ಇದೊಂದು ಕಾರಣ ಅಂದ್ರೆ ನನ್ನ ಫ್ಯಾಮಿಲಿಯಲ್ಲಿ ಕೆಲವೊಂದು ಜವಾಬ್ದಾರಿಗಳು ಇತ್ತು. ನನ್ನ ತಾಯಿಗೂ ಉಷಾರಿಲ್ಲದೆ ಸುಮಾರು ಆರು ತಿಂಗಳು ಆಯ್ತು ಅಲ್ಲಿ ನಾನು ಜವಾಬ್ದಾರಿ ತೆಗೆದುಕೊಂಡು ಮನೆಯಲ್ಲಿ ಇದ್ದು ಅವರನ್ನು ನೋಡಿಕೊಳ್ಳುವ ಪರಿಸ್ಥಿತಿ ಇದ್ದ.'

'ಈ ಕಾರಣಕ್ಕೆ ನಾನು ವರ್ಕೌಟ್ ಮಾಡಿಲ್ಲ ಯಾವ ಸಿನಿಮಾ ಪ್ರಾಜೆಕ್ಟ್‌ ಒಪ್ಪಿಕೊಂಡಿರಲಿಲ್ಲ. ಟೆನ್ಶನ್‌ನಿಂದಲೂ ಮತ್ತೆ ತೂಕ ಜಾಸ್ತಿಯಾಗಿರುವೆ ಆದರೆ ಈ ಜರ್ನಿ ಇಲ್ಲಿಗೆ ನಿಲ್ಲುವುದಿಲ್ಲ. ನಾನು ಮತ್ತೆ ಶುರು ಮಾಡುತ್ತೀನಿ' ಎಂದಿದ್ದಾರೆ ಗೀತಾ.

Latest Videos

click me!